2024 ಲೋಕಸಭೆ ಚುನಾವಣೆ: ಮುಂದಿನ ಮೂರು ತಿಂಗಳು 'ಮನ್ ಕಿ ಬಾತ್' ಇರಲ್ಲ

ಮುಂಬರುವ ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಮಾಸಿಕ ರೇಡಿಯೋ ಕಾರ್ಯಕ್ರಮ 'ಮನ್ ಕಿ ಬಾತ್' ಮುಂದಿನ ಮೂರು ತಿಂಗಳವರೆಗೆ ಪ್ರಸಾರವಾಗುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ.
ಪ್ರಧಾನಿ ಮೋದಿ ಮನ್ ಕಿ ಬಾತ್ ಕಾರ್ಯಕ್ರಮ
ಪ್ರಧಾನಿ ಮೋದಿ ಮನ್ ಕಿ ಬಾತ್ ಕಾರ್ಯಕ್ರಮ

ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಮಾಸಿಕ ರೇಡಿಯೋ ಕಾರ್ಯಕ್ರಮ 'ಮನ್ ಕಿ ಬಾತ್' ಮುಂದಿನ ಮೂರು ತಿಂಗಳವರೆಗೆ ಪ್ರಸಾರವಾಗುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ.

'ಮುಂಬರುವ ಲೋಕಸಭಾ ಚುನಾವಣೆಯಿಂದಾಗಿ ಮುಂದಿನ ಮೂರು ತಿಂಗಳ ಕಾಲ ಮನ್ ಕಿ ಬಾತ್ ಇರುವುದಿಲ್ಲ' ಎಂದು ಪ್ರಧಾನಿ ಮೋದಿ ತಮ್ಮ 110ನೇ ಆವೃತ್ತಿಯ ಕಾರ್ಯಕ್ರಮದಲ್ಲಿ ರಾಷ್ಟ್ರವನ್ನುದ್ದೇಶಿಸಿ ಹೇಳಿದರು.

ಪ್ರಧಾನಿ ನರೇಂದ್ರ ಮೋದಿಯವರ ಮಾಸಿಕ ರೇಡಿಯೋ ಕಾರ್ಯಕ್ರಮದ 110ನೇ ಸಂಚಿಕೆಯಾದ ಮನ್ ಕಿ ಬಾತ್ ಭಾನುವಾರ ಬೆಳಿಗ್ಗೆ 11 ಗಂಟೆಗೆ ಪ್ರಸಾರವಾಯಿತು. ಇದು ಅವರ ಈ ವರ್ಷದ ಎರಡನೇ ಕಾರ್ಯಕ್ರಮವಾಗಿದೆ. ಪ್ರತಿ ತಿಂಗಳ ಕೊನೆಯ ಭಾನುವಾರದಂದು ಕಾರ್ಯಕ್ರಮವನ್ನು ಪ್ರಸಾರ ಮಾಡಲಾಗುತ್ತದೆ.

2014ರ ಅಕ್ಟೋಬರ್ 3 ರಂದು ಪ್ರಾರಂಭವಾದ ಮನ್ ಕಿ ಬಾತ್ ಕಾರ್ಯಕ್ರಮವು, ಮಹಿಳೆಯರು, ವೃದ್ಧರು ಮತ್ತು ಯುವಕರನ್ನು ಒಳಗೊಳ್ಳುವ ಭಾರತೀಯ ಸಮಾಜದ ವಿವಿಧ ವಿಭಾಗಗಳೊಂದಿಗೆ ಸಂಪರ್ಕ ಸಾಧಿಸುವ ಗುರಿಯನ್ನು ಹೊಂದಿದೆ. ಈ ಕಾರ್ಯಕ್ರಮದ ಮೂಲಕ, ಪ್ರಧಾನಿ ಮೋದಿ ಅವರು ಸರ್ಕಾರದ ಉಪಕ್ರಮಗಳು, ನೀತಿಗಳು ಮತ್ತು ಕಲ್ಯಾಣ ಯೋಜನೆಗಳ ಬಗ್ಗೆ ಮಾಹಿತಿ ನೀಡುತ್ತಾರೆ.

