ಕೇಂದ್ರ ಬಜೆಟ್ 2024: ದೇಶದಲ್ಲಿ 390 ಹೊಸ ವಿಶ್ವವಿದ್ಯಾಲಯಗಳ ಸ್ಥಾಪನೆ; ಶಿಕ್ಷಣ ವಲಯಕ್ಕೆ ಸಿಕ್ಕ ಕೊಡುಗೆಗೆಳು ಇಂತಿವೆ...

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರಸಕ್ತ ಸಾಲಿನ ಬಜೆಟ್ ಮಂಡನೆ ಮಾಡಿದ್ದು, ಗುಣಮಟ್ಟದ ಬೋಧನೆ ಮತ್ತು ಸಮಗ್ರ ಮತ್ತು ಸುಸಂಘಟಿತ ವ್ಯಕ್ತಿಗಳನ್ನು ಪೋಷಿಸಲು ಸರ್ಕಾರ ಗಮನಹರಿಸುತ್ತಿದೆ ಎಂದು ಹೇಳಿದರು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರಸಕ್ತ ಸಾಲಿನ ಬಜೆಟ್ ಮಂಡನೆ ಮಾಡಿದ್ದು, ಗುಣಮಟ್ಟದ ಬೋಧನೆ ಮತ್ತು ಸಮಗ್ರ ಮತ್ತು ಸುಸಂಘಟಿತ ವ್ಯಕ್ತಿಗಳನ್ನು ಪೋಷಿಸಲು ಸರ್ಕಾರ ಗಮನಹರಿಸುತ್ತಿದೆ ಎಂದು ಹೇಳಿದರು.

ಉನ್ನತ ಶಿಕ್ಷಣಕ್ಕೆ ಸರ್ಕಾರ ವಿಶೇಷ ಗಮನ ಹರಿಸಿದೆ. ಕಳೆದ 10 ವರ್ಷಗಳಲ್ಲಿ, ಒಟ್ಟು 390 ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲಾಗಿದೆ. 7 ಹೊಸ ಐಐಟಿಗಳು, 16 ಐಐಐಟಿಗಳು, 7 ಐಐಎಂಗಳು, 15 ಎಐಐಎಂಎಸ್, 3,000 ಹೊಸ ಐಟಿಐಗಳನ್ನೂ ಸ್ಥಾಪಿಸಲಾಗಿದೆ ಎಂದು ಹೇಳಿದರು.

STEM ಕೋರ್ಸ್‌ಗಳಲ್ಲಿ (Science, technology, engineering, and mathematics)  ಕಳೆದ 10 ವರ್ಷಗಳಲ್ಲಿ ಉನ್ನತ ಶಿಕ್ಷಣದಲ್ಲಿ ಮಹಿಳಾ ದಾಖಲಾತಿ ಶೇ.28ರಷ್ಟು ಹೆಚ್ಚಾಗಿದೆ. STEM ಕೋರ್ಸ್‌ಗಳಿಗೆ ದಾಖಲಾದ ವಿದ್ಯಾರ್ಥಿಗಳಲ್ಲಿ ಶೇ.43ರಷ್ಟು ಮಹಿಳೆಯರಾಗಿದ್ದಾರೆಂದು ತಿಳಿಸಿದರು.

ರಾಷ್ಟ್ರೀಯ ಶಿಕ್ಷಣ ನೀತಿ 2020 ಉದಯೋನ್ಮುಖ ಭಾರತಕ್ಕಾಗಿ ಶಾಲೆಗಳಲ್ಲಿ ಸುಧಾರಣೆಗಳನ್ನು ಪರಿವರ್ತಿಸುವ ಗುರಿಯನ್ನು ಹೊಂದಿದೆ. ಪಿಎಂ ಶ್ರೀ ಶಾಲೆಯು ಗುಣಮಟ್ಟದ ಬೋಧನೆಯನ್ನು ನೀಡಲು ಮತ್ತು ಸಮಗ್ರ ಮತ್ತು ಸುಸಜ್ಜಿತ ವ್ಯಕ್ತಿಗಳನ್ನು ಪೋಷಿಸಲು ಕೇಂದ್ರೀಕರಿಸಿದೆ. ಈ ವರ್ಷ ಒಟ್ಟು 15 ಹೊಸ ಎಐಐಎಂಗಳನ್ನು ಪ್ರಾರಂಭಿಸಲಾಗಿದೆ. ಆಸ್ಪತ್ರೆಯ ಮೂಲಸೌಕರ್ಯವನ್ನು ಬಳಸಿಕೊಂಡು ಹೆಚ್ಚಿನ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲು ಸರ್ಕಾರ ಚಿಂತಿಸುತ್ತಿದೆ.

ಸ್ಕಿಲ್ ಇಂಡಿಯಾ ಮಿಷನ್ 1.4 ಕೋಟಿ ಯುವಕರಿಗೆ ತರಬೇತಿ ನೀಡಿದೆ. 54 ಲಕ್ಷ ಯುವಕರಿಗೆ ಕೌಶಲ್ಯ ಮತ್ತು ಪುನರ್ ಕೌಶಲ್ಯವನ್ನು ನೀಡಿದೆ. ಕಡಿಮೆ ಬಡ್ಡಿ ದರದೊಂದಿಗೆ ಶಿಕ್ಷಣ ಸಾಲದಲ್ಲಿ ದೀರ್ಘಾವಧಿಯ ಹಣಕಾಸು ಮತ್ತು ಮರು-ಹಣಕಾಸು ಒದಗಿಸುವ ನಿಧಿ ಸ್ಥಾಪಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com