ಲೋಕಸಭಾ ಚುನಾವಣೆ: ಸಂಸತ್ ಕ್ಷೇತ್ರಗಳ ಜವಾಬ್ದಾರಿ ರಾಜ್ಯದ ಸಚಿವರ ಹೆಗಲಿಗೆ, 28 ಕ್ಷೇತ್ರಕ್ಕೂ ತಲಾ ಒಬ್ಬೊಬ್ಬ ಮಂತ್ರಿ ನೇಮಕ!

ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಭರ್ಜರಿ ತಯಾರಿ ಆರಂಭಿಸಿದೆ. ದೇಶದ ಎಲ್ಲಾ ಲೋಕಸಭಾ ಕ್ಷೇತ್ರಗಳಿಗೂ ಸಂಯೋಜಕರನ್ನು (ಉಸ್ತುವಾರಿ) ನೇಮಕ ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ನವದೆಹಲಿ/ಬೆಂಗಳೂರು: ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಭರ್ಜರಿ ತಯಾರಿ ಆರಂಭಿಸಿದೆ. ದೇಶದ ಎಲ್ಲಾ ಲೋಕಸಭಾ ಕ್ಷೇತ್ರಗಳಿಗೂ ಸಂಯೋಜಕರನ್ನು (ಉಸ್ತುವಾರಿ) ನೇಮಕ ಮಾಡಿದೆ.
     
ಸಂಯೋಜಕರ ನೇಮಕಾತಿ ಪ್ರಸ್ತಾವಕ್ಕೆ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅನುಮೋದನೆ ನೀಡಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ತಿಳಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರಿಗೆ ಆಯಾ ಜಿಲ್ಲೆಯನ್ನು ಒಳಗೊಂಡ ಕ್ಷೇತ್ರದ ಹೊಣೆಯನ್ನು ನೀಡಲಾಗಿದೆ.

ರಾಜ್ಯದಲ್ಲಿ 28 ಲೋಕಸಭಾ ಕ್ಷೇತ್ರಗಳಿದ್ದು, ಕಾಂಗ್ರೆಸ್ ಈಗ ಕೇವಲ 1 ಸ್ಥಾನವನ್ನು ಮಾತ್ರ ಹೊಂದಿದೆ. ಇದನ್ನು ಕನಿಷ್ಠ 20-25ಕ್ಕಾದರೂ ಹೆಚ್ಚಿಸಿಕೊಳ್ಳಬೇಕು ಎಂಬುದು ಪಕ್ಷದ ಪಣವಾಗಿದೆ. ಹೀಗಾಗಿ ಚುನಾವಣಗೆ ಇನ್ನು 4-5 ತಿಂಗಳು ಇದ್ದರೂ ಈಗಿನಿಂದಲೇ ಸಿದ್ಧತೆ ಆರಂಭಿಸಿ ಕ್ಷೇತ್ರವಾರು ಉಸ್ತುವಾರಿಗಳನ್ನು ನೇಮಕ ಮಾಡಿದೆ.

ಎಲ್ಲರೂ ಸಿದ್ದರಾಮಯ್ಯ ಮಂತ್ರಿ ಮಂಡಲ ಸಚಿವರೇ ಆಗಿದ್ದಾರೆಂಬುದು ಇಲ್ಲಿ ಗಮನಾರ್ಹ ವಿಚಾರವಾಗಿದೆ. ನೇಮಕಗೊಂಡಿರುವ ಉಸ್ತುವಾರಿಗಳು ಅಭ್ಯರ್ಥಿ ಆಯ್ಕೆಯಿಂದ ಹಿಡಿದು ಈಗಿನಿಂದಲೇ ಚುನಾವಣೆಗೆ ಪೂರ್ವ ಸಿದ್ಧತೆ ಆರಂಭಿಸಲಿದ್ದಾರೆ.

28 ಕ್ಷೇತ್ರಗಳ ಉಸ್ತುವಾರಿಗಳ ಪಟ್ಟಿ ಇಂತಿದೆ...
ಚಿಕ್ಕೋಡಿ– ಎಚ್‌.ಕೆ. ಪಾಟೀಲ, ಬೆಳಗಾವಿ– ಸತೀಶ ಜಾರಕಿಹೊಳಿ, ಬಾಗಲಕೋಟೆ– ಆರ್‌.ಬಿ. ತಿಮ್ಮಾಪುರ, ವಿಜಯಪುರ– ಎಂ.ಬಿ. ಪಾಟೀಲ, ಕಲಬುರಗಿ– ಪ್ರಿಯಾಂಕ್‌ ಖರ್ಗೆ, ರಾಯಚೂರು– ಎನ್.ಎಸ್‌. ಬೋಸರಾಜು, ಬೀದರ್‌– ಈಶ್ವರ ಖಂಡ್ರೆ, ಕೊಪ್ಪಳ–  ಶಿವರಾಜ ತಂಗಡಗಿ, ಬಳ್ಳಾರಿ– ಬಿ. ನಾಗೇಂದ್ರ, ಹಾವೇರಿ– ಶಿವಾನಂದ ಪಾಟೀಲ, ಧಾರವಾಡ– ಸಂತೋಷ್‌ ಲಾಡ್‌, ಉತ್ತರಕನ್ನಡ– ಮಂಕಾಳ ವೈದ್ಯ, ದಾವಣಗೆರೆ– ಎಸ್‌.ಎಸ್‌. ಮಲ್ಲಿಕಾರ್ಜುನ, ಶಿವಮೊಗ್ಗ– ಮಧುಬಂಗಾರಪ್ಪ, ಉಡುಪಿ– ಚಿಕ್ಕಮಗಳೂರು– ಕೆ.ಜೆ. ಜಾರ್ಜ್, ಹಾಸನ– ಕೆ.ಎನ್‌. ರಾಜಣ್ಣ, ದಕ್ಷಿಣಕನ್ನಡ– ದಿನೇಶ್‌ ಗುಂಡೂರಾವ್‌, ಚಿತ್ರದುರ್ಗ– ಡಿ. ಸುಧಾಕರ್‌, ಚಿಕ್ಕಬಳ್ಳಾಪುರ– ಕೆ.ಎಚ್‌. ಮುನಿಯಪ್ಪ, ತುಮಕೂರು–ಜಿ. ಪರಮೇಶ್ವರ, ಮಂಡ್ಯ– ಎನ್‌. ಚಲುವರಾಯಸ್ವಾಮಿ, ಮೈಸೂರು– ಕೆ. ವೆಂಕಟೇಶ್‌, ಚಾಮರಾಜನಗರ– ಎಚ್‌.ಸಿ. ಮಹದೇವಪ್ಪ, ಬೆಂಗಳೂರು ಗ್ರಾಮಾಂತರ– ಬೈರತಿ ಸುರೇಶ್‌, ಬೆಂಗಳೂರು ಉತ್ತರ– ಕೃಷ್ಣ ಬೈರೇಗೌಡ, ಬೆಂಗಳೂರು ಕೇಂದ್ರ– ಜಮೀರ್‌ ಅಹಮದ್‌ ಖಾನ್‌, ಬೆಂಗಳೂರು ದಕ್ಷಿಣ– ರಾಮಲಿಂಗಾರೆಡ್ಡಿ, ಕೋಲಾರ– ಡಾ.ಎಂ.ಸಿ. ಸುಧಾಕರ್‌. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com