ತೆರಿಗೆ ಸುಧಾರಣೆ, ಕಡ್ಡಾಯ ಉಳಿತಾಯ ಯೋಜನೆ, ವೃದ್ಧರಿಗೆ ವಸತಿ ಯೋಜನೆ ರೂಪಿಸಲು ನೀತಿ ಆಯೋಗ ಒತ್ತು

2050ರ ವೇಳೆಗೆ ಹಿರಿಯ ನಾಗರಿಕರ ಜನಸಂಖ್ಯೆಯು ದೇಶದ ಒಟ್ಟು ಜನಸಂಖ್ಯೆಯ ಶೇ.19.5ರಷ್ಟನ್ನು ತಲುಪುವ ನಿರೀಕ್ಷೆಯಿದ್ದು, ತೆರಿಗೆ ಸುಧಾರಣೆಗಳು, ಕಡ್ಡಾಯ ಉಳಿತಾಯ ಯೋಜನೆ ಮತ್ತು ವೃದ್ಧರಿಗೆ ವಸತಿ ಯೋಜನೆ ರೂಪಿಸಬೇಕು-ನೀತಿ ಆಯೋಗ
ಕೇಂದ್ರ ನೀತಿ ಆಯೋಗ
ಕೇಂದ್ರ ನೀತಿ ಆಯೋಗPTI

ನವದೆಹಲಿ: 2050ರ ವೇಳೆಗೆ ಹಿರಿಯ ನಾಗರಿಕರ ಜನಸಂಖ್ಯೆಯು ದೇಶದ ಒಟ್ಟು ಜನಸಂಖ್ಯೆಯ ಶೇ.19.5ರಷ್ಟನ್ನು ತಲುಪುವ ನಿರೀಕ್ಷೆಯಿದ್ದು, ತೆರಿಗೆ ಸುಧಾರಣೆಗಳು, ಕಡ್ಡಾಯ ಉಳಿತಾಯ ಯೋಜನೆ ಮತ್ತು ವೃದ್ಧರಿಗೆ ವಸತಿ ಯೋಜನೆ ರೂಪಿಸಬೇಕು ಎಂದು ಸರಕಾರದ ಚಿಂತಕರ ಚಾವಡಿ ನೀತಿ ಆಯೋಗ ಪ್ರತಿಪಾದಿಸಿದೆ.

'ಭಾರತದಲ್ಲಿ ಹಿರಿಯ ಆರೈಕೆ ಸುಧಾರಣೆಗಳು -ಹಿರಿಯ ಆರೈಕೆ ಮಾದರಿಯನ್ನು ಮರುರೂಪಿಸುವುದು' ಎಂಬ ಶೀರ್ಷಿಕೆಯ ವರದಿಯಲ್ಲಿ, ನೀತಿ ಆಯೋಗು ಹಿರಿಯ ನಾಗರಿಕರಿಗೆ ಸೇವೆಗಳನ್ನು ಸುಲಭವಾಗಿ ಒದಗಿಸಲು ಹಿರಿಯ ಆರೈಕೆಗಾಗಿ ರಾಷ್ಟ್ರೀಯ ಪೋರ್ಟಲ್ ನ್ನು ಅಭಿವೃದ್ಧಿಪಡಿಸಬೇಕು ಎಂದು ಹೇಳಿದೆ.

"ಭಾರತದಲ್ಲಿ ಸಾಮಾಜಿಕ ಭದ್ರತಾ ಚೌಕಟ್ಟು ಸೀಮಿತವಾಗಿರುವುದರಿಂದ, ಹೆಚ್ಚಿನ ಹಿರಿಯರು ತಮ್ಮ ಉಳಿತಾಯದಿಂದ ಉತ್ಪತ್ತಿಯಾಗುವ ಆದಾಯವನ್ನು ಅವಲಂಬಿಸಿದ್ದಾರೆ. ಅಸ್ಥಿರ ಬಡ್ಡಿದರಗಳು ಅವರ ಆದಾಯ ಕುಗ್ಗುವುದಕ್ಕೆ ಕಾರಣವಾಗುತ್ತವೆ, ಇವು ಕೆಲವೊಮ್ಮೆ ಜೀವನಾಧಾರ ಮಟ್ಟಕ್ಕಿಂತ ಕಡಿಮೆ ಇರುತ್ತವೆ ಎಂದು ನೀತಿ ಆಯೋಗ ಹೇಳಿದೆ.

