ಟಿವಿ ಜನರ್ಲಿಸಂ ರೋಚಕತೆಗಿಂತ ವಸ್ತುನಿಷ್ಠತೆ ಮೇಲೆ ಗಮನ ಕೇಂದ್ರೀಕರಿಸಬೇಕು: ThinkEdu ನಲ್ಲಿ ರಾಜಕೀಯ ನಾಯಕರು

ವಿ ಪತ್ರಿಕೋದ್ಯಮ ಮನೋರಂಜನೆ ಹಾಗೂ ಸೆನ್ಸೆಷನಲ್ ಗಿಂತ ದೂರವಾಗಿ ವಸ್ತುನಿಷ್ಠ ಹಾಗೂ ವಿಷಯಾಧಾರಿತ ಚರ್ಚೆಗೆ ಗಮನ ಕೇಂದ್ರೀಕರಿಸಬೇಕಾದ ಅಗತ್ಯವಿದೆ ಎಂದು ರಾಜಕೀಯ ನಾಯಕರು ಒತ್ತಿ ಹೇಳಿದ್ದಾರೆ.
ಥಿಂಕ್ ಎಡುವಿನಲ್ಲಿ ವಿವಿಧ ಪಕ್ಷಗಳ ನಾಯಕರು
ಥಿಂಕ್ ಎಡುವಿನಲ್ಲಿ ವಿವಿಧ ಪಕ್ಷಗಳ ನಾಯಕರು

ಚೆನ್ನೈ:  ಟಿವಿ ಪತ್ರಿಕೋದ್ಯಮ ಮನೋರಂಜನೆ ಹಾಗೂ ಸೆನ್ಸೆಷನಲ್ ಗಿಂತ ದೂರವಾಗಿ ವಸ್ತುನಿಷ್ಠ ಹಾಗೂ ವಿಷಯಾಧಾರಿತ ಚರ್ಚೆಗೆ ಗಮನ ಕೇಂದ್ರೀಕರಿಸಬೇಕಾದ ಅಗತ್ಯವಿದೆ ಎಂದು ರಾಜಕೀಯ ನಾಯಕರು ಒತ್ತಿ ಹೇಳಿದ್ದಾರೆ.

ಚೆನ್ನೈನಲ್ಲಿ  ಗುರುವಾರ SASTRA ವಿಶ್ವವಿದ್ಯಾನಿಲಯ ಆಯೋಜಿಸಿದ್ದ 13th ThinkEdu ಕಾನ್ಕ್ಲೇವ್ 2024 ಪ್ರಸ್ತುತದಲ್ಲಿನ ಟಿವಿ ಪತ್ರಿಕೋದ್ಯಮ ಕುರಿತು ಮಾತನಾಡಿದ ವಿವಿಧ ರಾಜಕೀಯ ಪಕ್ಷಗಳ ನಾಯಕರು ಈ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದರು.

ಡಿಎಂಕೆಯ ರಾಷ್ಟ್ರೀಯ ವಕ್ತಾರ ಧರಣಿಧರನ್ ಸೆಲ್ವಂ, ಟಿವಿ ಪತ್ರಿಕೋದ್ಯಮದ ಗುಣಮಟ್ಟ ಕುಸಿಯುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಚಾನೆಲ್‌ಗಳು ಕೇವಲ ರಾಜಕೀಯ ದೃಷ್ಟಿಕೋನಗಳನ್ನು ಬಯಸುವವರಿಗೆ ಮನರಂಜನೆ ಒದಗಿಸಬಾರದು ಎಂದರು. ಹಿರಿಯ ಪತ್ರಕರ್ತೆ ಕಾವೇರಿ ಬಾಮ್‌ಜೈ ಅಧ್ಯಕ್ಷತೆಯಲ್ಲಿ ನಡೆದ “ಪ್ರೈಮ್ ಟೈಮ್ ಪಾರ್ಟಿ ಟೈಮ್: ದಿ ಟಿವಿ ವಾರಿಯರ್ಸ್” ವಿಷಯದ ಕುರಿತು ಎರಡನೇ ದಿನದ ಸಮಾವೇಶದಲ್ಲಿ ಮಾತನಾಡಿದ ಸೆಲ್ವಂ, ಸಂಬಂಧಿತ ಜನರ ಸಮಸ್ಯೆಗಳ ಮೇಲೆ ಗಮನ ಕೇಂದ್ರೀಕರಿಸುವ ಟಿವಿ ಚರ್ಚೆಗಳ ಅಗತ್ಯವನ್ನು ತಿಳಿಸಿದರು.

