ಭಾರತೀಯ ಸೇನೆಯ ಮೊದಲ ಮಹಿಳಾ ಸುಬೇದಾರ್ ಆಗಿ ಪ್ರೀತಿ ರಜಕ್ ನೇಮಕ

ಭಾರತೀಯ ಸೇನೆಯ ಮೊದಲ ಮಹಿಳಾ ಸಬೇದಾರ್ ಆಗಿ ಚಾಂಪಿಯನ್ ಟ್ರ್ಯಾಪ್ ಶೂಟರ್ ಆಗಿರುವ ಪ್ರೀತಿ ರಜಕ್ ಅವರು ನೇಮಕ ಗೊಂಡಿದ್ದಾರೆ.
ಭಾರತೀಯ ಸೇನೆಯ ಮೊದಲ ಮಹಿಳಾ ಸಬೇದಾರ್ ಆಗಿ ಪ್ರೀತಿ ರಜಕ್ ನೇಮಕ
ಭಾರತೀಯ ಸೇನೆಯ ಮೊದಲ ಮಹಿಳಾ ಸಬೇದಾರ್ ಆಗಿ ಪ್ರೀತಿ ರಜಕ್ ನೇಮಕ

ನವದೆಹಲಿ: ಭಾರತೀಯ ಸೇನೆಯ ಮೊದಲ ಮಹಿಳಾ ಸುಬೇದಾರ್ ಆಗಿ ಚಾಂಪಿಯನ್ ಟ್ರ್ಯಾಪ್ ಶೂಟರ್ ಆಗಿರುವ ಪ್ರೀತಿ ರಜಕ್ ಅವರು ನೇಮಕ ಗೊಂಡಿದ್ದಾರೆ.

ಹವಾಲ್ದಾರ್ ಆಗಿದ್ದ ಪ್ರೀತಿ ರಜಕ್ ಭಾನುವಾರ ಬಡ್ತಿ ಪಡೆದ ನಂತರ ಭಾರತೀಯ ಸೇನೆಯಲ್ಲಿ ಸುಬೇದಾರ್ ಹುದ್ದೆಯನ್ನು ಅಲಂಕರಿಸಿದ ಮೊದಲ ಮಹಿಳೆ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಸುಬೇದಾರ್ ಪ್ರೀತಿ ರಜಕ್ ಅವರು ಡಿಸೆಂಬರ್ 2022 ರಲ್ಲಿ ಕಾರ್ಪ್ಸ್ ಆಫ್ ಮಿಲಿಟರಿ ಪೋಲೀಸ್‌ನಲ್ಲಿ ಸೈನ್ಯಕ್ಕೆ ಸೇರಿದ್ದರು.

ಭಾರತೀಯ ಸೇನೆ ಈ ಕುರಿತು ಮಾಹಿತಿ ನೀಡಿದ್ದು, "ಭಾರತೀಯ ಸೇನೆ ಹಾಗೂ ದೇಶದ ಮಹಿಳೆಯರಿಗೆ ಹೆಮ್ಮೆಯ ಕ್ಷಣದಲ್ಲಿ ಇಂದು ಟ್ರ್ಯಾಪ್ ಶೂಟರ್ ಹವಾಲ್ದಾರ್ ಪ್ರೀತಿ ರಜಕ್ ಅವರನ್ನು ಸುಬೇದಾರ್ ಹುದ್ದೆಗೆ ಬಡ್ತಿ ನೀಡಲಾಗಿದೆ. ಸುಬೇದಾರ್ ಪ್ರೀತಿ ರಜಕ್ ಈಗ ಭಾರತೀಯ ಸೇನೆಯ ಮೊದಲ ಮಹಿಳಾ ಸುಬೇದಾರ್ ಆಗಿದ್ದಾರೆ. ಅವರ ಸಾಧನೆಯು ನಾರಿ ಶಕ್ತಿಯ ಅಸಾಮಾನ್ಯ ಪ್ರದರ್ಶನವಾಗಿದೆ" ಎಂದು ಹೇಳಿಕೆಯಲ್ಲಿ ತಿಳಿಸಿದೆ.

