ಮಧ್ಯಪ್ರದೇಶ: ಲಂಚ ಕೊಡಲು ನಿರಾಕರಿಸಿದ ಟೀ ಮಾರಾಟಗಾರನಿಗೆ ಥಳಿತ
ಭೋಪಾಲ್: ಲಂಚ ನೀಡಲು ನಿರಾಕರಿಸಿದ ಬುಡಕಟ್ಟು ಸಮುದಾಯದ ಟೀ ಮಾರಾಟಗಾರನನ್ನು ಥಳಿಸಿದ ಘಟನೆ ಮಧ್ಯಪ್ರದೇಶದ ಬೆತುಲ್ ಜಿಲ್ಲೆಯಲ್ಲಿ ವರದಿಯಾಗಿದೆ. ಕೆಲವೇ ದಿನಗಳ ಹಿಂದೆ ಬಜರಂಗ ದಳ ನಾಯಕನೋರ್ವ ಬುಡಕಟ್ಟು ಯುವಕನನ್ನು ಮನಸೋ ಇಚ್ಛೆ ಥಳಿಸಿದ್ದ ಘಟನೆ ವರದಿಯಾಗಿತ್ತು.
ಆಶೀಶ್ ಪರ್ತೆ ಎಂಬ ಯುವಕ ಹಲ್ಲೆಗೊಳಗಾಗಿದ್ದು, ಘಟನೆ 2023 ರ ನವೆಂಬರ್ ನಲ್ಲಿ ನಡೆದಿದೆಯಾದರೂ ಘಟನೆಯ ವೀಡಿಯೋ ಮಂಗಳವಾರ ರಾತ್ರಿ ವೈರಲ್ ಆದ ಬಳಿಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಚಹಾ ಮಾರಾಟ ಅಂಗಡಿ ನಡೆಸುತ್ತಿದ್ದ ಆಶೀಶ್ ಪರ್ತೆ ಲಂಚ ನೀಡುವುದಕ್ಕೆ ನಿರಾಕರಿಸಿದ್ದ ಹಿನ್ನೆಲೆಯಲ್ಲಿ ಆತನನ್ನು ಬೆತ್ತಲೆಗೊಳಿಸಿ, ತಲೆಕೆಳಗೆ ನೇತುಹಾಕಿ ದೊಣ್ಣೆ, ಬೆಲ್ಟ್ ಗಳಿಂದ ಥಳಿಸಿದ್ದರು. ತನ್ನ ಮೇಲೆ ದಾಳಿ ನಡೆಸಿದ್ದ ವ್ಯಕ್ತಿಗಳ ಪೈಕಿ ಓರ್ವನ ಬಳಿ ಗನ್ ಇತ್ತು ಹಾಗೂ ಆತ ಈ ಹಿಂದೆ ಕೊಲೆ ಮಾಡಿದ್ದ ಪ್ರಕರಣ ನಡೆದಿತ್ತು. ಆದ್ದರಿಂದ ತನ್ನ ಮೇಲೆ ನಡೆದ ಹಲ್ಲೆಯನ್ನು ಎಲ್ಲಿಯೂ ಹೇಳಿರಲಿಲ್ಲ ಎಂದು ಸಂತ್ರಸ್ತ ವ್ಯಕ್ತಿ ಹೇಳಿದ್ದಾರೆ.
ಮಂಗಳವಾರ ವಿಡಿಯೋ ವೈರಲ್ ಆಗಿದ್ದು, ಕೊನೆಗೆ ಅದನ್ನು ತನ್ನ ಅಣ್ಣನ ಬಳಿ ಒಪ್ಪಿಕೊಂಡಿದ್ದು, ಬಳಿಕ ಸ್ಥಳೀಯ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಐಪಿಸಿ ಮತ್ತು ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಸೋಮವಾರ ಮುಂಜಾನೆ, ಬುಡಕಟ್ಟು ಯುವಕ ರಾಜು ಉಯಿಕೆ ಎಂಬ ಬುಡಕಟ್ಟು ಯುವಕನ ಮೇಲೆ ಹಲ್ಲೆ ನಡೆಸಿದ ಬಜರಂಗದಳದ ನಾಯಕ ಚಂಚಲ್ ರಜಪೂತ್ ಮತ್ತು ಸಹಾಯಕರ ವಿರುದ್ಧ ಬೇತುಲ್ ಜಿಲ್ಲಾ ಪೊಲೀಸರು ಪ್ರಕರಣ ದಾಖಲಿಸಿದ್ದರು. ಇತ್ತೀಚೆಗೆ ಬಜರಂಗದಳದ ನಾಯಕನ ಮೇಲೆ ಹಲ್ಲೆ ನಡೆಸಿದ ಡಿಜೆ ಪ್ಲೇಯರ್ ಗುಲ್ಲು ಜೊತೆ ಕೆಲಸ ಮಾಡಿದ್ದಕ್ಕಾಗಿ ರಾಜುಗೆ ಥಳಿಸಿ ಚಿತ್ರಹಿಂಸೆ ನೀದಿದ್ದ ಆಘಾತಕಾರಿ ಘಟನೆಯ ವೈರಲ್ ವೀಡಿಯೊ ವೈರಲ್ ಆಗಿತ್ತು. ರಾಜ್ಯದಲ್ಲಿ ಬುಡಕಟ್ಟು ಜನಾಂಗದವರನ್ನು ಉದ್ದೇಶಪೂರ್ವಕವಾಗಿ ಟಾರ್ಗೆಟ್ ಮಾಡಲಾಗುತ್ತಿದೆ ಎಂಬುದನ್ನು ಇದು ಸೂಚಿಸುತ್ತದೆ ಎಂದು ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಜಿತು ಪಟ್ವಾರಿ ಆರೋಪಿಸಿದ್ದಾರೆ.