ಛತ್ತೀಸ್‌ಗಢ: ಸುಕ್ಮಾ ಎನ್‌ಕೌಂಟರ್‌ನಲ್ಲಿ ನಕ್ಸಲ್ ಹತ್ಯೆ

ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯಲ್ಲಿ ಶನಿವಾರ ನಸುಕಿನ ಜಾವ ಜಿಲ್ಲಾ ಮೀಸಲು ಗಾರ್ಡ್‌ಗಳು (DRG) ಮತ್ತು ನಕ್ಸಲೀಯರ ಮಧ್ಯೆ ನಡೆದ ಎನ್ ಕೌಂಟರ್ ನಲ್ಲಿ ಒಬ್ಬ ನಕ್ಸಲ್ ಹತನಾಗಿದ್ದಾನೆ.
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ
Updated on

ಸುಕ್ಮಾ (ಛತ್ತೀಸ್‌ಗಢ): ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯಲ್ಲಿ ಶನಿವಾರ ನಸುಕಿನ ಜಾವ ಜಿಲ್ಲಾ ಮೀಸಲು ಗಾರ್ಡ್‌ಗಳು (DRG) ಮತ್ತು ನಕ್ಸಲೀಯರ ಮಧ್ಯೆ ನಡೆದ ಎನ್ ಕೌಂಟರ್ ನಲ್ಲಿ ಒಬ್ಬ ನಕ್ಸಲ್ ಹತನಾಗಿದ್ದಾನೆ.

ಛತ್ತೀಸ್‌ಗಢ ಪೊಲೀಸರ ಪ್ರಕಾರ, ಬುರ್ಕಲಂಕ ಜಂಗಲ್ ಪ್ರದೇಶದಲ್ಲಿ ಡಿಆರ್‌ಜಿ ಜವಾನರು ಮತ್ತು ದುಷ್ಕರ್ಮಿಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ನಕ್ಸಲ್ ಮೃತಪಟ್ಟಿದ್ದಾನೆ.

ಡಿಆರ್‌ಜಿ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ನಕ್ಸಲ್ ಶವ ಪತ್ತೆಯಾಗಿದೆ ಎಂದು ಸುಕ್ಮಾ ಎಸ್‌ಪಿ ಕಿರಣ್ ಚೌಹಾಣ್ ಮಾಹಿತಿ ನೀಡಿದ್ದಾರೆ.

ಈ ಪ್ರದೇಶದಲ್ಲಿ ಶೋಧ ಕಾರ್ಯ ಮುಂದುವರಿದಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com