ಸಂಸತ್ ನ ಅತಿ ಹಿರಿಯ ಸದಸ್ಯ ಸಂಸದ ಶಫಿಕುರ್ ರೆಹಮಾನ್ ಬರ್ಕ್ ನಿಧನ

ಸಂಸತ್ ನ ಅತಿ ಹಿರಿಯ ಸದಸ್ಯ ಎಂಬ ಖ್ಯಾತಿಗೆ ಭಾಜನರಾಗಿದ್ದ ಹಿರಿಯ ಸಂಸದ ಶಫಿಕುರ್ ರೆಹಮಾನ್ ಬರ್ಕ್ (94) ಇಂದು ನಿಧನರಾದರು.
ಸಂಸತ್ ನ ಅತಿ ಹಿರಿಯ ಸದಸ್ಯ ಸಂಸದ ಶಫಿಕುರ್ ರೆಹಮಾನ್ ಬರ್ಕ್ ನಿಧನ
PTI

ನವದೆಹಲಿ: ಸಂಸತ್ ನ ಅತಿ ಹಿರಿಯ ಸದಸ್ಯ ಎಂಬ ಖ್ಯಾತಿಗೆ ಭಾಜನರಾಗಿದ್ದ ಹಿರಿಯ ಸಂಸದ ಶಫಿಕುರ್ ರೆಹಮಾನ್ ಬರ್ಕ್ (94) ಇಂದು ನಿಧನರಾದರು.

ಕೆಲವು ಸಮಯದಿಂದ ಬರ್ಕ್ ಅನಾರೋಗ್ಯಕ್ಕೀಡಾಗಿ ಚಿಕಿತ್ಸೆ ಪಡೆಯ್ತುತಿದ್ದರು. ಸಮಾಜವಾದಿ ಪಕ್ಷ ತನ್ನ ನಾಯಕನ ಸಾವಿಗೆ ಸಂತಾಪ ಸೂಚಿಸಿದೆ.

ಸಂಸತ್ ನ ಅತಿ ಹಿರಿಯ ಸದಸ್ಯ ಸಂಸದ ಶಫಿಕುರ್ ರೆಹಮಾನ್ ಬರ್ಕ್ ನಿಧನ
ಲೋಕಸಭಾ ಚುನಾವಣೆ: ಸಂಸತ್ ಕ್ಷೇತ್ರಗಳ ಜವಾಬ್ದಾರಿ ರಾಜ್ಯದ ಸಚಿವರ ಹೆಗಲಿಗೆ, 28 ಕ್ಷೇತ್ರಕ್ಕೂ ತಲಾ ಒಬ್ಬೊಬ್ಬ ಮಂತ್ರಿ ನೇಮಕ!

4 ಬಾರಿ ಸಂಸದರಾಗಿರುವ ಬರ್ಕ್, ಶಂಬಲ್ ಕ್ಷೇತ್ರದಿಂದ 2019 ರಲ್ಲಿ ಸಂಸತ್ ಗೆ ಆಯ್ಕೆಯಾಗಿದ್ದರು. ಮೊರದಾಬಾದ್ ನಿಂದ 3 ಬಾರಿ ಹಾಗೂ ಶಂಭಲ್ ನಿಂದ 2 ಬಾರಿ ಸಂಸತ್ ಗೆ ಬರ್ಕ್ ಆಯ್ಕೆಯಾಗಿದ್ದರು.

"ಸಮಾಜವಾದಿ ಪಕ್ಷದ ಹಿರಿಯ ನಾಯಕ, ಸಂಸದ ಶಫಿಕುರ್ ರೆಹಮಾನ್ ಬರ್ಕ್ ಸಹೇಬ್ ನಿಧನದಿಂದ ದುಃಖವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಈ ನೋವನ್ನು ಭರಿಸುವ ಶಕ್ತಿ ಕುಟುಂಬ ಸದಸ್ಯರಿಗೆ ಸಿಗಲಿ ಎಂದು ಎಸ್ ಪಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ. ಎಸ್ ಪಿ ಮುಖಂಡ ಅಖಿಲೇಶ್ ಯಾದವ್ ಬರ್ಕ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com