ಮಹಾರಾಷ್ಟ್ರ: ಕರ್ತವ್ಯ ನಿರತ ಪೊಲೀಸ್ ಗೆ ಕಪಾಳ ಮೋಕ್ಷ; ಬಿಜೆಪಿ ಶಾಸಕ Sunil Kamble ವಿರುದ್ಧ ಪ್ರಕರಣ ದಾಖಲು

ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಗೆ ಕಪಾಳ ಮೋಕ್ಷ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಬಿಜೆಪಿ ಶಾಸಕ Sunil Kamble ವಿರುದ್ಧ ಪ್ರಕರಣ ದಾಖಲಾಗಿದೆ.
ಕರ್ತವ್ಯ ನಿರತ ಪೊಲೀಸ್ ಗೆ ಕಪಾಳ ಮೋಕ್ಷ
ಕರ್ತವ್ಯ ನಿರತ ಪೊಲೀಸ್ ಗೆ ಕಪಾಳ ಮೋಕ್ಷ

ಮುಂಬೈ: ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಗೆ ಕಪಾಳ ಮೋಕ್ಷ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಬಿಜೆಪಿ ಶಾಸಕ Sunil Kamble ವಿರುದ್ಧ ಪ್ರಕರಣ ದಾಖಲಾಗಿದೆ.

ಮಹಾರಾಷ್ಟ್ರದ ಪುಣೆಯಲ್ಲಿರುವ ಸಸೂನ್‌ ಆಸ್ಪತ್ರೆಯಲ್ಲಿ ಆಯೋಜಿಸಿದ ಕಾರ್ಯಕ್ರಮದ ವೇಳೆ ಸುನೀಲ್‌ ಕಾಂಬ್ಳೆ ಅವರು ಪೊಲೀಸ್‌ ಅಧಿಕಾರಿಯೊಬ್ಬರ ಕಪಾಳಕ್ಕೆ ಹೊಡೆದಿದ್ದಾರೆ. ಸುನೀಲ್‌ ಕಾಂಬ್ಳೆ ಅವರು ವೇದಿಕೆಯಿಂದ ಇಳಿಯುತ್ತಿದ್ದ ವೇಳೆ ಸುನೀಲ್‌ ಕಾಂಬ್ಳೆ ಅವರ ಮೈಯನ್ನು ಪೊಲೀಸ್‌ ಅಧಿಕಾರಿ ಮುಟ್ಟಿದ್ದಾರೆ. ಇದೇ ಕಾರಣಕ್ಕೆ ಕುಪಿತಗೊಂಡ ಸುನೀಲ್‌ ಕಾಂಬ್ಳೆ, ಅವರ ಕಪಾಳಕ್ಕೆ ಹೊಡೆದಿದ್ದಾರೆ. ಈ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಅಜಿತ್‌ ಪವಾರ್‌ ಮುಖ್ಯ ಅತಿಥಿಯಾಗಿದ್ದರು. ಅವರ ಸಮ್ಮುಖದಲ್ಲಿಯೇ ಇಂತಹ ಘಟನೆ ನಡೆದಿದೆ. 

ಬಿಜೆಪಿ ಶಾಸಕರ ದುರ್ನಡತೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. 

ಹೊಡೆದಿಲ್ಲ, ತಳ್ಳಿದೆ ಎಂದು ಸ್ಪಷ್ಟನೆ
ಇನ್ನು ಕಪಾಳಮೋಕ್ಷ ಪ್ರಕರಣ ವೈರಲ್ ಆಗುತ್ತಿದ್ದಂತೆಯೇ ಈ ಕುರಿತು ಸ್ಪಷ್ಟನೆ ನೀಡಿರುವ ಶಾಸಕ ಸುನೀಲ್‌ ಕಾಂಬ್ಳೆ, “ನಾನು ಪೊಲೀಸ್‌ ಅಧಿಕಾರಿಗೆ ಹೊಡೆದಿಲ್ಲ. ವೇದಿಕೆ ಮೇಲಿನಿಂದ ಇಳಿಯುವಾಗ ಪೊಲೀಸ್‌ ಅಧಿಕಾರಿಯು ನನ್ನ ಮೈಮೇಲೆ ಬಿದ್ದರು. ನಾನು ಆಗ ಅವರನ್ನು ತಳ್ಳಿದೆ ಅಷ್ಟೆ. ಅವರ ಮೇಲೆ ಕೈ ಮಾಡಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ, ಪೊಲೀಸ್‌ ಅಧಿಕಾರಿಯ ಕಪಾಳಕ್ಕೆ ಹೊಡೆಯುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com