ಬಿಹಾರ: ಕಾಂಗ್ರೆಸ್ ಪಕ್ಷದ ವೀಕ್ಷಕರಾಗಿ ಭೂಪೇಶ್ ಬಘೇಲ್ ನೇಮಕ!

ಬಿಹಾರದಲ್ಲಿ ರಾಜಕೀಯ ಬಿರುಗಾಳಿ ಎದ್ದಿರುವಂತೆಯೇ  ಭಾರತ ಜೋಡೋ ನ್ಯಾಯ ಯಾತ್ರೆ ಹಾಗೂ ಅಲ್ಲಿ ಪಕ್ಷದ ಚಟುವಟಿಕೆ ನೋಡಿಕೊಳ್ಳಲು  ಛತ್ತೀಸ್‌ಗಢದ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರನ್ನು ಕಾಂಗ್ರೆಸ್ ಶನಿವಾರ ನೇಮಿಸಿದೆ. 
ಭೂಪೇಶ್ ಬಘೇಲ್
ಭೂಪೇಶ್ ಬಘೇಲ್

ನವದೆಹಲಿ: ಬಿಹಾರದಲ್ಲಿ ರಾಜಕೀಯ ಬಿರುಗಾಳಿ ಎದ್ದಿರುವಂತೆಯೇ  ಭಾರತ ಜೋಡೋ ನ್ಯಾಯ ಯಾತ್ರೆ ಹಾಗೂ ಅಲ್ಲಿ ಪಕ್ಷದ ಚಟುವಟಿಕೆ ನೋಡಿಕೊಳ್ಳಲು ವೀಕ್ಷಕರಾಗಿ  ಛತ್ತೀಸ್‌ಗಢದ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರನ್ನು ಕಾಂಗ್ರೆಸ್ ಶನಿವಾರ ನೇಮಿಸಿದೆ. 

ಬಿಹಾರ ಮುಖ್ಯಮಂತ್ರಿ ಮತ್ತು ಜೆಡಿಯು ಅಧ್ಯಕ್ಷ ನಿತೀಶ್ ಕುಮಾರ್ ಭಾರತೀಯ ಜನತಾ ಪಾರ್ಟಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟಕ್ಕೆ ಮರಳಬಹುದು ಎಂಬ ಬಲವಾದ ಸೂಚನೆಗಳ ನಡುವೆ ಬಿಹಾರದಲ್ಲಿ ಅಧಿಕಾರ ರಾಜಕಾರಣ ತೀವ್ರಗೊಂಡಿರುವ ಸಮಯದಲ್ಲಿ ಈ ನೇಮಕ ಮಾಡಲಾಗಿದೆ. 

ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರು ಬಿಹಾರದಲ್ಲಿ 'ಭಾರತ್ ಜೋಡೋ ನ್ಯಾಯ ಯಾತ್ರೆ' ಮತ್ತು ಪಕ್ಷದ ಇತರ ಚಟುವಟಿಕೆಗಳನ್ನು ನೋಡಿಕೊಳ್ಳಲು ಹಿರಿಯ ವೀಕ್ಷಕರಾಗಿ ಬಾಘೇಲ್ ಅವರನ್ನು ನೇಮಿಸಿದ್ದಾರೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಸಂಘಟನೆ ಕೆ ಸಿ ವೇಣುಗೋಪಾಲ್ ಹೇಳಿಕೆ ನೀಡಿದ್ದಾರೆ.

ರಾಹುಲ್ ಗಾಂಧಿ ನೇತೃತ್ವದ ಯಾತ್ರೆಯು ಜನವರಿ 26 ರಿಂದ 27 ರವರೆಗೆ ಎರಡು ದಿನಗಳ ವಿರಾಮವನ್ನು ಹೊಂದಿದ್ದು, ಪಶ್ಚಿಮ ಬಂಗಾಳದ ಜಲ್ಪೈಗುರಿಯಿಂದ ಪುನರಾರಂಭವಾಗಲಿದೆ. ಇದು ಜನವರಿ 29 ರಂದು ಬಿಹಾರವನ್ನು ಪ್ರವೇಶಿಸುವ ನಿರೀಕ್ಷೆಯಿದೆ ಮತ್ತು ಜನವರಿ 31 ರಂದು ಮಾಲ್ಡಾ ಮೂಲಕ ಮತ್ತೆ ಪಶ್ಚಿಮ ಬಂಗಾಳಕ್ಕೆ ಮರಳುತ್ತದೆ.

ರಾಹುಲ್ ಗಾಂಧಿ ಮಣಿಪುರದಿಂದ ಮುಂಬೈಗೆ 6,700-ಕಿಮೀಗಳಷ್ಟು ಭಾರತ್ ಜೋಡೋ ನ್ಯಾಯ ಯಾತ್ರೆಯನ್ನು ಕೈಗೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com