ಒಂದು ವರ್ಷದಲ್ಲಿ 9.1 ಲಕ್ಷ ಭಾರತೀಯರು ಕ್ಯಾನ್ಸರ್ ನಿಂದ ಸಾವು

2022 ರಲ್ಲಿ ಭಾರತದಲ್ಲಿ 14.1 ಲಕ್ಷ ಹೊಸ ಕ್ಯಾನ್ಸರ್ ಪ್ರಕರಣಗಳು ವರದಿಯಾಗಿದ್ದು, 9.1 ಲಕ್ಷ ಮಂದಿ ಕ್ಯಾನ್ಸರ್ ಗೆ ಬಲಿಯಾಗಿದ್ದಾರೆ. 
ಕ್ಯಾನ್ಸರ್
ಕ್ಯಾನ್ಸರ್
Updated on

ವಿಶ್ವಸಂಸ್ಥೆ: 2022 ರಲ್ಲಿ ಭಾರತದಲ್ಲಿ 14.1 ಲಕ್ಷ ಹೊಸ ಕ್ಯಾನ್ಸರ್ ಪ್ರಕರಣಗಳು ವರದಿಯಾಗಿದ್ದು, 9.1 ಲಕ್ಷ ಮಂದಿ ಕ್ಯಾನ್ಸರ್ ಗೆ ಬಲಿಯಾಗಿದ್ದಾರೆ. ಸ್ತನ ಕ್ಯಾನ್ಸರ್ ಸಾಮಾನ್ಯವಾಗಿ ಕಾಡುವ ಕ್ಯಾನ್ಸರ್ ಆಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಅಂಕಿ-ಅಂಶಗಳು ತಿಳಿಸಿದೆ.

ತುಟಿ, ಬಾಯಿಯ ಕುಹರ ಮತ್ತು ಶ್ವಾಸಕೋಶದ ಕ್ಯಾನ್ಸರ್ ಪುರುಷರಲ್ಲಿ ಹೆಚ್ಚು ಸಾಮಾನ್ಯವಾಗಿದ್ದು ಅನುಕ್ರಮವಾಗಿ 15.6 ಮತ್ತು 8.5 ಪ್ರತಿಶತದಷ್ಟು ಹೊಸ ಪ್ರಕರಣಗಳು ವರದಿಯಾಗಿದೆ. ಆದರೆ ಸ್ತನ ಮತ್ತು ಗರ್ಭಕಂಠದ ಕ್ಯಾನ್ಸರ್ಗಳು ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುತ್ತವೆ, ಹೊಸ ಪ್ರಕರಣಗಳ ಪೈಕಿ ಈ ಎರಡು ರೀತಿಯ ಕ್ಯಾನ್ಸರ್ ಗಳು ಅನುಕ್ರಮವಾಗಿ ಶೇ.27ರಷ್ಟು ಮತ್ತು ಶೇ.18 ಪ್ರತಿಶತದಷ್ಟಿವೆ ಎಂದು ಇಂಟರ್ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್ (IARC), WHO ನ ಕ್ಯಾನ್ಸರ್ ಏಜೆನ್ಸಿ ಅಂದಾಜಿಸಿದೆ.

ಕ್ಯಾನ್ಸರ್ ರೋಗನಿರ್ಣಯದ ನಂತರ 5 ವರ್ಷಗಳಲ್ಲಿ ಜೀವಂತವಾಗಿರುವವರ ಸಂಖ್ಯೆ ಭಾರತದಲ್ಲಿ ಸುಮಾರು 32.6 ಲಕ್ಷ ಎಂದು ವರದಿ ಅಂದಾಜಿಸಿದೆ. ಜಾಗತಿಕವಾಗಿ, 2 ಕೋಟಿ ಹೊಸ ಕ್ಯಾನ್ಸರ್ ಪ್ರಕರಣಗಳು ಮತ್ತು 97 ಲಕ್ಷ ಸಾವುಗಳು ಸಂಭವಿಸಿವೆ ಮತ್ತು ಕ್ಯಾನ್ಸರ್ ರೋಗನಿರ್ಣಯದ ನಂತರ 5 ವರ್ಷಗಳಲ್ಲಿ ಸುಮಾರು 5.3 ಕೋಟಿ ಜನರು ಜೀವಂತವಾಗಿದ್ದಾರೆ ಎಂದು ತಿಳಿದುಬಂದಿದೆ. 

ಅಂದಾಜಿನ ಪ್ರಕಾರ, ಪ್ರತಿ ಐವರಲ್ಲಿ ಒಬ್ಬರು ತಮ್ಮ ಜೀವಿತಾವಧಿಯಲ್ಲಿ ಕ್ಯಾನ್ಸರ್ ನ್ನು ಎದುರಿಸುತ್ತಾರೆ ಮತ್ತು ಸರಿಸುಮಾರು 9 ಪುರುಷರಲ್ಲಿ ಒಬ್ಬರು ಮತ್ತು 12 ಮಹಿಳೆಯರಲ್ಲಿ ಒಬ್ಬರು ಈ ಕಾಯಿಲೆಯಿಂದ ಸಾಯುತ್ತಾರೆ ಎಂದು ಅದು ಹೇಳಿದೆ. 

ಭಾರತದಲ್ಲಿ ವ್ಯಕ್ತಿಯೋರ್ವನಿಗೆ 75 ವರ್ಷಕ್ಕೆ ಮುಂಚೆಯೇ ಕ್ಯಾನ್ಸರ್ ಬೆಳವಣಿಗೆಯ ಅಪಾಯದ ಪ್ರಮಾಣ ಶೇಕಡಾ 10.6 ರಷ್ಟಿರಲಿದೆ ಎಂದು ಲೆಕ್ಕಹಾಕಲಾಗಿದೆ. ಆದರೆ ಅದೇ ವಯಸ್ಸಿನಲ್ಲಿ ಕ್ಯಾನ್ಸರ್ನಿಂದ ಸಾಯುವ ಅಪಾಯವು 7.2 ಶೇಕಡಾ ಎಂದು ಕಂಡುಬಂದಿದೆ. ಜಾಗತಿಕವಾಗಿ, ಈ ಅಪಾಯಗಳು ಕ್ರಮವಾಗಿ ಶೇಕಡಾ 20 ಮತ್ತು 9.6 ರಷ್ಟಿದೆ.

ಯುನಿವರ್ಸಲ್ ಹೆಲ್ತ್ ಕವರೇಜ್ (UHC) ಭಾಗವಾಗಿ, ಬಹುಪಾಲು ದೇಶಗಳು ಆದ್ಯತೆಯ ಕ್ಯಾನ್ಸರ್ ಮತ್ತು ಉಪಶಾಮಕ (ನೋವು-ಸಂಬಂಧಿತ) ಆರೈಕೆ ಸೇವೆಗಳಿಗೆ ಸಮರ್ಪಕವಾಗಿ ಹಣಕಾಸು ಒದಗಿಸುವುದಿಲ್ಲ ಎಂದು 115 ದೇಶಗಳ ಸಮೀಕ್ಷೆಯ ಫಲಿತಾಂಶಗಳನ್ನು ಪ್ರಕಟಿಸಿರುವ WHO ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com