ದೆಹಲಿಯ ಕರ್ತವ್ಯ ಪಥದಲ್ಲಿ ಗಣರಾಜ್ಯೋತ್ಸವ ಸಂಭ್ರಮ: ಭಾರತೀಯ ಸೇನೆ, ಮಹಿಳಾ ಶಕ್ತಿ ಅನಾವರಣ

ದೇಶದಾದ್ಯಂತ 75ನೇ ಗಣರಾಜ್ಯೋತ್ಸವ ಸಂಭ್ರಮ ಮನೆ ಮಾಡಿದ್ದು, ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ದೇಶದ ಮಿಲಿಟರಿ ಶಕ್ತಿಯ ಜೊತೆಗೆ ಸಾಂಸ್ಕೃತಿಕ ಪರಂಪರೆಯ ಪರೇಡ್ ಆರಂಭವಾಗಿದೆ.
parade at Kartavya Path
parade at Kartavya Path
Updated on

ನವದೆಹಲಿ: ದೇಶದಾದ್ಯಂತ 75ನೇ ಗಣರಾಜ್ಯೋತ್ಸವ ಸಂಭ್ರಮ ಮನೆ ಮಾಡಿದ್ದು, ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ದೇಶದ ಮಿಲಿಟರಿ ಶಕ್ತಿಯ ಜೊತೆಗೆ ಸಾಂಸ್ಕೃತಿಕ ಪರಂಪರೆಯ ಪರೇಡ್ ಆರಂಭವಾಗಿದೆ.

ಈ ಬಾರಿ ಫ್ರಾನ್ಸ್ ಅಧ್ಯಕ್ಷ ಎಮ್ಯಾನುವೆಲ್‌ ಮ್ಯಾಕ್ರನ್‌ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದು, ಪರೇಡ್‌ನಲ್ಲಿ ಮಹಿಳಾ ಸಬಲೀಕರಣದ ಶಕ್ತಿಯೂ ಅನಾವರಣವಾಗುತ್ತಿದೆ.

ರಾಷ್ಟ್ರಪತಿ ದ್ರೌಪದಿ ಮುರ್ಮು 90 ನಿಮಿಷಗಳ ಅವಧಿಯ ಈ ಪರೇಡ್‌ನ ಮುಂದಾಳುವಾಗಿದ್ದಾರೆ. ಭೂಸೇನೆ, ವಾಯುಸೇನೆ, ನೌಕಾಸೇನೆ ಹಾಗು ವಿವಿಧ ಭದ್ರತಾ ಪಡೆಗಳು ಸ್ವದೇಶಿ ನಿರ್ಮಿತ, ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ಕ್ಷಿಪಣಿಗಳು, ಡ್ರೋನ್‌ ಜಾಮರ್‌ಗಳು, ಸರ್ವೆಲೆನ್ಸ್‌ ವ್ಯವಸ್ಥೆ ಹೀಗಾಗಿ ತನ್ನ ಶಕ್ತಿಯನ್ನು ಜಗತ್ತಿನೆದುರು ಪ್ರದರ್ಶಿಸುತ್ತಿದೆ.

ಇದೇ ಮೊದಲ ಬಾರಿಗೆ ಮಹಿಳೆಯರೇ ಇರುವ ಮೂರು ಸೇನಾಪಡೆಗಳ ತಂಡ ಪರೇಡ್‌ನಲ್ಲಿ ತನ್ನ ಪ್ರದರ್ಶನ ನೀಡುತ್ತಿದೆ. ಅಷ್ಟೇ ಅಲ್ಲ, ಇದೇ ಮೊದಲ ಬಾರಿಗೆ ಸಾಂಪ್ರದಾಯಿಕ ಮಿಲಿಟರಿ ಬ್ಯಾಂಡ್‌ಗಳಿಗೆ ಬದಲಾಗಿ 100ಕ್ಕೂ ಹೆಚ್ಚು ಮಹಿಳಾ ಕಲಾವಿದರು ವಿವಿಧ ಭಾರತೀಯ ಸಂಗೀತ ಉಪಕರಣಗಳಾದ ಶಂಖ, ನಾದ ಸ್ವರ ಮತ್ತು ನಗಡ ರೀತಿಯ ಸಾಂಪ್ರದಾಯಿಕ ಮಿಲಿಟರಿ ಉಪಕರಣಗಳಲ್ಲಿ ಸ್ವರ ಹೊಮ್ಮಿಸಿದ್ದಾರೆ. 15 ಮಹಿಳಾ ಪೈಲಟ್‌ಗಳು ಭಾರತೀಯ ವಾಯುಸೇನೆ ನಡೆಸುವ ಫ್ಲೈ ಫಾಸ್ಟ್‌ನಲ್ಲಿ ಪಾಲ್ಗೊಂಡು ರೋಮಾಂಚನಗೊಳಿಸಿದ್ದಾರೆ.

