ಕೇರಳ: ರಾಜ್ಯಪಾಲರು ಕಾರಿನಿಂದ ಇಳಿಯಬಾರದಿತ್ತು- ಸಿಎಂ ವಿಜಯನ್

ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಶನಿವಾರ ಕಾರಿನಿಂದ ಕೆಳಗೆ ಇಳಿಯಬಾರದಿತ್ತು ಎಂದು ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಹೇಳಿದ್ದಾರೆ.
ರಾಜ್ಯಪಾಲ ಆರಿಫ್, ಸಿಎಂ ವಿಜಯನ್
ರಾಜ್ಯಪಾಲ ಆರಿಫ್, ಸಿಎಂ ವಿಜಯನ್

ತಿರುವನಂತಪುರಂ: ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಶನಿವಾರ ಕಾರಿನಿಂದ ಕೆಳಗೆ ಇಳಿಯಬಾರದಿತ್ತು ಎಂದು ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಹೇಳಿದ್ದಾರೆ.

 ಶನಿವಾರ ಬೆಳಿಗ್ಗೆ ಕೊಟ್ಟಾರಕ್ಕರದಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ವೇಳೆ ರಾಜ್ಯಪಾಲ ಆರಿಫ್ ಅವರಿಗೆ ಆಡಳಿತಾರೂಢ ಸಿಪಿಐ(ಎಂ)ನ ವಿದ್ಯಾರ್ಥಿ ಘಟಕ ಸ್ಟೂಡೆಂಟ್ ಫೆಡರೇಷನ್ ಆಫ್ ಇಂಡಿಯಾ ಕಾರ್ಯಕರ್ತರು ಕಪ್ಪು ಭಾವುಟ ಪ್ರದರ್ಶಿಸಿದ್ದರು. ತಮ್ಮ ವಿರುದ್ಧ ಪ್ರತಿಭಟನೆ ನಡೆಸಿದ ಎಸ್ ಎಫ್ ಐ ಕಾರ್ಯಕರ್ತರನ್ನು ಬಂಧಿಸುವಂತೆ ಒತ್ತಾಯಿಸಿ ಆರಿಫ್ ಕಾರಿನಿಂದ ಇಳಿದು ರಸ್ತೆ ಬದಿಯಲ್ಲಿ ಕುಳಿತು ಪ್ರತಿಭಟನೆ ನಡೆಸಿದ್ದರು. 

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ವಿಜಯನ್, ರಾಜ್ಯಪಾಲರು ಕಾರಿನಿಂದ ಕೆಳಗೆ ಇಳಿದಿರುವುದು ಭದ್ರತಾ ಶಿಷ್ಟಾಚಾರಕ್ಕೆ ವಿರುದ್ಧವಾಗಿದೆ. ಅವರು ಹಾಗೆ ಮಾಡಬಾರದಿತ್ತು. ರಾಜ್ಯಪಾಲರು ಪದೇ ಪದೇ ಪ್ರಜಾಪ್ರಭುತ್ವ ತತ್ವಗಳಿಗೆ ವಿರುದ್ಧವಾದ ನಿಲುವು ತೆಗೆದುಕೊಳ್ಳುತ್ತಿದ್ದಾರೆ ಎಂದರು.

ರಾಜ್ಯಪಾಲರ ಭದ್ರತೆಯನ್ನು ಕೇಂದ್ರೀಯ ಮೀಸಲು ಪೊಲೀಸ್ ಪಡೆಗೆ (ಸಿಆರ್‌ಪಿಎಫ್) ಹಸ್ತಾಂತರಿಸಿರುವುದು 'ವಿಚಿತ್ರ' ಎಂದು ಬಣ್ಣಿಸಿದ ಮುಖ್ಯಮಂತ್ರಿ, ಖಾನ್ ಅವರು ಈಗ ಕೇಂದ್ರದಿಂದ ವಿಶೇಷ ಸೌಲಭ್ಯ ಪಡೆಯುತ್ತಿರುವ ಕೆಲ ಆರ್ ಎಸ್ ಎಸ್ ಕಾರ್ಯಕರ್ತರ ಗುಂಪಿಗೆ ಸೇರಿದ್ದಾರೆ ಎಂದು ಆರೋಪಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com