ಶರದ್ ಪವಾರ್ ಬಣಕ್ಕೆ NCP-SP ಹೊಸ ಹೆಸರು: ಚುನಾವಣಾ ಆಯೋಗ

ನ್ಯಾಶನಲಿಸ್ಟ್‌ ಕಾಂಗ್ರೆಸ್‌ ಪಕ್ಷದ ಹೆಸರಿಗಾಗಿ ಶರದ್ ಪವಾರ್ ಮತ್ತು ಅಜಿತ್ ಪವಾರ್ ನಡುವಿನ ಹಗ್ಗಜಗ್ಗಾಟಕ್ಕೆ ಕೋರ್ಟ್ ಬ್ರೇಕ್ ಹಾಕಿದ ಬೆನ್ನಲ್ಲೇ ಕೇಂದ್ರ ಚುನಾವಣಾ ಆಯೋಗ ಶರದ್ ಪವಾರ್ ಬಣದ ಪಕ್ಷಕ್ಕೆ ಹೊಸ ಹೆಸರು ನೀಡಿದೆ.
ಶರದ್ ಪವಾರ್
ಶರದ್ ಪವಾರ್

ನವದೆಹಲಿ: ನ್ಯಾಶನಲಿಸ್ಟ್‌ ಕಾಂಗ್ರೆಸ್‌ ಪಕ್ಷದ ಹೆಸರಿಗಾಗಿ ಶರದ್ ಪವಾರ್ ಮತ್ತು ಅಜಿತ್ ಪವಾರ್ ನಡುವಿನ ಹಗ್ಗಜಗ್ಗಾಟಕ್ಕೆ ಕೋರ್ಟ್ ಬ್ರೇಕ್ ಹಾಕಿದ ಬೆನ್ನಲ್ಲೇ ಕೇಂದ್ರ ಚುನಾವಣಾ ಆಯೋಗ ಶರದ್ ಪವಾರ್ ಬಣದ ಪಕ್ಷಕ್ಕೆ ಹೊಸ ಹೆಸರು ನೀಡಿದೆ.

ಚುನಾವಣಾಯ ಆಯೋಗದ ಮೂಲಗಳ ಪ್ರಕಾರ ಶರದ್‌ ಪವಾರ್‌ ಅವರ ಪಕ್ಷಕ್ಕೆ ನ್ಯಾಶನಲಿಸ್ಟ್‌ ಕಾಂಗ್ರೆಸ್‌ ಪಕ್ಷ ಶರದ್‌ ಚಂದ್ರ ಪವಾರ್‌ (NCP-SP) ಎಂಬ ಹೊಸ ಹೆಸರು ಬಂದಿದೆ. ಶರದ್ ಪವಾರ್ ಅವರ ಸೋದರಳಿಯ ಅಜಿತ್‌ ಪವಾರ್‌ ನೇತೃತ್ವದ ಬಣ ‘ನೈಜ’ ಎನ್‌ಸಿಪಿ ಎಂದು ಕೋರ್ಟ್ ತೀರ್ಪು ನೀಡಿದ ಒಂದು ದಿನದ ಅಂತರದಲ್ಲಿ ಚುನಾವಣಾ ಆಯೋಗ ಈ ಹೆಸರಿಗೆ ಅನುಮೋದನೆ ನೀಡಿದೆ. ಅಲ್ಲದೆ ಶೀಘ್ರದಲ್ಲೇ ಪಕ್ಷದ ಚಿಹ್ನೆಯನ್ನು ನಿಗದಿಪಡಿಸಲಾಗುತ್ತದೆ ಎಂದು ಹೇಳಿದೆ.

ಚುನಾವಣಾ ಆಯೋಗವು "ಮಹಾರಾಷ್ಟ್ರದಿಂದ ರಾಜ್ಯಸಭೆಯ ಆರು ಸ್ಥಾನಗಳಿಗೆ ಮುಂಬರುವ ಚುನಾವಣೆಯ ಉದ್ದೇಶಗಳಿಗಾಗಿ ನಿಮ್ಮ ಗುಂಪು/ಬಣದ ಹೆಸರನ್ನು ಒಂದು ಬಾರಿ ಆಯ್ಕೆಯಾಗಿ ಸ್ವೀಕರಿಸಿದೆ" ಎಂದು ಹೇಳಲಾಗಿದೆ. ಚುನಾವಣಾ ಸಂಸ್ಥೆಯು ಎನ್‌ಸಿಪಿ ಶರದ್‌ಚಂದ್ರ ಪವಾರ್‌ ಪಕ್ಷಕ್ಕೆ ಇನ್ನೂ ಚಿಹ್ನೆಯನ್ನು ನೀಡಬೇಕಿದ್ದು, ಮೂಲಗಳ ಪ್ರಕಾರ ಉದಯಿಸುತ್ತಿರುವ ಸೂರ್ಯ (Rising Sun) ಶರದ್ ಪವಾರ್ ಬಣ ಕೇಳಿದ್ದು, ಆದರೆ ಈಗಾಗಲೇ ಅದೇ ಮಾದರಿಯ ಚಿಹ್ನೆಯನ್ನು ತಮಿಳುನಾಡಿನ ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಂ (DMK) ಬಳಕೆ ಮಾಡುತ್ತಿದೆ.

ಇದಲ್ಲದೆ ಶರದ್ ಪವಾರ್ ಬಣ ಜೋಡಿ ಕನ್ನಡಕ ಮತ್ತು ಆಲದ ಮರ ಚಿಹ್ನೆಗಳನ್ನೂ ಆಯ್ಕೆಯಾಗಿ ಪರಿಗಣಿಸಿದ್ದು, ಜೋಡಿ ಕನ್ನಡಕ ಮಾದರಿಯ ಚಿಹ್ನೆಯನ್ನೂ ಭಾರತೀಯ ರಾಷ್ಟ್ರೀಯ ಲೋಕದಳ ಪಕ್ಷ ಬಳಕೆ ಮಾಡುತ್ತಿದೆ.

ಹೀಗಾಗಿ ಚುನಾವಣಾ ಆಯೋಗ ಚಿನ್ಹೆ ವಿಚಾರವಾಗಿ ಇನ್ನೂ ನಿರ್ಧಾರ ತಳೆದಿಲ್ಲ ಎಂದು ಹೇಳಲಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com