GCMMFಗೆ ವಿಶ್ವದ ಅತಿದೊಡ್ಡ ಡೈರಿ ಕಂಪನಿಯನ್ನಾಗಿಸುವ ಗುರಿ, ಅಮುಲ್‌ಗೆ ಸರಿಸಾಟಿ ಬ್ರಾಂಡ್ ಇಲ್ಲ: ಪ್ರಧಾನಿ

ಅಮುಲ್ ಬ್ರಾಂಡ್ ಅನ್ನು ಹೊಂದಿರುವ ಜಿಸಿಎಂಎಂಎಫ್ ಅನ್ನು ಸದ್ಯ ಇರುವ ಎಂಟನೇ ಸ್ಥಾನದಿಂದ ವಿಶ್ವದ ನಂಬರ್ ಒನ್ ಡೈರಿ ಕಂಪನಿಯನ್ನಾಗಿಸುವ ಗುರಿಯನ್ನು ಪ್ರಧಾನಿ ನರೇಂದ್ರ ಮೋದಿ ಗುರುವಾರ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ

ಅಹಮದಾಬಾದ್: ಅಮುಲ್ ಬ್ರಾಂಡ್ ಅನ್ನು ಹೊಂದಿರುವ ಜಿಸಿಎಂಎಂಎಫ್ ಅನ್ನು ಸದ್ಯ ಇರುವ ಎಂಟನೇ ಸ್ಥಾನದಿಂದ ವಿಶ್ವದ ನಂಬರ್ ಒನ್ ಡೈರಿ ಕಂಪನಿಯನ್ನಾಗಿಸುವ ಗುರಿಯನ್ನು ಪ್ರಧಾನಿ ನರೇಂದ್ರ ಮೋದಿ ಗುರುವಾರ ನೀಡಿದ್ದಾರೆ.

ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ 'ಅಮುಲ್' ಬ್ರಾಂಡ್ ಅಡಿಯಲ್ಲಿ ತನ್ನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟದ (ಜಿಸಿಎಂಎಂಎಫ್) ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಪ್ರಧಾನಿ ಮಾತನಾಡಿದರು.

'ಜಾಗತಿಕ ಡೈರಿ ಕ್ಷೇತ್ರವು ವರ್ಷಕ್ಕೆ 2 ಪ್ರತಿಶತದಷ್ಟು ಅಭಿವೃದ್ಧಿ ಹೊಂದುತ್ತಿದ್ದರೆ, ಭಾರತದ ಡೈರಿ ಕ್ಷೇತ್ರವು 6 ಪ್ರತಿಶತದಷ್ಟು ಅಭಿವೃದ್ಧಿ ಹೊಂದುತ್ತಿದೆ. ಇಂದು ಅಮುಲ್ (ಜಿಸಿಎಂಎಂಎಫ್) ವಿಶ್ವದ ಎಂಟನೇ ಅತಿದೊಡ್ಡ ಡೈರಿ ಕಂಪನಿಯಾಗಿದೆ. ಅದನ್ನು ನಂಬರ್ ಒನ್ ಮಾಡುವುದು ನಿಮ್ಮ ಗುರಿಯಾಗಿದೆ. ಇದಕ್ಕಾಗಿ ಸರ್ಕಾರವು ಅಗತ್ಯವಿರು ಎಲ್ಲಾ ಬೆಂಬಲವನ್ನು ನೀಡುತ್ತದೆ. ಇದು ಮೋದಿ ಗ್ಯಾರಂಟಿ' ಎಂದು ಅವರು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ
ಕೇಂದ್ರ ಬಜೆಟ್: ಹಾಲು, ಡೈರಿ ಉತ್ಪಾದನೆ ಹೆಚ್ಚಿಸುವ ಯೋಜನೆ ಪ್ರಕಟಿಸಿದ ನಿರ್ಮಲಾ ಸೀತಾರಾಮನ್

ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಸಹಕಾರಿ ಡೇರಿ ಯೂನಿಯನ್‌ನ ಸಾವಿರಾರು ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಮೋದಿ, 'ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಹಲವು ಬ್ರಾಂಡ್‌ಗಳು ಸೃಷ್ಟಿಯಾದವು. ಆದರೆ, ಅವುಗಳಲ್ಲಿ ಯಾವುದೂ ಅಮುಲ್‌ನಂತಿಲ್ಲ. ದೇಶದ ಡೈರಿ ಸಹಕಾರಿ ಆಂದೋಲನದ ಅಭಿವೃದ್ಧಿಯಲ್ಲಿ ಮಹಿಳೆಯರ ಕೊಡುಗೆ ಅತ್ಯುನ್ನತವಾಗಿದೆ ಎಂದರು.

'ಭಾರತದ ಹೈನುಗಾರಿಕೆ ಕ್ಷೇತ್ರವು ಮಹಿಳಾ ನೇತೃತ್ವದ ಅಭಿವೃದ್ಧಿಯನ್ನು ಕಂಡಿದೆ. ಮಹಿಳೆಯರು ಡೈರಿ ಕ್ಷೇತ್ರದ ಬೆನ್ನೆಲುಬು' ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com