2023ರಲ್ಲಿ ಮಹಿಳೆಯರ ವಿರುದ್ಧ 28,811 ಅಪರಾಧ, ಉತ್ತರ ಪ್ರದೇಶದಲ್ಲೇ ಶೇ. 55 ರಷ್ಟು ಪ್ರಕರಣ: NCW

ರಾಷ್ಟ್ರೀಯ ಮಹಿಳಾ ಆಯೋಗ(ಎನ್‌ಸಿಡಬ್ಲ್ಯು) ಕಳೆದ ವರ್ಷ ಮಹಿಳೆಯರ ವಿರುದ್ಧದ ಅಪರಾಧಕ್ಕೆ ಸಂಬಂಧಿಸಿದಂತೆ 28,811 ಪ್ರಕರಣಗಳನ್ನು ದಾಖಲಿಸಿದೆ ಮತ್ತು ಈ ಪೈಕಿ ಶೇಕಡಾ 55 ರಷ್ಟು ಪ್ರಕರಣಗಳು ಉತ್ತರ ಪ್ರದೇಶದಿಂದ ವರದಿಯಾಗಿವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ರಾಷ್ಟ್ರೀಯ ಮಹಿಳಾ ಆಯೋಗ(ಎನ್‌ಸಿಡಬ್ಲ್ಯು) ಕಳೆದ ವರ್ಷ ಮಹಿಳೆಯರ ವಿರುದ್ಧದ ಅಪರಾಧಕ್ಕೆ ಸಂಬಂಧಿಸಿದಂತೆ 28,811 ಪ್ರಕರಣಗಳನ್ನು ದಾಖಲಿಸಿದೆ ಮತ್ತು ಈ ಪೈಕಿ ಶೇಕಡಾ 55 ರಷ್ಟು ಪ್ರಕರಣಗಳು ಉತ್ತರ ಪ್ರದೇಶದಿಂದ ವರದಿಯಾಗಿವೆ.

ಕೌಟುಂಬಿಕ ಹಿಂಸಾಚಾರ ಹೊರತುಪಡಿಸಿ ಕಿರುಕುಳವನ್ನು ಒಳಗೊಂಡಿರುವ ಗೌರವಕ್ಕೆ ಧಕ್ಕೆ ವಿಭಾಗದಲ್ಲಿ ಹೆಚ್ಚಿನ ಸಂಖ್ಯೆಯ ಅಂದರೆ 8,540 ದೂರುಗಳನ್ನು ಸ್ವೀಕರಿಸಲಾಗಿದೆ ಮತ್ತು ನಂತರ 6,274 ಕೌಟುಂಬಿಕ ದೌರ್ಜನ್ಯದ ದೂರುಗಳು ಬಂದಿವೆ ಎಂದು NCW ಡೇಟಾ ತಿಳಿಸಿದೆ.

ವರದಕ್ಷಿಣೆ ಕಿರುಕುಳದ ದೂರುಗಳು 4,797, ಕಿರುಕುಳದ ದೂರುಗಳು 2,349, ಮಹಿಳೆಯರು ನೀಡಿದ ದೂರುಗಳ ವಿರುದ್ಧ ಪೊಲೀಸರ ನಿರಾಸಕ್ತಿಗೆ ಸಂಬಂಧಿಸಿದ ದೂರುಗಳು 1,618 ಮತ್ತು ಅತ್ಯಾಚಾರ ಹಾಗೂ ಅತ್ಯಾಚಾರ ಯತ್ನದ ದೂರುಗಳು 1,537 ರಷ್ಟ ಬಂದಿವೆ ಎಂದು ಅಂಕಿಅಂಶಗಳು ತಿಳಿಸಿವೆ.

805 ಲೈಂಗಿಕ ಕಿರುಕುಳದ ದೂರುಗಳು, ಸೈಬರ್ ಅಪರಾಧದ ದೂರುಗಳು 605, ಹಿಂಬಾಲಿಸಿದ ವಿಚಾರಕ್ಕೆ ಸಂಬಂಧಿಸಿದ 472 ದೂರುಗಳಿವೆ ಎಂದು ಅದು ಹೇಳಿದೆ.

ಅಂಕಿಅಂಶಗಳ ಪ್ರಕಾರ ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಅಂದರೆ 16,109 ದೂರುಗಳು ದಾಖಲಾಗಿದ್ದು, ದೆಹಲಿಯಲ್ಲಿ 2,411, ಮಹಾರಾಷ್ಟ್ರದಲ್ಲಿ 1,343 ದೂರುಗಳು ದಾಖಲಾಗಿವೆ.

ಬಿಹಾರದಲ್ಲಿ 1,312, ಮಧ್ಯಪ್ರದೇಶದಲ್ಲಿ 1,165, ಹರಿಯಾಣದಲ್ಲಿ 1,115, ರಾಜಸ್ಥಾನದಲ್ಲಿ 1,011, ತಮಿಳುನಾಡಿನಲ್ಲಿ 608, ಪಶ್ಚಿಮ ಬಂಗಾಳದಲ್ಲಿ 569 ಮತ್ತು ಕರ್ನಾಟಕದಲ್ಲಿ 501 ದೂರುಗಳು ದಾಖಲಾಗಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com