ನವದೆಹಲಿ: ಕರ್ತವ್ಯಪಥದಲ್ಲಿ 256 ಮಹಿಳೆಯರಿಂದ ಡೇರ್ ಡೆವಿಲ್ಸ್ ಬೈಕ್ ಸ್ಟಂಟ್! ವಿಡಿಯೋ 

ರಾಷ್ಟ್ರರಾಜಧಾನಿಯ ಕರ್ತವ್ಯ ಪಥದಲ್ಲಿ ಶುಕ್ರವಾರ ನಡೆದ 75ನೇ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ದ್ವಿಚಕ್ರವಾಹನದಲ್ಲಿ 265 ಮಹಿಳೆಯರು ಬೈಕ್ ನಲ್ಲಿ ಮೈನವಿರೇಳಿಸುವ ವಿವಿಧ ಸಾಹಸಗಳನ್ನು ಪ್ರದರ್ಶಿಸುವ ಮೂಲಕ ನೆರೆದಿದ್ದವರನ್ನು ರೋಮಾಂಚನಗೊಳಿಸಿದರು. 
ಮಹಿಳೆಯರಿಂದ ಬೈಕ್ ಸ್ಟಂಟ್
ಮಹಿಳೆಯರಿಂದ ಬೈಕ್ ಸ್ಟಂಟ್

ನವದೆಹಲಿ: ರಾಷ್ಟ್ರ ರಾಜಧಾನಿಯ ಕರ್ತವ್ಯ ಪಥದಲ್ಲಿ ಶುಕ್ರವಾರ ನಡೆದ 75ನೇ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ದ್ವಿಚಕ್ರವಾಹನದಲ್ಲಿ 265 ಮಹಿಳೆಯರು ಬೈಕ್ ನಲ್ಲಿ ಮೈನವಿರೇಳಿಸುವ ವಿವಿಧ ಸಾಹಸಗಳನ್ನು ಪ್ರದರ್ಶಿಸುವ ಮೂಲಕ
ನೆರೆದಿದ್ದವರನ್ನು ರೋಮಾಂಚನಗೊಳಿಸಿದರು. 
  
ರಾಷ್ಟ್ರದ ಉದ್ದಗಲಕ್ಕೂ ನಿಯೋಜಿಸಲಾಗಿರುವ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ ಮಹಿಳಾ ಸಿಬ್ಬಂದಿ ಏಕತೆ ಮತ್ತು ಒಳಗೊಳ್ಳುವಿಕೆಯ ಸಂದೇಶ ತಿಳಿಸುವ ಸಾಹಸ ಪ್ರದರ್ಶಿಸಿದರು. ನಂತರ ಸಿಆರ್ ಪಿಎಫ್, ಬಿಎಸ್ ಎಫ್ ಮತ್ತು ಎಸ್ ಎಸ್ ಬಿ ಸಿಬ್ಬಂದಿ ಯೋಗ ಸೇರಿದಂತೆ  ಭಾರತೀಯ ಮೌಲ್ಯಗಳ ಶಕ್ತಿ ಕುರಿತ ಪ್ರದರ್ಶನ ನೀಡಿದರು. 

ಸಹಾಯಕ ಕಮಾಂಡೆಂಟ್ ಸೀಮಾ ನಾಗ್  ಕಮಾಂಡೆಂಟ್ ಅಭಿವಾದನ' ಪ್ರದರ್ಶನ ನೀಡಿದರೆ, ಎಚ್‌ಸಿ ರೀಟಾ ಬಿಷ್ಟ್ ಮತ್ತು ಇತರ ಏಳು ಮಂದಿ 'ಲಕ್ಷಿತಾ' ಪ್ರದರ್ಶನವನ್ನು ನೀಡಿದರು.  ಸಿಟಿ ಅಮನ್‌ದೀಪ್ ಕೌರ್ ಮತ್ತು ಇತರ 25 ಜನರು ಇತ್ತೀಚಿನ ಶಸ್ತ್ರಾಸ್ತ್ರಗಳೊಂದಿಗೆ 'ಸರ್ವತ್ರ ಸುರಕ್ಷಾ' ಸಾಹಸ ಪ್ರದರ್ಶನ ನೀಡಿದರು. 'ನಾರಿ ಶಕ್ತಿ' ಪ್ರದರ್ಶನದಲ್ಲಿ ಇನ್ಸ್‌ಪೆಕ್ಟರ್ ಸೆಹನಾಜ್ ಖಾತೂನ್ ಮತ್ತು ಇತರ ದೇಶದ ಒಳನಾಡಿನಲ್ಲಿ ನಿಯೋಜಿಸಲಾದ 13 ಮಹಿಳಾ ಸಿಬ್ಬಂದಿ ಪಾಲ್ಗೊಂಡರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com