ಸ್ಕೂಬಾ ಡೈವಿಂಗ್‌ ಮಾಡಿ ಪ್ರಾಚೀನ ದ್ವಾರಕಾ ನಗರದಲ್ಲಿ ಅಂಡರ್ ವಾಟರ್ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ

ಭಾರತದ ಪ್ರಚೀನ ನಗರಿ ದ್ವಾರಕಾಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಅರಬ್ಬೀ ಸಮುದ್ರದ ಪಂಚಕುಯಿ ಕರಾವಳಿ ತೀರದ ಬಳಿ ಸ್ಕೂಬಾ ಡೈವಿಂಗ್‌ ಮಾಡಿ ಅಂಡರ್ ವಾಟರ್ ಪೂಜೆ ಸಲ್ಲಿಸಿದ್ದಾರೆ.
ದ್ವಾರಕಾ ನಗರದಲ್ಲಿ ಅಂಡರ್ ವಾಟರ್ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ
ದ್ವಾರಕಾ ನಗರದಲ್ಲಿ ಅಂಡರ್ ವಾಟರ್ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ

ದ್ವಾರಕಾ: ಭಾರತದ ಪ್ರಚೀನ ನಗರಿ ದ್ವಾರಕಾಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಅರಬ್ಬೀ ಸಮುದ್ರದ ಪಂಚಕುಯಿ ಕರಾವಳಿ ತೀರದ ಬಳಿ ಸ್ಕೂಬಾ ಡೈವಿಂಗ್‌ ಮಾಡಿ ಅಂಡರ್ ವಾಟರ್ ಪೂಜೆ ಸಲ್ಲಿಸಿದ್ದಾರೆ.

ಈ ವಿಚಾರವಾಗಿ ಸ್ವತಃ ಪ್ರದಾನಿ ಮೋದಿ ಟ್ವೀಟ್ ಮೂಲಕ ಮಾಹಿತಿ ನೀಡಿದ್ದು, 'ಗುಜರಾತ್‌ಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿಯವರು ಭಾನುವಾರ ದ್ವಾರಕಾ ನಗರದಲ್ಲಿ ಅರಬ್ಬೀ ಸಮುದ್ರದ ಪಂಚಕುಯಿ ಕರಾವಳಿ ತೀರದ ಬಳಿ ಸ್ಕೂಬಾ ಡೈವಿಂಗ್‌ ಮಾಡಿದ್ದಾರೆ. ‘ನೀರಿನಲ್ಲಿ ಮುಳುಗಿರುವುದು ದೈವಿಕ ಅನುಭವ ನೀಡಿದೆ’ ಎಂದಿದ್ದಾರೆ.

ದ್ವಾರಕಾ ನಗರದಲ್ಲಿ ಅಂಡರ್ ವಾಟರ್ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ
ಗುಜರಾತ್ ನ ದ್ವಾರಕಾದಲ್ಲಿ 'ಸುದರ್ಶನ್ ಸೇತುವೆ' ಉದ್ಘಾಟಿಸಿದ ಪಿಎಂ ಮೋದಿ, ಏನಿದರ ವಿಶೇಷತೆ?

‘ನೀರಿನಲ್ಲಿ ಮುಳುಗಿರುವ ದ್ವಾರಕಾ ನಗರದಲ್ಲಿ ಪ್ರಾರ್ಥನೆ ಮಾಡುವುದು ಅತ್ಯಂತ ದಿವ್ಯವಾದ ಅನುಭವವಾಗಿತ್ತು. ನಾನು ಆಧ್ಯಾತ್ಮಿಕ ಭವ್ಯತೆ ಮತ್ತು ಪ್ರಾಚೀನ ಯುಗಕ್ಕೆ ಹೋದಂತೆ ಭಾಸವಾಯಿತು. ಭಗವಾನ್ ಶ್ರೀ ಕೃಷ್ಣ ನಮ್ಮೆಲ್ಲರನ್ನು ಆಶೀರ್ವದಿಸಲಿ’ ಎಂದು ಮೋದಿ ಬರೆದುಕೊಂಡಿದ್ದಾರೆ. ಅಲ್ಲದೆ ನೀರಿನಲ್ಲಿ ಮುಳುಗಿದ ಕೆಲವು ಫೋಟೊಗಳನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಬಳಿಕ ದ್ವಾರಕಾದದಲ್ಲಿ ಪ್ರಧಾನಿ ಮೋದಿ ಕೃಷ್ಣ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಸ್ಕೂಬಾ ಡೈವಿಂಗ್ ಅನ್ನು ‘ಬೇಟ್ ದ್ವಾರಕಾ ದ್ವೀಪ’ದ ಬಳಿ ನಡೆಸಲಾಗುತ್ತದೆ. ಸಮುದ್ರ ಆಳದಲ್ಲಿ ಪುರಾತತ್ವ ತಜ್ಞರು ಉತ್ಖನನ ಮಾಡಿದ ಪ್ರಾಚೀನ ದ್ವಾರಕಾ ನಗರದ ಅವಶೇಷಗಳನ್ನು ಇಲ್ಲಿ ನೋಡಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com