ಅಮ್ಮನ ಮಡಿಲು ಸೇರಿದ ಕಂದಮ್ಮ: ತಾಯಿ-ಮರಿ ಆನೆಗಳ ಭಾವನಾತ್ಮಕ ವಿಡಿಯೋ ವೈರಲ್

ಹಿಂಡಿನಿಂದ ಬೇರ್ಪಟ್ಟ ಆನೆ ಮರಿಯನ್ನು ತಮಿಳುನಾಡು ಅರಣ್ಯ ಇಲಾಖೆಯ ಸಿಬ್ಬಂದಿ ಮರಳಿ ತಾಯಿ ಬಳಿ ಮಡಿಲು ಸೇರಿಸಿದ್ದು, ತಾಯಿ ಮಡಿಲು ಸೇರುತ್ತಿದ್ದಂತೆಯೇ ತಾಯಾನೆ ತೋಳಿನಲ್ಲಿ ತಲೆ ಇಟ್ಟು ಮಲಗಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ತಾಯಿಯ ಬೆಚ್ಚನೆಯ ಅಪ್ಪುಗೆಯಲ್ಲಿ ಮಲಗಿರುವ ಮರಿಯಾನೆ.
ತಾಯಿಯ ಬೆಚ್ಚನೆಯ ಅಪ್ಪುಗೆಯಲ್ಲಿ ಮಲಗಿರುವ ಮರಿಯಾನೆ.

ಚೆನ್ನೈ: ಹಿಂಡಿನಿಂದ ಬೇರ್ಪಟ್ಟ ಆನೆ ಮರಿಯನ್ನು ತಮಿಳುನಾಡು ಅರಣ್ಯ ಇಲಾಖೆಯ ಸಿಬ್ಬಂದಿ ಮರಳಿ ತಾಯಿ ಬಳಿ ಮಡಿಲು ಸೇರಿಸಿದ್ದು, ತಾಯಿ ಮಡಿಲು ಸೇರುತ್ತಿದ್ದಂತೆಯೇ ತಾಯಾನೆ ತೋಳಿನಲ್ಲಿ ತಲೆ ಇಟ್ಟು ಮಲಗಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ರಾಜ್ಯ ಪರಿಸರ ಮತ್ತು ಅರಣ್ಯ ಕಾರ್ಯದರ್ಶಿ ಸುಪ್ರಿಯಾ ಸಾಹು ಐಎಎಸ್ ಈ ಫೋಟೊವನ್ನು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಶೇರ್‌ ಮಾಡಿದ್ದಾರೆ.

ಅರಣ್ಯ ಕ್ಷೇತ್ರ ಸಿಬ್ಬಂದಿ ತೆಗೆದ ಈ ಫೋಟೊದಲ್ಲಿ ಮರಿ ಆನೆ ತನ್ನ ತಾಯಿಯ ಬೆಚ್ಚಗಿನ ಅಪ್ಪುಗೆಯಲ್ಲಿ ಮಧ್ಯಾಹ್ನದ ಕಿರು ನಿದ್ದೆ ಮಾಡುತ್ತಿರುವುದು ಕಂಡು ಬಂದಿದೆ.

ಕೆಲವೊಮ್ಮೆ ಒಂದು ಚಿತ್ರ ಸಾವಿರ ಪದಗಳನ್ನು ಆಡುತ್ತದೆ. ಬೇರ್ಪಟ್ಟ ಮರಿ ಆನೆ ಮರಳಿ ತನ್ನ ಕುಟುಂಬದೊಂದಿಗೆ ಸೇರಿದ ಬಳಿಕ ತನ್ನ ತಾಯಿಯ ತೋಳಿನಲ್ಲಿ ಸುರಕ್ಷಿತವಾಗಿ ವಿಶ್ರಾಂತಿ ಪಡೆಯುತ್ತಿದೆ. ಪ್ರಾಣಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕಣ್ಗಾವಲು ಇಡುತ್ತಿರುವ ಅರಣ್ಯ ಕ್ಷೇತ್ರ ಸಿಬ್ಬಂದಿ ಆನಮಲೈ ಹುಲಿ ಮೀಸಲು ಪ್ರದೇಶದಲ್ಲಿ ತೆಗೆದ ಚಿತ್ರ ಇದು” ಎಂದು ಸಾಹು ಬರೆದುಕೊಂಡಿದ್ದಾರೆ.

2023ರ ಡಿಸೆಂಬರ್‌ 30ರಂದು ಸುಮಾರು 4-5 ತಿಂಗಳ ಕಾಡಾನೆ ಮರಿಯೊಂದು ಏಕಾಂಗಿಯಾಗಿ ಆನಮಲೈ ಹುಲಿ ಮೀಸಲು ಪ್ರದೇಶದಲ್ಲಿ ಪತ್ತೆಯಾಗಿತ್ತು. ತನ್ನವರಿಂದ ಬೇರ್ಪಟ್ಟ ಆ ಆನೆ ಮರಿ ತನ್ನ ತಾಯಿಗಾಗಿ ಹುಡುಕಾಟ ನಡೆಸುತ್ತಿತ್ತು. ಇದು ಅರಣ್ಯ ಕ್ಷೇತ್ರ ಸಿಬ್ಬಂದಿ ಕಣ್ಣಿಗೆ ಬಿದಿತ್ತು.

ಬಳಿಕ ಅರಣ್ಯ ಇಲಾಖೆಯ ಸಿಬ್ಬಂದಿಗಳು ಆನೆ ಹಿಂಡನ್ನು ಪತ್ತೆಹಚ್ಚಲು ಶೋಧ ತಂಡವನ್ನು ಕಳುಹಿಸಿತು. ಡ್ರೋನ್ ಗಳ ಸಹಾಯದಿಂದ ಸುಮಾರು 3 ಕಿ.ಮೀ. ದೂರದಲ್ಲಿ ಆನೆ ಹಿಂಡನ್ನು ಗುರುತಿಸಲಾಯಿತು. ನಂತರ ಆನೆ ಮರಿಯನ್ನು ಅಲ್ಲಿಗೆ ಕರೆದೊಯ್ಯಲಾಯಿತು. ಮರಿ ಆನೆಯನ್ನು ಹಿಂಡಿನ ಬಳಿ ಬಿಡುವ ಮುನ್ನ ಅದರ ಶರೀರಕ್ಕೆ ಮಣ್ಣ ಲೇಪಿಸಿ ಮಾನವ ಹಸ್ತಕ್ಷೇಪದ ಕುರುಹು ಅಳಿಸಲಾಗಿತ್ತು. ಮರಿ ಆನೆಯನ್ನು ಮತ್ತೆ ತನ್ನ ತಾಯಿಯೊಂದಿಗೆ ಸೇರಿಕೊಂಡಿತು. ಸದ್ಯ ತಾಯಿ-ಮರಿ ಆನೆಯ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣಘಳಲ್ಲಿ ವೈರಲ್‌ ಆಗಿದ್ದು, ಹಲವರು ಮೆಚ್ಚುಗೆ ಸೂಚಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com