ರಾಮ ಮಂದಿರ ನಿರ್ಮಾಣದ ನಂತರವೂ ಕಾಂಗ್ರೆಸ್ ನಕಾರಾತ್ಮಕವಾಗಿದೆ, ದ್ವೇಷವನ್ನು ಬಿಡುತ್ತಿಲ್ಲ: ಪ್ರಧಾನಿ ಮೋದಿ

ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣವಾಗಿದ್ದರೂ ಕಾಂಗ್ರೆಸ್ ಋಣಾತ್ಮಕವಾಗಿಯೇ ಚಿಂತಿಸುತ್ತಿದೆ ಮತ್ತು ದ್ವೇಷದ ಹಾದಿಯನ್ನು ಬಿಡಲು ಸಿದ್ಧವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಪ್ರತಿಪಕ್ಷವನ್ನು ಗುರಿಯಾಗಿಸಿ ಟೀಕಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ

ಮೆಹ್ಸಾನಾ: ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣವಾಗಿದ್ದರೂ ಕಾಂಗ್ರೆಸ್ ಋಣಾತ್ಮಕವಾಗಿಯೇ ಚಿಂತಿಸುತ್ತಿದೆ ಮತ್ತು ದ್ವೇಷದ ಹಾದಿಯನ್ನು ಬಿಡಲು ಸಿದ್ಧವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಪ್ರತಿಪಕ್ಷವನ್ನು ಗುರಿಯಾಗಿಸಿ ಟೀಕಿಸಿದ್ದಾರೆ.

ಗುಜರಾತ್‌ನ ಮೆಹ್ಸಾನಾ ಜಿಲ್ಲೆಯಲ್ಲಿ ವಲಿನಾಥ ಮಹಾದೇವ್ ದೇವಾಲಯವನ್ನು ಉದ್ಘಾಟಿಸಿದ ನಂತರ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು. 8,350 ರೂ. ಕೋಟಿಗೂ ಹೆಚ್ಚು ವೆಚ್ಚದ ವಿವಿಧ ಯೋಜನೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದರು.

ಸ್ವತಂತ್ರ ಭಾರತದಲ್ಲಿ ದೀರ್ಘಕಾಲದವರೆಗೆ ಕಾಂಗ್ರೆಸ್ ಅಭಿವೃದ್ಧಿ ಮತ್ತು ಪರಂಪರೆಯ ನಡುವೆ ಸಂಘರ್ಷ ಮತ್ತು ದ್ವೇಷವನ್ನು ಸೃಷ್ಟಿಸಿದೆ. ಇದಕ್ಕೆ ಯಾರನ್ನಾದರೂ ದೂಷಿಸುವುದಾದರೆ, ಅದು ಕಾಂಗ್ರೆಸ್ ಆಗಿರುತ್ತದೆ. ಯಾಕೆಂದರೆ ದಶಕಗಳ ಕಾಲ ದೇಶವನ್ನು ಆಳಿದ್ದು ಇದೇ ಕಾಂಗ್ರೆಸ್. ಸೋಮನಾಥ (ದೇಗುಲ)ದಂತಹ ಪವಿತ್ರ ಸ್ಥಳವನ್ನೂ ವಿವಾದಕ್ಕೆ ಕಾರಣವನ್ನಾಗಿಸಿದವರು ಇದೇ ಜನರು ಎಂದರು

ಗುಜರಾತ್‌ನ ಪಂಚಮಹಲ್ ಜಿಲ್ಲೆಯ ಪಾವಗಡ ದೇವಸ್ಥಾನದಲ್ಲಿ ಧಾರ್ಮಿಕ ಧ್ವಜಾರೋಹಣ ಮಾಡುವ ಇಚ್ಛೆಯನ್ನು ಕಾಂಗ್ರೆಸ್ ತೋರಿಸಲಿಲ್ಲ ಮತ್ತು ದಶಕಗಳಿಂದ ಮೊಧೇರಾದ ಸೂರ್ಯ ದೇವಾಲಯವನ್ನು ಮತ ಬ್ಯಾಂಕ್ ರಾಜಕೀಯಕ್ಕೆ ಬಳಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ
GCMMFಗೆ ವಿಶ್ವದ ಅತಿದೊಡ್ಡ ಡೈರಿ ಕಂಪನಿಯನ್ನಾಗಿಸುವ ಗುರಿ, ಅಮುಲ್‌ಗೆ ಸರಿಸಾಟಿ ಬ್ರಾಂಡ್ ಇಲ್ಲ: ಪ್ರಧಾನಿ

