ಆಂಧ್ರದಿಂದ ