
ಪುಷ್ಪ 2 ಸಿನಿಮಾ ಪ್ರದರ್ಶನದ ವೇಳೆ ತೆಲಂಗಾಣದ ಸಂಧ್ಯಾ ಥಿಯೇಟರ್ ನಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣದಲ್ಲಿ ಅಲ್ಲಿನ ಪೊಲೀಸರು ಅಲ್ಲು ಅರ್ಜುನ್ ಅವರನ್ನು ಬಂಧಿಸಿದ ಬಗ್ಗೆ ಆಂಧ್ರಪ್ರದೇಶ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಮೌನ ಮುರಿದಿದ್ದಾರೆ.
ಡಿ.30 ರಂದು ಮಂಗಳಗಿರಿಯಲ್ಲಿ ವರದಿಗಾರರೊಂದಿಗೆ ಮಾತನಾಡಿರುವ ಪವನ್ ಕಲ್ಯಾಣ್, ಅಲ್ಲು ಅರ್ಜುನ್ ಬಂಧನದ ವಿಷಯದಲ್ಲಿ ತೆಲಂಗಾಣ ಪೊಲೀಸರನ್ನು ದೂಷಿಸುವುದಿಲ್ಲ ಎಂದು ಹೇಳಿದ್ದು, ಕಾನೂನು ಎಲ್ಲರಿಗೂ ಒಂದೇ ಸಾರ್ವಜನಿಕ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಪೊಲೀಸರು ಕಾರ್ಯಾಚರಣೆ ನಡೆಸಬೇಕೆಂದು ಹೇಳಿದ್ದಾರೆ.
ಇದೇ ವೇಳೆ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರನ್ನು ಶ್ರೇಷ್ಠ ನಾಯಕ ("great leader") ಎಂದು ಹೇಳಿರುವ ಎನ್ ಡಿಎ ಮಿತ್ರಪಕ್ಷ ಜನಸೇನಾ ನಾಯಕ ಪವನ್ ಕಲ್ಯಾಣ್, ಕಾಲ್ತುಳಿತ ಸಂಭವಿಸುತ್ತಿದ್ದಂತೆಯೇ ಅಲ್ಲು ಅರ್ಜುನ್ ಸಂತ್ರಸ್ತೆಯ ಕುಟುಂಬದವರನ್ನು ಭೇಟಿ ಮಾಡಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.
ಅಲ್ಲು ಅರ್ಜುನ್ ತಮ್ಮ ಪುಷ್ಪ 2 ಚಿತ್ರ ಪ್ರದರ್ಶನಗೊಳ್ಳುತ್ತಿದ್ದ ಥಿಯೇಟರ್‌ಗೆ ಭೇಟಿ ನೀಡಿದ್ದರು. ಚಿತ್ರನಟರ ಭೇಟಿ ಗೊಂದಲಕ್ಕೆ ಕಾರಣವಾಗಿ ಕಾಲ್ತುಳಿತ ಉಂಟಾಗಿತ್ತು. ಘಟನೆಯಲ್ಲಿ 35 ವರ್ಷದ ರೇವತಿ ಎಂಬ ಮಹಿಳೆ ಸಾವನ್ನಪ್ಪಿದ್ದು, ಆಕೆಯ ಮಗ ಗಾಯಗೊಂಡಿದ್ದಾನೆ. ಇದಾದ ಬೆನ್ನಲ್ಲೇ ಹೈದರಾಬಾದ್ ಪೊಲೀಸರು ಅಲ್ಲು ಅರ್ಜುನ್ ವಿರುದ್ಧ ಪ್ರಕರಣ ದಾಖಲಿಸಿ ಆತನನ್ನು ಬಂಧಿಸಿದ್ದರು, ಬಂಧನದ ಬೆನ್ನಲ್ಲೇ ಜಾಮೀನು ನೀಡಲಾಯಿತು.
ಕಾನೂನು ಜಾರಿ ಅಧಿಕಾರಿಗಳು ಸಾರ್ವಜನಿಕ ಸುರಕ್ಷತೆಗೆ ಆದ್ಯತೆ ನೀಡುವುದು ಮುಖ್ಯ ಎಂದು ಕಲ್ಯಾಣ್ ಹೇಳಿದ್ದಾರೆ. "ಕಾನೂನು ಎಲ್ಲರಿಗೂ ಸಮಾನವಾಗಿದೆ, ಮತ್ತು ಕಾಲ್ತುಳಿತದ ಘಟನೆಗಳಲ್ಲಿ ನಾನು ಪೊಲೀಸರನ್ನು ದೂಷಿಸುವುದಿಲ್ಲ, ಅವರು ಸಾರ್ವಜನಿಕ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ವರ್ತಿಸುತ್ತಾರೆ, ಅಂದರೆ, ಯಾವುದೇ ಸಮಸ್ಯೆಗಳ ಬಗ್ಗೆ ಥಿಯೇಟರ್ ಸಿಬ್ಬಂದಿ ಅಲ್ಲು ಅರ್ಜುನ್ ಅವರಿಗೆ ಮೊದಲೇ ತಿಳಿಸಬೇಕಿತ್ತು. ಒಮ್ಮೆ ಅವರು ಸೀಟಿನಲ್ಲಿ ಕುಳಿತರು. ಅಗತ್ಯವಿದ್ದರೆ ಅವರು ಅದನ್ನು ಖಾಲಿ ಮಾಡುವಂತೆ ಸೂಚಿಸಬೇಕಿತ್ತು ಎಂದೂ ಪವನ್ ಕಲ್ಯಾಣ್ ಅಭಿಪ್ರಾಯಪಟ್ಟಿದ್ದಾರೆ.
ಕಲ್ಯಾಣ್ ಅವರು ಅಲ್ಲು ಅರ್ಜುನ್ ಸಂಬಂಧಿಯಾಗಿದ್ದಾರೆ. ಅಲ್ಲು ಅರ್ಜುನ್ ಅವರ ತಂದೆಯ ಸಹೋದರಿ ಸುರೇಖಾ ಅವರು ಪವನ್ ಕಲ್ಯಾಣ್ ಅವರ ಹಿರಿಯ ಸಹೋದರ ಖ್ಯಾತ ನಟ ಚಿರಂಜೀವಿ ಅವರನ್ನು ವಿವಾಹವಾಗಿದ್ದಾರೆ.
“ಅಲ್ಲು ಅರ್ಜುನ್ ಪರವಾಗಿ ಯಾರಾದರೂ ಸಂತ್ರಸ್ತೆಯ ಕುಟುಂಬವನ್ನು ಮೊದಲೇ ಭೇಟಿ ಮಾಡಿದ್ದರೆ ಉತ್ತಮವಾಗಿರುತ್ತಿತ್ತು. ಈ ಘಟನೆಯಲ್ಲಿ ರೇವತಿ ಅವರ ಸಾವು ನನಗೆ ತೀವ್ರ ಆಘಾತವನ್ನುಂಟು ಮಾಡಿದೆ. ಕುಟುಂಬವನ್ನು ಬೆಂಬಲಿಸಲು ನಾವೆಲ್ಲರೂ ಇಲ್ಲಿದ್ದೇವೆ ಎಂದು ಮೊದಲೇ ತಿಳಿಸಬೇಕಿತ್ತು. ಅವರ ನೇರ ಪಾಲ್ಗೊಳ್ಳುವಿಕೆ ಇಲ್ಲದೆ ನಡೆದರೂ ತಪ್ಪಿಗೆ ಪಶ್ಚಾತ್ತಾಪ ಪಡಬೇಕಾಗಿತ್ತು. ಈ ವಿಚಾರದಲ್ಲಿ ಮಾನವೀಯತೆಯ ಕೊರತೆ ಎದ್ದು ಕಾಣುತ್ತಿದೆ. ಎಲ್ಲರೂ ರೇವತಿಯ ಮನೆಗೆ ಹೋಗಿ ಸಾಂತ್ವನ ಹೇಳಿ ಸಾಂತ್ವನ ಹೇಳಬೇಕಿತ್ತು. ಅಂತಹ ನಡೆಯನ್ನು ಕಾಣದೇ ಇರುವುದು ಜನರ ಕೋಪಕ್ಕೆ ಕಾರಣವಾಗಿದೆ. ಈ ಘಟನೆಯಿಂದ ಯಾರೋ ಒಬ್ಬರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿದಾಗ ಅರ್ಜುನ್ ಕೂಡ ನೋವನ್ನು ಅನುಭವಿಸಿರುತ್ತಾರೆ" ಎಂದು ಕಲ್ಯಾಣ್ ಹೇಳಿದ್ದಾರೆ.
ಸಿನಿಮಾ ಎನ್ನುವುದು ಸಹಕಾರಿ ಪ್ರಯತ್ನ ಎಂದರು. ಘಟನೆಗೆ ಅಲ್ಲು ಅರ್ಜುನ್ ಅವರನ್ನು ಮಾತ್ರ ಹೊಣೆಗಾರರನ್ನಾಗಿ ಮಾಡುವುದು ಸರಿಯಲ್ಲ. ಮುಖ್ಯಮಂತ್ರಿಯಾಗಿ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರು ಕಾಲ್ತುಳಿತದ ನಂತರದ ಬೆಳವಣಿಗೆಗಳಿಗೆ ಸೂಕ್ತವಾಗಿ ಪ್ರತಿಕ್ರಿಯಿಸಿದ್ದಾರೆ. ಕೆಲವೊಮ್ಮೆ, ನಿರ್ಧಾರಗಳನ್ನು ಸಂದರ್ಭಗಳ ದೃಷ್ಟಿಯಿಂದ ತೆಗೆದುಕೊಳ್ಳಬೇಕಾಗುತ್ತದೆ. ಈ ಹಿಂದೆ ಚಿರಂಜೀವಿ ಕೂಡ ತಮ್ಮ ಅಭಿಮಾನಿಗಳೊಂದಿಗೆ ಸಿನಿಮಾ ನೋಡುತ್ತಿದ್ದರು. ಇಲ್ಲದಿದ್ದರೆ ಮಾಸ್ಕ್ ಹಾಕಿಕೊಂಡು ಒಬ್ಬರೇ ಥಿಯೇಟರ್‌ಗೆ ಹೋಗುತ್ತಿದ್ದರು ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ.
ತೆಲಂಗಾಣ ಮುಖ್ಯಮಂತ್ರಿ ರೆಡ್ಡಿ ಅವರು ಅತ್ಯಂತ ವಿನಮ್ರ ಹಿನ್ನೆಲೆಯಿಂದ ಬೆಳೆದ ನಾಯಕ ಎಂದು ಆಂಧ್ರ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಬಣ್ಣಿಸಿದ್ದಾರೆ. "ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಒಬ್ಬ ಮಹಾನ್ ನಾಯಕ, ಅವರು ವೈಎಸ್‌ಆರ್‌ಸಿಪಿಯಂತೆ ಮಾಡಲಿಲ್ಲ, ಬದಲಿಗೆ ತಮ್ಮ ರಾಜ್ಯದಲ್ಲಿ ಪ್ರಯೋಜನಗಳನ್ನು ಒದಗಿಸುವತ್ತ ಗಮನಹರಿಸಿದ್ದಾರೆ. ಟಿಕೆಟ್ ದರವನ್ನು ಹೆಚ್ಚಿಸುವ ಅವಕಾಶವನ್ನು ನೀಡಲಾಯಿತು, ಇದು ಸಲಾರ್‌ನಂತಹ ಅನೇಕ ಚಲನಚಿತ್ರಗಳ ಸಂಗ್ರಹವನ್ನು ಹೆಚ್ಚಿಸಿತು. ಮತ್ತು ಅವರ ಸಹಕಾರದಿಂದ ಪುಷ್ಪ 2 ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಯಶಸ್ಸನ್ನು ಗಳಿಸಿತು ಎಂಬುದನ್ನೂ ಪವನ್ ಕಲ್ಯಾಣ್ ತಿಳಿಸಿದ್ದಾರೆ.
Advertisement