ಟಿಎಂಸಿ ನಾಯಕ ಶಾಜಹಾನ್ ಶೇಖ್‌ ಬಂಧನಕ್ಕೆ ತಡೆ ಇಲ್ಲ, ಪೊಲೀಸರು ಬಂಧಿಸಬಹುದು: ಸಂದೇಶ್‌ಖಾಲಿ ವಿವಾದಕ್ಕೆ ಕಲ್ಕತ್ತಾ ಹೈಕೋರ್ಟ್

ಸಂದೇಶ್‌ಖಾಲಿಯಲ್ಲಿ ಲೈಂಗಿಕ ದೌರ್ಜನ್ಯ ಮತ್ತು ಭೂಕಬಳಿಕೆಯ ಆರೋಪ ಹೊತ್ತಿರುವ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕ ಶೇಖ್ ಶಾಜಹಾನ್ ಬಂಧನಕ್ಕೆ ಯಾವುದೇ ತಡೆ ಇಲ್ಲ ಎಂದು ಕಲ್ಕತ್ತಾ ಹೈಕೋರ್ಟ್ ಸೋಮವಾರ ಸ್ಪಷ್ಟಪಡಿಸಿದೆ.
ಉತ್ತರ 24 ಪರಗಣ ಜಿಲ್ಲೆಯಲ್ಲಿ ಸಂದೇಶ್‌ಖಾಲಿ ಘಟನೆಯ ಆರೋಪದ ಮೇಲೆ ಸ್ಥಳೀಯ ಟಿಎಂಸಿ ನಾಯಕರನ್ನು ಬಂಧಿಸುವಂತೆ ಒತ್ತಾಯಿಸಿ ಪೋಸ್ಟರ್‌ಗಳನ್ನು ಹಿಡಿದ ಮಹಿಳೆಯರು ಪ್ರತಿಭಟನೆ ನಡೆಸಿದರು.
ಉತ್ತರ 24 ಪರಗಣ ಜಿಲ್ಲೆಯಲ್ಲಿ ಸಂದೇಶ್‌ಖಾಲಿ ಘಟನೆಯ ಆರೋಪದ ಮೇಲೆ ಸ್ಥಳೀಯ ಟಿಎಂಸಿ ನಾಯಕರನ್ನು ಬಂಧಿಸುವಂತೆ ಒತ್ತಾಯಿಸಿ ಪೋಸ್ಟರ್‌ಗಳನ್ನು ಹಿಡಿದ ಮಹಿಳೆಯರು ಪ್ರತಿಭಟನೆ ನಡೆಸಿದರು.
Updated on

ಕೋಲ್ಕತ್ತಾ: ಸಂದೇಶ್‌ಖಾಲಿಯಲ್ಲಿ ಲೈಂಗಿಕ ದೌರ್ಜನ್ಯ ಮತ್ತು ಭೂಕಬಳಿಕೆಯ ಆರೋಪ ಹೊತ್ತಿರುವ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕ ಶೇಖ್ ಶಾಜಹಾನ್ ಬಂಧನಕ್ಕೆ ಯಾವುದೇ ತಡೆ ಇಲ್ಲ ಎಂದು ಕಲ್ಕತ್ತಾ ಹೈಕೋರ್ಟ್ ಸೋಮವಾರ ಸ್ಪಷ್ಟಪಡಿಸಿದೆ.

ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಬುಡಕಟ್ಟು ಜನಾಂಗದವರ ಭೂ ಕಬಳಿಕೆಯ ಆರೋಪಗಳಿಗೆ ಸಂಬಂಧಿಸಿದಂತೆ ಪ್ರಕರಣದಲ್ಲಿ ಶೇಖ್, ಜಾರಿ ನಿರ್ದೇಶನಾಲಯ, ಸಿಬಿಐ ಮತ್ತು ರಾಜ್ಯ ಗೃಹ ಕಾರ್ಯದರ್ಶಿಯನ್ನು ಕಕ್ಷಿದಾರರನ್ನಾಗಿ ಸೇರಿಸಲು ನ್ಯಾಯಾಲಯವು ಆದೇಶಿಸಿದೆ.