ಕೇಂದ್ರ ನೀತಿ ಆಯೋಗ
ನಿವೃತ್ತ ಜನರಿಗೆ ಹೂಡಿಕೆ ಆಯ್ಕೆಗಳು ಏನು? ಇಲ್ಲಿದೆ ಮಾಹಿತಿ...

ಆದ್ದರಿಂದ, ಹಿರಿಯ ನಾಗರಿಕರ ಠೇವಣಿಗಳ ಮೇಲೆ ಗಳಿಸಿದ ಬಡ್ಡಿಗೆ ಕಾರ್ಯಸಾಧ್ಯವಾದ ಮೂಲ ದರವನ್ನು ನಿಗದಿಪಡಿಸಲು ನಿಯಂತ್ರಕ ಕಾರ್ಯವಿಧಾನದ ಅಗತ್ಯವಿದೆ ಎಂದು ನೀತಿ ಆಯೋಗದ ವರದಿ ಹೇಳಿದೆ.

ವಯಸ್ಸಾದ ಮಹಿಳೆಯರಿಗೆ ಹೆಚ್ಚಿನ ರಿಯಾಯಿತಿ ನೀಡುವುದು ಅವರ ಆರ್ಥಿಕ ಯೋಗಕ್ಷೇಮಕ್ಕೆ ಕೊಡುಗೆ ನೀಡುತ್ತದೆ ಎಂದು ವರದಿ ಒತ್ತಿಹೇಳಿದೆ. ಭಾರತದಲ್ಲಿ ವೃದ್ಧರು ಪ್ರಸ್ತುತ ಜನಸಂಖ್ಯೆಯ ಶೇಕಡಾ 10 ಕ್ಕಿಂತ ಸ್ವಲ್ಪ ಹೆಚ್ಚು, ಅಂದರೆ ಸುಮಾರು 104 ಮಿಲಿಯನ್ ಇದ್ದು 2050ರ ವೇಳೆಗೆ ಒಟ್ಟು ಜನಸಂಖ್ಯೆಯ ಶೇ.19.5 ಕ್ಕೆ ತಲುಪುವ ನಿರೀಕ್ಷೆಯಿದೆ. ಹಿರಿಯರಿಗೆ ನಗದು ಲಭ್ಯತೆ ಹೆಚ್ಚಿಸಲು ಮತ್ತು ಪ್ರಸ್ತುತ ರಿವರ್ಸ್ ಅಡಮಾನ ನಿಯಮಗಳಿಗೆ ಅಗತ್ಯ ತಿದ್ದುಪಡಿಗಳನ್ನು ಮಾಡುವ ಮೂಲಕ ಸರ್ಕಾರ ರಿವರ್ಸ್ ಮಾರ್ಟ್ ಗೇಜ್ ಕಾರ್ಯವಿಧಾನವನ್ನು ಮರುಪರಿಶೀಲಿಸಬೇಕು ಎಂದು ವರದಿ ಸರ್ಕಾರಕ್ಕೆ ಸಲಹೆ ನೀಡಿದೆ.