ಕಾಂಗ್ರೆಸ್‌ನ ರಾಷ್ಟ್ರೀಯ ಮಾಧ್ಯಮ ಸಮಿತಿಯ ಐಶ್ವರ್ಯ ಮಹಾದೇವ್ ಮಾತನಾಡಿ, ಟಿವಿ ಚರ್ಚೆ ವ್ಯವಸ್ಥಿತ ಕ್ಷೀಣತೆಗೆ ಪ್ರೈಮ್‌ಟೈಮ್ ವೀಕ್ಷಕರ ಆದ್ಯತೆ ಪೂರೈಸುವ ಒಲವು ಕಾರಣವಾಗಿದೆ. "ಹೆಚ್ಚುತ್ತಿರುವ ಹಣದುಬ್ಬರ ಅಥವಾ ಮಾನವ ಹಕ್ಕುಗಳ ಕಾಳಜಿಯಂತಹ ವಿಷಯಗಳ ಕುರಿತು ಅನೇಕರು ಚರ್ಚೆ ಬಯಸುತ್ತಾರೆ, ಆದರೆ ವಿಶಾಲವಾದ ಮಾರುಕಟ್ಟೆಯು ಕುತೂಹಲಕಾರಿ, ರಂಜನಿಯ ವಿಷಯಗಳ ಕಡೆಗೆ ಹೆಚ್ಚು ಒಲವು ತೋರುತ್ತಿದೆ, ಉದಾಹರಣೆಗೆ ನಿರ್ದಿಷ್ಟ ಪೂಜಾ ಸ್ಥಳಗಳಲ್ಲಿನ ಘಟನೆಗಳು ಅಥವಾ ನದಿಗಳಲ್ಲಿ ಸ್ನಾನ ಮಾಡುವ ವ್ಯಕ್ತಿಗಳತ್ತ ಹೆಚ್ಚಿನ ಆದ್ಯತೆ ನೀಡುವುದು ವಿಷಾಧನೀಯವಾಗಿದೆ ಎಂದರು.

ಇಂತಹವುಗಳನ್ನು ರಾಜಕೀಯ ಆಯಾಮಾದಲ್ಲಿ ಮನಬಂದಂತೆ ಹೇಳುವ ಮೂಲಕ ಸಾಮಾನ್ಯವಾಗಿ ಪ್ರಾಥಮಿಕ ಕೇಂದ್ರಬಿಂದುವಾಗುತ್ತವೆ ಎಂದು ಮಹಾದೇವ್ ಹೇಳಿದರು.  ದ್ವೇಷ ಪ್ರೋತ್ಸಾಹಿಸುವ ಮಾಧ್ಯಮ ಚರ್ಚೆಗಳಲ್ಲಿ ಭಾಗವಹಿಸುವಿಕೆ ತಡೆಯುವ ಬದ್ಧತೆಯೊಂದಿಗೆ ಕಾಂಗ್ರೆಸ್ ಪಕ್ಷ ಕೆಲವೊಂದು ಚಾನೆಲ್ ಗಳ ಚರ್ಚೆಗಳಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ಅವರು ತಿಳಿಸಿದರು.  

ತಮಿಳುನಾಡು ಬಿಜೆಪಿ ಉಪಾಧ್ಯಕ್ಷ ನಾರಾಯಣನ್ ತಿರುಪತಿ ಮಾತನಾಡಿ, ತಮಿಳು ಟಿವಿ ಚಾನೆಲ್ ಚರ್ಚೆಗಳಲ್ಲಿ ಅಸಮಾನ ಪ್ರಾತಿನಿಧ್ಯದ ಮೇಲೆ ಬೆಳಕು ಚೆಲ್ಲಿದರು. ರಚನಾತ್ಮಕ ಚರ್ಚೆಯಲ್ಲಿ ಎಲ್ಲರಿಗೂ ಸಮಾನ ಅವಕಾಶ ನೀಡುವುದು ಅತ್ಯಗತ್ಯ. ದುರದೃಷ್ಟವಶಾತ್, ತಮಿಳುನಾಡಿನ ಸಂದರ್ಭದಲ್ಲಿ, ಅಂತಹ ಸಮಾನ ಪ್ರಾತಿನಿಧ್ಯವು ಗಮನಾರ್ಹವಾಗಿ ಇರುವುದಿಲ್ಲ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com