ಮುಖ್ಯ ನ್ಯಾಯಮೂರ್ತಿ ಟಿಎಸ್ ಶಿವಜ್ಞಾನಂ ನೇತೃತ್ವದ ವಿಭಾಗೀಯ ಪೀಠವು, ಜನವರಿ 5 ರಂದು ಇ.ಡಿ ಅಧಿಕಾರಿಗಳ ಮೇಲೆ ಗುಂಪು ದಾಳಿಯ ನಂತರ ಆರೋಪಿ ಶೇಖ್ ಓಡಿಹೋಗಿರುವುದರಿಂದ ಮತ್ತು ಸಾರ್ವಜನಿಕವಾಗಿ ಕಾಣಿಸದ ಕಾರಣ ಪ್ರಕರಣದಲ್ಲಿ ಅವರನ್ನು ಕಕ್ಷಿದಾರರನ್ನಾಗಿ ಮಾಡಿರುವ ವಿಷಯವನ್ನು ಹೈಕೋರ್ಟ್ ರಿಜಿಸ್ಟ್ರಿಯು ಪತ್ರಿಕೆಗಳಲ್ಲಿ ಸಾರ್ವಜನಿಕ ಪ್ರಕಟಣೆ ನೀಡುವಂತೆ ಸೂಚಿಸಿತು.

ಉತ್ತರ 24 ಪರಗಣ ಜಿಲ್ಲೆಯಲ್ಲಿ ಸಂದೇಶ್‌ಖಾಲಿ ಘಟನೆಯ ಆರೋಪದ ಮೇಲೆ ಸ್ಥಳೀಯ ಟಿಎಂಸಿ ನಾಯಕರನ್ನು ಬಂಧಿಸುವಂತೆ ಒತ್ತಾಯಿಸಿ ಪೋಸ್ಟರ್‌ಗಳನ್ನು ಹಿಡಿದ ಮಹಿಳೆಯರು ಪ್ರತಿಭಟನೆ ನಡೆಸಿದರು.
ಭೂ ಕಬಳಿಕೆ ಆರೋಪ: ಸಂದೇಶಖಾಲಿಯಲ್ಲಿ ಸ್ಥಳೀಯ ಟಿಎಂಸಿ ನಾಯಕನನ್ನು ಬಂಧಿಸಿದ ಪೊಲೀಸರು

ಶೇಖ್ ಅವರನ್ನು ಬಂಧಿಸದಂತೆ ಪೊಲೀಸರಿಗೆ ತಡೆ ನೀಡುವ ಸಾಧ್ಯಕೆ ಇದೆಯೇ ಎಂಬ ಬಗ್ಗೆ ಸ್ಪಷ್ಟೀಕರಣಕ್ಕಾಗಿ ನ್ಯಾಯಾಲಯ ನೇಮಿಸಿದ ಅಮೈಕಸ್‌ ಕ್ಯೂರಿಯವರ (ನ್ಯಾಯಾಲಯಕ್ಕೆ ಸಹಕಿಸುವ ವಕೀಲ) ಪ್ರಾರ್ಥನೆಯ ಮೇಲೆ ವಿಭಾಗೀಯ ಪೀಠವು, ಅಂತಹ ಯಾವುದೇ ತಡೆ ನೀಡಲು ಸಾಧ್ಯವಿಲ್ಲ ಮತ್ತು ಪೊಲೀಸರು ಅವರನ್ನು ಬಂಧಿಸಬಹುದು ಎಂದು ಹೇಳಿತು.

ಈ ಹಿಂದೆ ಸಿಬಿಐ ಮತ್ತು ರಾಜ್ಯ ಪೊಲೀಸರ ಜಂಟಿ ವಿಶೇಷ ತನಿಖಾ ತಂಡದ ರಚನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಮಾತ್ರ ಆದೇಶ ನೀಡಲಾಗಿತ್ತು. ಆದರೆ, ಇ.ಡಿ ಅಧಿಕಾರಿಗಳ ಮೇಲಿನ ದಾಳಿಯನ್ನು ತನಿಖೆ ಮಾಡಲು ಏಕ ಪೀಠವು ಆದೇಶಿಸಿದೆ.

ನ್ಯಾಯಮೂರ್ತಿ ಹಿರಣ್ಮಯ್ ಭಟ್ಟಾಚಾರ್ಯ ಅವರನ್ನೊಳಗೊಂಡ ವಿಭಾಗೀಯ ಪೀಠವು ಈ ಪ್ರಕರಣವನ್ನು ಮಾರ್ಚ್ 4 ರಂದು ಮತ್ತೆ ವಿಚಾರಣೆಗೆ ಕೈಗೆತ್ತಿಕೊಳ್ಳುವುದಾಗಿ ಸೂಚಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com