"ದತ್ತು ಸ್ವೀಕಾರದ ಪ್ರಕ್ರಿಯೆಯನ್ನು ಸರಳಗೊಳಿಸುವುದಕ್ಕೆ ಮತ್ತು ವಯಸ್ಸಾದ ಜನಸಂಖ್ಯೆಯನ್ನು ಆರ್ಥಿಕ ಹೊರೆಯಿಂದ ರಕ್ಷಿಸಲು ಹಿರಿಯ ಆರೈಕೆ ಉತ್ಪನ್ನಗಳ ಮೇಲೆ ತೆರಿಗೆ ಮತ್ತು ಜಿಎಸ್ಟಿ ಸುಧಾರಣೆಗಳು ಅಗತ್ಯವಿದೆ ಎಂದು ಆಯೋಗ ಅಭಿಪ್ರಾಯಪಟ್ಟಿದೆ. ಜನಸಂಖ್ಯಾ ವೃದ್ಧಾಪ್ಯ ಜಾಗತಿಕ ವಿದ್ಯಮಾನವಾಗಿದೆ, ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟ ಜನರ ಸಂಖ್ಯೆ ಪ್ರಪಂಚದಾದ್ಯಂತ ವೇಗವಾಗಿ ಹೆಚ್ಚುತ್ತಿದೆ. ಭಾರತವೂ ಸಹ ವೃದ್ಧರ ಸಂಖ್ಯೆ ಮತ್ತು ಅನುಪಾತದಲ್ಲಿ ಘಾತೀಯ ಬೆಳವಣಿಗೆಯನ್ನು ಕಾಣುತ್ತಿದೆ, ಜೊತೆಗೆ ಸಂತಾನೋತ್ಪತ್ತಿ ಸಾಮರ್ಥ್ಯ ದರ ಕಡಿಮೆಯಾಗುತ್ತಿದೆ (2.0 ಕ್ಕಿಂತ ಕಡಿಮೆ) ಮತ್ತು ಜೀವಿತಾವಧಿ (70 ವರ್ಷಗಳಿಗಿಂತ ಹೆಚ್ಚು) ಹೆಚ್ಚುತ್ತಿದೆ". ಎಂದು ವರದಿ ಹೇಳಿದೆ.

ಕೇಂದ್ರ ನೀತಿ ಆಯೋಗ
9 ವರ್ಷಗಳಲ್ಲಿ ದೇಶದ 25 ಕೋಟಿ ಮಂದಿ ಬಡತನ ಮುಕ್ತ: ನೀತಿ ಆಯೋಗ

ಸಿಎಸ್ಆರ್ ನಿಧಿಗಳನ್ನು ರಾಷ್ಟ್ರೀಯ ನಿಧಿಗಳಿಗೆ ಕೊಡುಗೆಯಾಗಿ ಮೀಸಲಿಡಬೇಕು ಎಂದು ವರದಿ ಕರೆ ನೀಡಿದೆ.

ಸಮಾಲೋಚನೆಯಿಂದ ರೋಗನಿರ್ಣಯದಿಂದ ಚಿಕಿತ್ಸೆಯವರೆಗೆ ವೈದ್ಯಕೀಯ ಆರೈಕೆ ಪ್ರಕ್ರಿಯೆಗಳಾದ್ಯಂತ ಹಿರಿಯ ವ್ಯಕ್ತಿಗಳಿಗೆ ರಿಯಾಯಿತಿ ದರದಲ್ಲಿ ಖಾಸಗಿ ವೈದ್ಯಕೀಯ ಆರೈಕೆಯನ್ನು ಉತ್ತೇಜಿಸಲು ವಿವಿಧ ಪಿಪಿಪಿ ಮಾದರಿಗಳ ಮೂಲಕ ಖಾಸಗಿ ವಲಯದೊಂದಿಗೆ ಸಹಭಾಗಿತ್ವವನ್ನು ಅಭಿವೃದ್ಧಿಪಡಿಸಲು ನೀತಿ ಆಯೋಗ ಇದೇ ವೇಳೆ ಸಲಹೆ ನೀಡಿದೆ. ಈ ಗಾತ್ರದ ಹಿರಿಯ ಜನಸಂಖ್ಯೆಯ ಅಗತ್ಯಗಳನ್ನು ಪೂರೈಸುವುದು ಸವಾಲಿನ ಸಂಗತಿಯಾಗಿದೆ ಎಂದು ಗಮನಿಸಿದ ವರದಿ, ಇಂತಹ ಪರಿಸ್ಥಿತಿಗಳು ಹಿರಿಯ ಆರೈಕೆ ಉದ್ಯಮದ ಬೆಳವಣಿಗೆಗೆ ಇದು ಅವಕಾಶವನ್ನು ಒದಗಿಸುತ್ತದೆ. ಇದನ್ನು 7 ಬಿಲಿಯನ್ ಡಾಲರ್ (57,881 ಕೋಟಿ ರೂ.) ಎಂದು ಅಂದಾಜಿಸಲಾಗಿದೆ. ಭಾರತದಲ್ಲಿ ಶೇಕಡಾ 75 ಕ್ಕೂ ಹೆಚ್ಚು ವೃದ್ಧರು ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಮತ್ತು ಈ ಅಂಕಿಅಂಶಗಳು ಭಾರತದಲ್ಲಿ ಮನೆ ಆಧಾರಿತ ಆರೈಕೆ ಮಾರುಕಟ್ಟೆಯ ಸಾಮರ್ಥ್ಯವನ್ನು ಸೂಚಿಸುತ್ತವೆ.