"ಪ್ರೀತಿ ರಜಕ್ ಅವರ ಶ್ರೇಷ್ಠ ಸಾಧನೆಯು ಯುವತಿಯರ ತಲೆಮಾರುಗಳನ್ನು ಭಾರತೀಯ ಸೇನೆಗೆ ಸೇರಲು ಮುಂದೆ ಬರಲು ಪ್ರೇರೇಪಿಸುತ್ತದೆ ಮತ್ತು ವೃತ್ತಿಪರ ಶೂಟಿಂಗ್‌ನಲ್ಲಿ ತಮಗಾಗಿ ಒಂದು ಗೂಡನ್ನು ರೂಪಿಸುತ್ತದೆ. ಇಂದು, ಪದ್ಮಶ್ರೀ ಮತ್ತು ಅರ್ಜುನ ಪ್ರಶಸ್ತಿ ಪುರಸ್ಕೃತ ಸುಬೇದಾರ್ ಮೇಜರ್ ಮತ್ತು ಗೌರವ ಲೆಫ್ಟಿನೆಂಟ್ ಜಿತು ರೈ ಅವರನ್ನು ಸುಬೇದಾರ್ ಮೇಜರ್ ಮತ್ತು ಗೌರವ ಕ್ಯಾಪ್ಟನ್ ಹುದ್ದೆಗೆ ಬಡ್ತಿ ನೀಡಲಾಗಿದೆ ಎಂದು ಸೇನೆ ಹೇಳಿಕೆಯಲ್ಲಿ ಉಲ್ಲೇಖಿಸಿದೆ.

ಸುಬೇದಾರ್ ಪ್ರೀತಿ ರಜಕ್ ಅವರು ಡಿಸೆಂಬರ್ 22, 2022 ರಂದು ಮಿಲಿಟರಿ ಪೊಲೀಸ್ ಕಾರ್ಪ್ಸ್‌ನಲ್ಲಿ ಸೇನೆಗೆ ಸೇರಿದ್ದರು. ಅವರು ಹವಾಲ್ದಾರ್ ಆಗಿ ಸೈನ್ಯಕ್ಕೆ ದಾಖಲಾದ ಶೂಟಿಂಗ್ ವಿಭಾಗದಲ್ಲಿ ಮೊದಲ ಪ್ರತಿಭಾನ್ವಿತ ಕ್ರೀಡಾಪಟುವಾಗಿದ್ದಾರೆ. ಈ ಹಿಂದೆ ಅವರು ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ 19ನೇ ಏಷ್ಯನ್ ಗೇಮ್ಸ್‌ನಲ್ಲಿ, ಟ್ರ್ಯಾಪ್ ಮಹಿಳಾ ತಂಡ ಸ್ಪರ್ಧೆಯಲ್ಲಿ ರಜಕ್ ಬೆಳ್ಳಿ ಪದಕ ಗೆದ್ದಿದ್ದರು.

ಆಕೆಯ ಅಸಾಧಾರಣ ಪ್ರದರ್ಶನದ ಆಧಾರದ ಮೇಲೆ, ಆಕೆಗೆ ಸುಬೇದಾರ್‌ ಹುದ್ದೆಗೆ ಮೊದಲ ಬಾರಿಗೆ ಬಡ್ತಿ ನೀಡಲಾಯಿತು. ಸುಬೇದಾರ್ ರಜಾಕ್ ಪ್ರಸ್ತುತ ಭಾರತದಲ್ಲಿ ಆರನೇ ಶ್ರೇಯಾಂಕವನ್ನು ಹೊಂದಿದ್ದಾರೆ (ಟ್ರ್ಯಾಪ್ ವುಮೆನ್ ಈವೆಂಟ್) ಮತ್ತು ಪ್ಯಾರಿಸ್ ಒಲಂಪಿಕ್ ಗೇಮ್ಸ್ 2024 ರ ತಯಾರಿಯಲ್ಲಿ ಆರ್ಮಿ ಮಾರ್ಕ್ಸ್‌ಮನ್‌ಶಿಪ್ ಯುನಿಟ್ (AMU) ನಲ್ಲಿ ತರಬೇತಿ ಪಡೆಯುತ್ತಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com