ಕೇರಳ: ಪಟಾಕಿ ಸಂಗ್ರಹಿಸಿದ್ದ ಕಟ್ಟಡದಲ್ಲಿ ಸ್ಫೋಟ; ಓರ್ವ ಸಾವು, 16 ಮಂದಿಗೆ ಗಾಯ

ಕೇರಳದ ಕೊಚ್ಚಿಯ ತ್ರಿಪುಣಿತ್ತೂರದ ಪುಥಿಯಕಾವು ಎಂಬಲ್ಲಿ ಸೋಮವಾರ ಬೆಳಗ್ಗೆ ಪಟಾಕಿಗಳನ್ನು ಸಂಗ್ರಹಿಸಲಾಗಿದ್ದ ಕಟ್ಟಡದಲ್ಲಿ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ ಮತ್ತು 16 ಮಂದಿ ಗಾಯಗೊಂಡಿದ್ದಾರೆ.
ಧ್ವಂಸಗೊಂಡ ಕಟ್ಟಡ
ಧ್ವಂಸಗೊಂಡ ಕಟ್ಟಡ

ಕೊಚ್ಚಿ: ಕೇರಳದ ಕೊಚ್ಚಿಯ ತ್ರಿಪುಣಿತ್ತೂರದ ಪುಥಿಯಕಾವು ಎಂಬಲ್ಲಿ ಸೋಮವಾರ ಬೆಳಗ್ಗೆ ಪಟಾಕಿಗಳನ್ನು ಸಂಗ್ರಹಿಸಲಾಗಿದ್ದ ಕಟ್ಟಡದಲ್ಲಿ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ ಮತ್ತು 16 ಮಂದಿ ಗಾಯಗೊಂಡಿದ್ದಾರೆ.

ಮೃತರನ್ನು ಉಳ್ಳೂರು ಮೂಲದವರೆಂದು ಗುರುತಿಸಲಾಗಿದ್ದು, ಗಂಭೀರವಾಗಿ ಗಾಯಗೊಂಡ ನಾಲ್ವರನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿ ನಂತರ ಎರ್ನಾಕುಲಂ ಜನರಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಇತರ ಮೂವರನ್ನು ಕಲಮಶ್ಶೇರಿ ವೈದ್ಯಕೀಯ ಕಾಲೇಜಿಗೆ ಮತ್ತು ಮೂವರನ್ನು ತ್ರಿಪುಣಿತುರಾ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇಡೀ ಪ್ರದೇಶವನ್ನೇ ನಡುಗಿಸಿದ ಈ ಬೃಹತ್ ಸ್ಫೋಟದಲ್ಲಿ ಸುಮಾರು 25 ಕಟ್ಟಡಗಳು ಹಾನಿಗೊಳಗಾಗಿವೆ. ಬೆಂಕಿಯ ತೀವ್ರತೆಗೆ ಸ್ಥಳದಲ್ಲಿ ನಿಲ್ಲಿಸಿದ್ದ ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ.

ವರದಿಗಳ ಪ್ರಕಾರ ಪಟಾಕಿ ಪೆಟ್ಟಿಗೆಗಳನ್ನು ಇಳಿಸುವಾಗ ಸ್ಫೋಟ ಸಂಭವಿಸಿದೆ.

ಅಧಿಕಾರಿಗಳಿಂದ ಸೂಕ್ತ ಅನುಮತಿ ಪಡೆಯದೆ ಪಟಾಕಿಗಳನ್ನು ಸಂಗ್ರಹಿಸಲಾಗಿದೆ. "ಪಟಾಕಿಗಳನ್ನು ಸಂಗ್ರಹಿಸಲು, ಜಿಲ್ಲಾಧಿಕಾರಿಗಳ ಅನುಮತಿ ಅಗತ್ಯವಿದೆ. ಆದರೆ ಅವರು ಜಿಲ್ಲಾಧಿಕಾರಿಯಿಂದ ಅನುಮತಿ ಪಡೆದಿಲ್ಲ" ಎಂದು ಎರ್ನಾಕುಲಂ ಜಿಲ್ಲಾಧಿಕಾರಿ ಎನ್ಎಸ್ ಕೆ ಉಮೇಶ್ ಅವರು ಟಿವಿ ಚಾನೆಲ್ ವೊಂದಕ್ಕೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com