ಪ್ರಧಾನಿ ಮೋದಿ ಮನ್ ಕಿ ಬಾತ್ ಕಾರ್ಯಕ್ರಮ
2023ನೇ ವರ್ಷದ ಕೊನೆಯ ಮನ್ ಕಿ ಬಾತ್: ‘2024ರಲ್ಲೂ ನಾವು ಅದೇ ಉತ್ಸಾಹ, ಆವೇಗ ಕಾಯ್ದುಕೊಳ್ಳಬೇಕು’ ಎಂದ ಪ್ರಧಾನಿ ಮೋದಿ

22 ಭಾರತೀಯ ಭಾಷೆಗಳು ಮತ್ತು 29 ಉಪಭಾಷೆಗಳನ್ನು ಹೊರತುಪಡಿಸಿ, 'ಮನ್ ಕಿ ಬಾತ್' ಕಾರ್ಯಕ್ರಮವನ್ನು ಫ್ರೆಂಚ್, ಚೈನೀಸ್, ಇಂಡೋನೇಷಿಯನ್, ಟಿಬೆಟಿಯನ್, ಬರ್ಮೀಸ್, ಬಲೂಚಿ, ಅರೇಬಿಕ್, ಪಶ್ತು, ಪರ್ಷಿಯನ್, ದರಿ ಮತ್ತು ಸ್ವಾಹಿಲಿ ಸೇರಿದಂತೆ 11 ವಿದೇಶಿ ಭಾಷೆಗಳಲ್ಲಿ ಪ್ರಸಾರ ಮಾಡಲಾಗುತ್ತದೆ. ಮನ್ ಕಿ ಬಾತ್ ಅನ್ನು ಆಲ್ ಇಂಡಿಯಾ ರೇಡಿಯೊದ 500ಕ್ಕೂ ಹೆಚ್ಚು ಕೇಂದ್ರಗಳು ಪ್ರಸಾರ ಮಾಡುತ್ತವೆ.

ಜನರ ಜೀವನದ ಮೇಲೆ 'ಮನ್ ಕಿ ಬಾತ್' ಪ್ರಭಾವದ ಕುರಿತು ನಡೆಸಿದ ಅಧ್ಯಯನವು, 100 ಕೋಟಿಗೂ ಹೆಚ್ಚು ಜನರು ಒಮ್ಮೆಯಾದರೂ 'ಮನ್ ಕಿ ಬಾತ್' ಕಾರ್ಯಕ್ರಮದ ಸಂಪರ್ಕ ಹೊಂದಿದ್ದಾರೆ. ಇದು ಜನರೊಂದಿಗೆ ನೇರವಾಗಿ ಮಾತನಾಡುತ್ತದೆ, ತಳಮಟ್ಟದಲ್ಲಿ ಬದಲಾವಣೆ ತರುವವರು ಮತ್ತು ಸಾಧನೆ ಮಾಡಿದವರನ್ನು ಹೊಗಳುತ್ತದೆ. ಜನರನ್ನು ಧನಾತ್ಮಕ ಕ್ರಿಯೆಗಳ ಕಡೆಗೆ ಪ್ರೇರೇಪಿಸುತ್ತದೆ.

ಪ್ರತಿ ಕ್ಷೇತ್ರದಲ್ಲೂ ಮಹಿಳಾ ಶಕ್ತಿಯು ಹೊಸ ಎತ್ತರಕ್ಕೇರಿದೆ

ಗಮನಾರ್ಹವಾಗಿ, ಭಾನುವಾರದಂದು ತಮ್ಮ 110ನೇ ಆವೃತ್ತಿಯ 'ಮನ್ ಕಿ ಬಾತ್'ನಲ್ಲಿ ಮಾತನಾಡಿದ ಪ್ರಧಾನಿ, 'ದೇಶದಲ್ಲಿ ಮಹಿಳಾ ಶಕ್ತಿಯು ಪ್ರತಿಯೊಂದು ಕ್ಷೇತ್ರದಲ್ಲೂ ಪ್ರಗತಿಯ ಹೊಸ ಎತ್ತರವನ್ನು ಮುಟ್ಟುತ್ತಿದೆ. ಮಾರ್ಚ್ 8 ರಂದು ನಾವು ಮಹಿಳಾ ದಿನವನ್ನು ಆಚರಿಸುತ್ತೇವೆ. ಈ ವಿಶೇಷ ದಿನವು ದೇಶದ ಅಭಿವೃದ್ಧಿಯಲ್ಲಿ ಮಹಿಳಾ ಶಕ್ತಿಯ ಕೊಡುಗೆಗಳಿಗಾಗಿ ವಂದಿಸಲು ಲಭ್ಯವಾಗುವ ಒಂದು ಅವಕಾಶವಾಗಿದೆ. ಮಹಾಕವಿ ಭಾರತಿಯಾರ್ ಜೀ ಅವರು, ಮಹಿಳೆಯರಿಗೆ ಸಮಾನ ಅವಕಾಶಗಳು ಸಿಕ್ಕಾಗ ಮಾತ್ರ ಜಗತ್ತು ಅಭಿವೃದ್ಧಿ ಹೊಂದುತ್ತದೆ ಎಂದು ಹೇಳಿದ್ದಾರೆ. ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆಯರ ಶಕ್ತಿ ಹೊಸ ಎತ್ತರವನ್ನು ಮುಟ್ಟುತ್ತಿದೆ' ಎಂದು ಹೇಳಿದರು.