ಈ ಮೂಲಕ ಆಗಸದಲ್ಲೂ ನಾರಿ ಶಕ್ತಿ ಪ್ರದರ್ಶನವಾಗಿದೆ. ಕೇಂದ್ರೀಯ ಪೊಲೀಸ್‌ ಪಡೆಗಳ ಮಹಿಳೆಯರನ್ನೇ ಒಳಗೊಂಡ ತಂಡವೂ ಪರೇಡ್‌ನಲ್ಲಿ ಪಾಲ್ಗೊಂಡಿದೆ.

ಗಣರಾಜ್ಯೋತ್ಸವ ಪರೇಡ್‌ 10.30ಕ್ಕೆ ಆರಂಭವಾಗಿದ್ದು, ಸುಮಾರು 90 ನಿಮಿಷಗಳ ಕಾಲ ನಡೆಯಲಿದೆ. ಇದಕ್ಕೂ ಮುನ್ನ, ಪ್ರಧಾನಿ ಮೋದಿ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ತೆರಳಿ ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದರು.

ಇದಾದ ಕೆಲವೇ ನಿಮಿಷಗಳ ನಂತರ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮುಖ್ಯ ಅತಿಥಿ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್‌ ಅವರು ಸಾಂಪ್ರದಾಯಿಕ ಗೌರವಾದರಗಳೊಂದಿಗೆ ಪರೇಡ್‌ ಸ್ಥಳಕ್ಕೆ ಆಗಮಿಸಿದರು. ನಂತರ ರಾಷ್ಟ್ರಧ್ವಜಾರೋಹಣ ನಡೆಯಿತು. ರಾಷ್ಟ್ರಗೀತೆ ಮೊಳಗಿತು. 21 ಗನ್‌ ಸೆಲ್ಯೂಟ್‌ ಗೌರವ ನೀಡಲಾಯಿತು. Mi-17 IV ಹೆಲಿಕಾಪ್ಟರ್‌ಗಳು ಪ್ರೇಕ್ಷಕರ ಮೇಲೆ ಪುಷ್ಪವೃಷ್ಟಿ ನಡೆಸಿದವು.

ಇದಾದ ನಂತರ ಇದೇ ಮೊದಲ ಬಾರಿಗೆ 'ಆವಾಹನ್' ಎಂಬ ವಿಶಿಷ್ಠ ಪರೇಡ್ ನಡೆಯಿತು. ಇದರಲ್ಲಿ 100ಕ್ಕೂ ಹೆಚ್ಚು ಮಹಿಳಾ ಕಲಾವಿದರು ವಿವಿಧ ಸಂಗೀತೋಪಕರಣಗಳನ್ನು ನುಡಿಸಿದರು. ಇದೀಗ ರಾಷ್ಟ್ರಪತಿ ಪರೇಡ್‌ ಸೆಲ್ಯೂಟ್‌ ಪಡೆಯುತ್ತಿದ್ದಾರೆ. ಈ ಬಾರಿ ಕರ್ತವ್ಯ ಪಥದಲ್ಲಿ ಫ್ರೆಂಚ್‌ ಸೇನಾ ತಂಡದಿಂದಲೂ ಮಾರ್ಚ್‌ ಫಾಸ್ಟ್‌ ಹಾಗು ಬ್ಯಾಂಡ್‌ ಪ್ರದರ್ಶನ ನಡೆಯಿತು. ಈ ಬಾರಿ ವಿವಿಧ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು, ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳ 16 ಸ್ತಬ್ಧಚಿತ್ರಗಳು ಪರೇಡ್‌ನಲ್ಲಿ ಭಾಗವಹಿಸಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com