ಅಕ್ರಮ ಮೀನುಗಾರಿಕೆ ಆರೋಪ: ತಮಿಳುನಾಡಿನ 18 ಮೀನುಗಾರರ ಬಂಧಿಸಿದ ಶ್ರೀಲಂಕಾ ನೌಕಾಪಡೆ

ಶ್ರೀಲಂಕಾದ ಗಡಿಯಲ್ಲಿ ಅಕ್ರಮವಾಗಿ ಮೀನು ಹಿಡಿಯುತ್ತಿದ್ದ ಆರೋಪದ ಮೇರೆಗೆ ಭಾರತದ ತಮಿಳುನಾಡಿನ 18 ಮೀನುಗಾರರನ್ನು ಶ್ರೀಲಂಕಾ ನೌಕಪಡೆ ಬಂಧಿಸಿದೆ.
ತಮಿಳುನಾಡು ಮೀನುಗಾರರ ಬಂಧಿಸಿದ ಶ್ರೀಲಂಕಾ ಸೇನೆ
ತಮಿಳುನಾಡು ಮೀನುಗಾರರ ಬಂಧಿಸಿದ ಶ್ರೀಲಂಕಾ ಸೇನೆ

ರಾಮನಾಥಪುರಂ: ಶ್ರೀಲಂಕಾದ ಗಡಿಯಲ್ಲಿ ಅಕ್ರಮವಾಗಿ ಮೀನು ಹಿಡಿಯುತ್ತಿದ್ದ ಆರೋಪದ ಮೇರೆಗೆ ಭಾರತದ ತಮಿಳುನಾಡಿನ 18 ಮೀನುಗಾರರನ್ನು ಶ್ರೀಲಂಕಾ ನೌಕಪಡೆ ಬಂಧಿಸಿದೆ.

ಮಂಗಳವಾರ ಸಂಜೆ ಶ್ರೀಲಂಕಾ ಜಲಪ್ರದೇಶದಲ್ಲಿ ಶ್ರೀಲಂಕಾ ನೌಕಾಪಡೆಯು 18 ಭಾರತೀಯ ಮೀನುಗಾರರನ್ನು ಬಂಧಿಸಿದ್ದು, ಶ್ರೀಲಂಕಾದ ಜಲಪ್ರದೇಶದಿಂದ ಭಾರತೀಯ ಕಳ್ಳಬೇಟೆ ಟ್ರಾಲರ್ಗಳ (ಮೀನುಗಾರಿಕಾ ಬೋಟ್ ಗಳು)ನ್ನು ಓಡಿಸುತ್ತಿದ್ದರು ಎಂದು ಆರೋಪಿಸಲಾಗಿದೆ. ಕಳ್ಳಬೇಟೆ ಕುರಿತು ಶ್ರೀಲಂಕಾ ನೌಕಾಪಡೆ ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ತಮಿಳುನಾಡಿನ 18 ಮೀನುಗಾರರು ಸಿಕ್ಕಿಬಿದಿದ್ದಾರೆ. ಈ ಕಾರ್ಯಾಚರಣೆಯಲ್ಲಿ 02 ಭಾರತೀಯ ಟ್ರಾಲರ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಶ್ರೀಲಂಕಾ ನೌಕಾಪಡೆ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ಜನವರಿ 16 ರಂದು ಶ್ರೀಲಂಕಾದ ಜಲಪ್ರದೇಶದಲ್ಲಿ ಅಕ್ರಮ ಮೀನುಗಾರಿಕೆಯಲ್ಲಿ ತೊಡಗಿರುವ ಭಾರತೀಯ ಕಳ್ಳಬೇಟೆ ಟ್ರಾಲರ್ಗಳ ಗುಂಪನ್ನು ಓಡಿಸಲು ಉತ್ತರ ಮಧ್ಯ ನೌಕಾ ಕಮಾಂಡ್ ತನ್ನ ಕಡಲತೀರದ ಗಸ್ತು ನೌಕೆಯನ್ನು ನಿಯೋಜಿಸಿತು. ಈ ಕಾರ್ಯಾಚರಣೆಯಲ್ಲಿ, ನೌಕಾ ಸಿಬ್ಬಂದಿ 18 ಭಾರತೀಯ ಮೀನುಗಾರರೊಂದಿಗೆ 02 ಭಾರತೀಯ ಕಳ್ಳಬೇಟೆ ಟ್ರಾಲರ್ಗಳನ್ನು ಹಿಡಿದಿದ್ದಾರೆ ಎಂದು ಶ್ರೀಲಂಕಾ ನೌಕಾಪಡೆ ತಿಳಿಸಿದೆ.

ಅಂತೆಯೇ ಬಂಧಿತ 18 ಮೀನುಗಾರರನ್ನು ಮನ್ನಾರ್‌ನ ತಲ್ಪಾಡು ಪಿಯರ್‌ಗೆ ಕರೆದೊಯ್ಯಲಾಗಿದ್ದು, ಮುಂದಿನ ಕ್ರಮಕ್ಕಾಗಿ ತಲೈಮನ್ನಾರ್ ಮೀನುಗಾರಿಕಾ ನಿರೀಕ್ಷಕರಿಗೆ ಹಸ್ತಾಂತರಿಸಲಾಗುವುದು ಎಂದು ಅದು ತಿಳಿಸಿದೆ.

ಭಾರತ-ಶ್ರೀಲಂಕಾ ಬಾಂಧವ್ಯಕ್ಕೆ ತೊಡಕಾಗಿರುವ ಅಕ್ರಮ ಮೀನುಗಾರಿಕೆ
ಇನ್ನು ಭಾರತ ಮತ್ತು ಶ್ರೀಲಂಕಾ ನಡುವೆ ಜಾಗತಿಕ ಮಟ್ಟದಲ್ಲಿ ಉತ್ತಮ ಬಾಂಧವ್ಯವಿದೆಯಾದರೂ, ಇಲ್ಲಿ ನಡೆಯುವ ಅಕ್ರಮ ಮೀನುಗಾರಿಕೆ ಉಭಯ ದೇಶಗಳಿಗೆ ತಲೆನೋವಾಗಿ ಪರಿಣಮಿಸಿದೆ. ಲಂಕಾ ನೌಕಾಪಡೆಯ ಸಿಬ್ಬಂದಿ ಪಾಕ್ ಜಲಸಂಧಿಯಲ್ಲಿ ಭಾರತೀಯ ಮೀನುಗಾರರ ಮೇಲೆ ಸಾಕಷ್ಟು ಬಾರಿ ಗುಂಡು ಹಾರಿಸಿದ್ದಾರೆ ಮತ್ತು ಶ್ರೀಲಂಕಾದ ಪ್ರಾದೇಶಿಕ ಜಲವನ್ನು ಅಕ್ರಮವಾಗಿ ಪ್ರವೇಶಿಸಿದ ಹಲವಾರು ಘಟನೆಗಳಲ್ಲಿ ಅವರ ದೋಣಿಗಳನ್ನು ವಶಪಡಿಸಿಕೊಂಡಿದ್ದಾರೆ.

ಪಾಕ್ ಜಲಸಂಧಿಯು ತಮಿಳುನಾಡನ್ನು ಶ್ರೀಲಂಕಾದಿಂದ ಬೇರ್ಪಡಿಸುವ ನೀರಿನ ಕಿರಿದಾದ ಪಟ್ಟಿಯಾಗಿದ್ದು, ಎರಡೂ ದೇಶಗಳ ಮೀನುಗಾರರಿಗೆ ಇದು ಶ್ರೀಮಂತ ಮೀನುಗಾರಿಕೆ ಕೇಂದ್ರವಾಗಿದೆ. ಇದೇ ಕಾರಣಕ್ಕೆ ಇಲ್ಲಿ ಉಭಯ ದೇಶಗಳ ಮೀನುಗಾರರು ಇಲ್ಲಿಗೆ ಆಗಮಿಸಿ ಮೀನುಗಾರಿಕೆ ನಡೆಸುತ್ತಾರೆ. ಈ ವೇಳೆ ಗಡಿ ದಾಟುವುದರಿಂದ ಉಭಯ ದೇಶಗಳ ನೌಕಾಪಡೆಯ ಅಧಿಕಾರಿಗಳಿಂದ ಬಂಧನಕ್ಕೀಡಾಗುತ್ತಾರೆ. ಈ ಪೈಕಿ ಶ್ರೀಲಂಕಾದ ಮೀನುಗಾರರಿಗಿಂತ ಭಾರತೀಯ ಮೀನುಗಾರರೇ ಇಲ್ಲಿ ಬಂಧನಕ್ಕೀಡಾಗುವುದು ಹೆಚ್ಚು. ಅಂತಾರಾಷ್ಟ್ರೀಯ ಕಡಲ ಗಡಿ ರೇಖೆಯನ್ನು ದಾಟಿ ಶ್ರೀಲಂಕಾದ ನೀರಿನಲ್ಲಿ ಮೀನುಗಾರಿಕೆ ನಡೆಸಿದ ಆರೋಪದ ಮೇಲೆ ಭಾರತೀಯ ಮೀನುಗಾರರನ್ನು ಶ್ರೀಲಂಕಾ ಅಧಿಕಾರಿಗಳು ಬಂಧಿಸಿದ ಸಂದರ್ಭಗಳು ನಿರಂತರವಾಗಿ ನಡೆಯುತ್ತಿವೆ. 

2023 ರಲ್ಲಿ, ದ್ವೀಪ ರಾಷ್ಟ್ರದ ನೌಕಾಪಡೆಯು 240 ಭಾರತೀಯ ಮೀನುಗಾರರನ್ನು ಮತ್ತು 35 ಟ್ರಾಲರ್‌ಗಳನ್ನು ಶ್ರೀಲಂಕಾದ ನೀರಿನಲ್ಲಿ ಬೇಟೆಯಾಡಿದ ಆರೋಪದ ಮೇಲೆ ಬಂಧಿಸಿತ್ತು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com