ಪ್ರಧಾನಿ ಮೋದಿ ಮನ್ ಕಿ ಬಾತ್ ಕಾರ್ಯಕ್ರಮ
ಭಾಷಾ ನ್ಯೂನತೆ ನಿವಾರಿಸಲು ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಸಹಾಯ, ಎಐ ತಂತ್ರಜ್ಞಾನದಿಂದ ಸಂಶೋಧನೆ: 'ಮನ್ ಕಿ ಬಾತ್' ನಲ್ಲಿ ಪ್ರಧಾನಿ ಮೋದಿ

ಕಳೆದ ವರ್ಷ ಪ್ರಧಾನಿ ಮೋದಿಯವರು ಪ್ರಾರಂಭಿಸಿದ 'ನಮೋ ಡ್ರೋನ್ ದೀದಿ' ಯೋಜನೆ ಬಗ್ಗೆ ಮಾತನಾಡಿದ ಪ್ರಧಾನಿ, ಈ ಉಪಕ್ರಮವು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಮಹಿಳೆಯರ ಜೀವನದಲ್ಲಿ ಬದಲಾವಣೆಗಳನ್ನು ತಂದಿದೆ ಎಂದು ಹೇಳಿದರು.

'ನಮ್ಮ ದೇಶದಲ್ಲಿ ಹಳ್ಳಿಗಳಲ್ಲಿ ವಾಸಿಸುವ ಮಹಿಳೆಯರೂ ಡ್ರೋನ್‌ಗಳನ್ನು ಹಾರಿಸುತ್ತಾರೆ ಎಂದು ಕೆಲವು ವರ್ಷಗಳ ಹಿಂದೆ ಯಾರು ಭಾವಿಸಿದ್ದರು?. ಆದರೆ, ಇಂದು ಇದು ಸಾಧ್ಯವಾಗುತ್ತಿದೆ. ಇಂದು ಪ್ರತಿ ಹಳ್ಳಿಯಲ್ಲಿ ಡ್ರೋನ್ ದೀದಿ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ, ಎಲ್ಲರ ಬಾಯಲ್ಲೂ ನಮೋ ಡ್ರೋನ್ ದೀದಿ ಬಗ್ಗೆ ಕೇಳಿಬರುತ್ತಿದೆ. ಎಲ್ಲರೂ ಅವರ ಬಗ್ಗೆಯೇ ಮಾತನಾಡುತ್ತಿದ್ದಾರೆ' ಎಂದರು.

ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಅವರು ನಮೋ ಡ್ರೋನ್ ದೀದಿ ಯೋಜನೆಗೆ ಚಾಲನೆ ನೀಡಿದ್ದರು. ಅಲ್ಲಿಂದೀಚೆಗೆ, IFFCO ಹೊರತುಪಡಿಸಿ, ಅನೇಕ ರಸಗೊಬ್ಬರ ಕಂಪನಿಗಳು 'ಲಖಪತಿ ದೀದಿ'ಯಂತಹ ಸ್ವ-ಸಹಾಯ ಗುಂಪು ಯೋಜನೆಗಳಲ್ಲಿ ಕೆಲಸ ಮಾಡುವ ಮಹಿಳೆಯರನ್ನು ಸಬಲೀಕರಣಗೊಳಿಸಲು ಮುಂದೆ ಬಂದಿವೆ.

ಈ 'ಡ್ರೋನ್ ಕಿ ಉಡಾನ್' ಕಾರ್ಯಕ್ರಮದ ಅಡಿಯಲ್ಲಿ, ಸ್ವಸಹಾಯ ಗುಂಪುಗಳು ಡ್ರೋನ್ ಕಾರ್ಯಾಚರಣೆ ಮತ್ತು ನಿರ್ವಹಣೆಯ ಬಗ್ಗೆ ತರಬೇತಿ ಪಡೆಯುತ್ತವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com