ಜನವಸತಿ ಪಟ್ಟಣಕ್ಕೆ ನುಗ್ಗಿದ ಕಾಡಾನೆ! ದಿಕ್ಕಾ ಪಾಲಾಗಿ ಓಡಿದ ಜನರು- ವಿಡಿಯೋ

ವನ್ಯಜೀವಿಗಳು ಆಹಾರ ಅರಸಿ ನಾಡಿಗೆ ಬರುತ್ತಿರುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಗುರುವಾರ ಇಂತಹುದೇ ಘಟನೆಯೊಂದು ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ನಡೆದಿದೆ.
ಜನವಸತಿ ಪ್ರದೇಶಕ್ಕೆ ನುಗ್ಗಿದ್ದ ಕಾಡಾನೆ
ಜನವಸತಿ ಪ್ರದೇಶಕ್ಕೆ ನುಗ್ಗಿದ್ದ ಕಾಡಾನೆ

ಬಾಲಸೋರ್: ವನ್ಯಜೀವಿಗಳು ಆಹಾರ ಅರಸಿ ನಾಡಿಗೆ ಬರುತ್ತಿರುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಗುರುವಾರ ಇಂತಹುದೇ ಘಟನೆಯೊಂದು ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ನಡೆದಿದೆ.

ಜನವಸತಿ ಬರಿಪಾಡಾ ಪಟ್ಟಣಕ್ಕೆ ಕಾಡಾನೆಯೊಂದು ನುಗ್ಗಿದ್ದು, ಜನರು ದಿಕ್ಕಾ ಪಾಲಾಗಿ ಓಡಿದ್ದಾರೆ. ಘೀಳು ಇಡುತ್ತಾ ಬೀದಿ ಬೀದಿಗಳಲ್ಲಿ ಓಡಾಡಿದ ಕಾಡಾನೆ ಕಂಡು ಜನರು ಭಯ ಭೀತಿಯಿಂದ ಪಲಾಯನವಾಗುತ್ತಿದ್ದರೆ, ಕೆಲವರು ಮೊಬೈಲ್ ನಲ್ಲಿ ವಿಡಿಯೋ ಮಾಡಿಕೊಳ್ಳುವ ದೃಶ್ಯ ಕಂಡುಬಂದಿದೆ.

ಸುದ್ದಿ ತಿಳಿಯುತ್ತಿದ್ದಂತೆಯೇ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ಆನೆ ಸೆರೆ ಹಿಡಿಯಲು ಕಾರ್ಯಾಚರಣೆ ನಡೆಸಿದ್ದಾರೆ. ಈ ಹಿಂದೆ ಜನವರಿ 16 ರಂದು ಬಾಲಸೋರ್ ಜಿಲ್ಲೆಯಲ್ಲಿಯೇ ಕಾಡಾನೆಯೊಂದು ದಾಳಿ ಮಾಡಿದ ನಂತರ 67 ವರ್ಷದ ವ್ಯಕ್ತಿ ಸಾವನ್ನಪ್ಪಿದರು ಮತ್ತು ಇಬ್ಬರು ಗಾಯಗೊಂಡಿದ್ದರು ಎಂದು ಪೊಲೀಸರು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com