ಇದೇ ಜನರು ಶ್ರೀರಾಮನ ಅಸ್ತಿತ್ವದ ಬಗ್ಗೆ ಪ್ರಶ್ನೆಗಳನ್ನು ಎತ್ತಿದರು ಮತ್ತು ಮಂದಿರ ನಿರ್ಮಾಣದ ವಿಚಾರದಲ್ಲಿ ಅಡೆತಡೆಗಳನ್ನು ಸೃಷ್ಟಿಸಿದರು. ಇಂದು ಭಗವಾನ್ ರಾಮನ ಜನ್ಮಸ್ಥಳದಲ್ಲಿ ಭವ್ಯವಾದ ದೇವಾಲಯವನ್ನು ನಿರ್ಮಿಸಲಾಗಿದ್ದು, ಇಡೀ ದೇಶವು ಸಂತೋಷ ಪಡುತ್ತಿದ್ದು, ನಕಾರಾತ್ಮಕ ಜನರು ದ್ವೇಷದ ಹಾದಿಯನ್ನು ಬಿಡುತ್ತಿಲ್ಲ ಎಂದು ಅವರು ಹೇಳಿದರು.

ದೀಸಾದಲ್ಲಿ (ಗುಜರಾತ್‌ನ ಬನಸ್ಕಾಂತ ಜಿಲ್ಲೆಯಲ್ಲಿ) ಏರ್ ಫೋರ್ಸ್ ಸ್ಟೇಷನ್ ರನ್‌ವೇ ವಿಚಾರವಾಗಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ,ಇದು ಭಾರತದ ಭದ್ರತೆಯ ಪ್ರಮುಖ ಕೇಂದ್ರವಾಗಿ ಅಭಿವೃದ್ಧಿ ಹೊಂದಲಿದೆ. 'ಅಂದಿನ ಗುಜರಾತ್ ಮುಖ್ಯಮಂತ್ರಿಯಾಗಿ ನಾನು ಹಲವಾರು ಪತ್ರಗಳನ್ನು ಬರೆದಿದ್ದೇನೆ ಮತ್ತು ಇದಕ್ಕಾಗಿ ಸಾಕಷ್ಟು ಪ್ರಯತ್ನಿಸಿದೆ. ಆದರೆ ಕೇಂದ್ರದಲ್ಲಿ ಆಗಿನ ಕಾಂಗ್ರೆಸ್ ಸರ್ಕಾರವು ಅಡೆತಡೆಗಳನ್ನು ಸೃಷ್ಟಿಸಲು ಪ್ರಯತ್ನಿಸಿದೆ ಎಂದರು.

ವಾಯುಪಡೆಯ ಜನರು ಸಹ ಭಾರತದ ಭದ್ರತೆಯ ದೃಷ್ಟಿಯಿಂದ ಈ ಸ್ಥಳವು ಮುಖ್ಯವಾಗಿದೆ ಎಂದು ಹೇಳಿದರು. ಆದರೆ, ಅವರು ಕೇಳಲಿಲ್ಲ. 2004 ರಿಂದ 2014 ರವರೆಗೆ ಕಾಂಗ್ರೆಸ್ ಸರ್ಕಾರ ಕಡತದ ಮೇಲೆ ಕುಳಿತಿತ್ತು. ಸುಮಾರು ಒಂದೂವರೆ ವರ್ಷಗಳ ಹಿಂದೆ, ನಾನು ಯೋಜನೆಗೆ ಅಡಿಪಾಯ ಹಾಕಿದೆ. ಏಕೆಂದರೆ ಮೋದಿ ತಾವು ನಿರ್ಧರಿಸಿದ್ದನ್ನು ಮಾಡುತ್ತಾರೆ ಎಂದು ಪ್ರಧಾನಿ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ
ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ: ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯ ವೈಭವ ಕಣ್ತುಂಬಿಕೊಳ್ಳಿ- PHOTOS

ಸಾರ್ವಜನಿಕ ಸಮಾರಂಭದಲ್ಲಿ ಪಾಲ್ಗೊಳ್ಳುವ ಮೊದಲು ಪ್ರಧಾನಿ ವಲಿನಾಥ ಧಾಮ್ ದೇವಾಲಯದ ಶಂಕುಸ್ಥಾಪನೆ ಸಮಾರಂಭದಲ್ಲಿ ಭಾಗವಹಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com