ವರದಿಯ ಪ್ರಕಾರ, ಭಾರತದಲ್ಲಿ ಹೋಮ್ ಹೆಲ್ತ್ ಕೇರ್ ಮಾರುಕಟ್ಟೆಯ ಗಾತ್ರ 2020 ರಲ್ಲಿ 6.2 ಬಿಲಿಯನ್ ಡಾಲರ್ (50,840 ಕೋಟಿ ರೂ.) ದಾಟಲಿದೆ ಎಂದು ಅಂದಾಜಿಸಲಾಗಿದೆ ಮತ್ತು ಇದು 2027 ರ ವೇಳೆಗೆ 21.3 ಬಿಲಿಯನ್ ಡಾಲರ್ ಗೆ (1.74 ಲಕ್ಷ ಕೋಟಿ ರೂ.) ತಲುಪುವ ನಿರೀಕ್ಷೆಯಿದೆ.

ಕೇಂದ್ರ ನೀತಿ ಆಯೋಗ
ಪ್ರಧಾನಿ ಮೋದಿ ನೇತೃತ್ವದ ನೀತಿ ಆಯೋಗ ಸಭೆಯಿಂದ ಹೊರಗುಳಿದ ನಿತೀಶ್ ಕುಮಾರ್, ಕೆಸಿಆರ್

ಚಿಕಿತ್ಸೆಗಾಗಿ ಆಸ್ಪತ್ರೆಯ ವೆಚ್ಚಗಳಿಗೆ ಹೋಲಿಸಿದರೆ ಹೋಮ್ ಹೆಲ್ತ್ಕೇರ್ ಮಾರುಕಟ್ಟೆಯು ಮೂಲಸೌಕರ್ಯ ಮತ್ತು ಕಾರ್ಯಾಚರಣೆಯ ವೆಚ್ಚಗಳಲ್ಲಿ 15-30 ಪ್ರತಿಶತದಷ್ಟು ಕಡಿತಕ್ಕೆ ಕಾರಣವಾಗಬಹುದು ಎಂದು ಐಟಿಎ ಹೇಳಿದೆ.

"ನಾವು ವೃದ್ಧರ ಸಾಮಾಜಿಕ ಭದ್ರತೆಯನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ಯೋಗಕ್ಷೇಮ ಮತ್ತು ಆರೈಕೆಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ" ಎಂದು ನೀತಿ ಆಯೋಗದ ಸದಸ್ಯ (ಆರೋಗ್ಯ) ವಿ ಕೆ ಪಾಲ್ ವರದಿ ಬಿಡುಗಡೆಯ ಸಂದರ್ಭದಲ್ಲಿ ಹೇಳಿದರು. ವೈದ್ಯಕೀಯ ಮತ್ತು ಸಾಮಾಜಿಕ ಅಂಶಗಳ ಜೊತೆಗೆ ಹಿರಿಯ ಆರೈಕೆಯ ವಿಶೇಷ ಆಯಾಮಗಳ ಬಗ್ಗೆ ಯೋಚಿಸಲು ಪ್ರಾರಂಭಿಸುವ ಸಮಯ ಇದು ಎಂದು ನೀತಿ ಆಯೋಗದ ಉಪಾಧ್ಯಕ್ಷ ಸುಮನ್ ಬೆರಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com