ಕೋವಿಡ್-19: ದೇಶದಲ್ಲಿ 290 ಹೊಸ ಪ್ರಕರಣ ಪತ್ತೆ, 6 ಸಾವು: ವರದಿ

ದೇಶದಲ್ಲಿ ಮತ್ತೆ 290 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು, 6 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಸಚಿವಾಲಯ ಭಾನುವಾರ ತಿಳಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ದೇಶದಲ್ಲಿ ಮತ್ತೆ 290 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು, 6 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಸಚಿವಾಲಯ ಭಾನುವಾರ ತಿಳಿಸಿದೆ.

ಬೆಳಿಗ್ಗೆ 8 ಗಂಟೆಗೆ ನವೀಕರಿಸಿದ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಆರು ಸಾವುಗಳು ವರದಿಯಾಗಿದ್ದು, ಕೇರಳದಿಂದ ನಾಲ್ಕು ಮತ್ತು ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದಿಂದ ತಲಾ ಒಬ್ಬರು ಸೋಂಕಿತರು ಸಾವನ್ನಪ್ಪಿದ್ದಾರೆ.

ಡಿಸೆಂಬರ್ 5, 2023 ರವರೆಗೆ ದೈನಂದಿನ ಪ್ರಕರಣಗಳ ಸಂಖ್ಯೆ ಎರಡಂಕಿಗೆ ಇಳಿದಿತ್ತಾದರೂ, ಹೊಸ ರೂಪಾಂತರ ಮತ್ತು ಶೀತ ಹವಾಮಾನ ಪರಿಸ್ಥಿತಿಗಳ ಹೊರಹೊಮ್ಮುವಿಕೆಯ ನಂತರ ಕೋವಿಡ್ ಸೋಂಕಿತರ ಸಂಖ್ಯೆ ಮತ್ತೆ ಹೆಚ್ಚಾಗಲಾರಂಭಿಸಿದವು. ಡಿಸೆಂಬರ್ 31, 2023 ರಂದು ಒಂದೇ ದಿನದಲ್ಲಿ 841 ಹೊಸ ಪ್ರಕರಣಗಳು ವರದಿಯಾಗಿವೆ, ಇದು ಮೇ 2021 ರಲ್ಲಿ ವರದಿಯಾದ ಗರಿಷ್ಠ ಪ್ರಕರಣಗಳಲ್ಲಿ 0.2 ಪ್ರತಿಶತವಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

"ಪ್ರಸ್ತುತ ಲಭ್ಯವಿರುವ ದತ್ತಾಂಶದ ಪ್ರಕಾರ ದೇಶದಲ್ಲಿ JN.1 ರೂಪಾಂತರವು ಹೊಸ ಪ್ರಕರಣಗಳ ಏರಿಕೆಯಲ್ಲಿ ಗಣನೀಯ ಏರಿಕೆಗೆ ಕಾರಣವಾಗುತ್ತಿಲ್ಲ ಅಥವಾ ಆಸ್ಪತ್ರೆಗೆ ದಾಖಲು ಮತ್ತು ಮರಣದ ಹೆಚ್ಚಳಕ್ಕೆ ಕಾರಣವಾಗುವುದಿಲ್ಲ ಎಂದು ಸೂಚಿಸುತ್ತಿದೆ" ಎಂದು ಮೂಲಗಳು ತಿಳಿಸಿವೆ.

ಸಚಿವಾಲಯದ ವೆಬ್‌ಸೈಟ್ ಪ್ರಕಾರ, ರೋಗದಿಂದ ಚೇತರಿಸಿಕೊಂಡ ಜನರ ಸಂಖ್ಯೆ 4.4 ಕೋಟಿಗೂ ಹೆಚ್ಚು ರಾಷ್ಟ್ರೀಯ ಚೇತರಿಕೆ ದರ 98.81 ಪ್ರತಿಶತದಷ್ಟಿದೆ. ದೇಶದಲ್ಲಿ ಇದುವರೆಗೆ 220.67 ಕೋಟಿ ಕೋವಿಡ್ ಲಸಿಕೆಗಳನ್ನು ನೀಡಲಾಗಿದೆ.

ಏಪ್ರಿಲ್-ಜೂನ್ 2021 ರ ಅವಧಿಯಲ್ಲಿ ಡೆಲ್ಟಾ ಅಲೆ ಎದ್ದಿತ್ತು. ಇದು ದೈನಂದಿನ ಹೊಸ ಪ್ರಕರಣಗಳು ಮತ್ತು ಸಾವುಗಳ ವರದಿಗೆ ಕಾರಣವಾಗಿತ್ತು. ಭಾರತವು ಈ ಹಿಂದೆ COVID-19 ನ ಮೂರು ಅಲೆಗಳಿಗೆ ಸಾಕ್ಷಿಯಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com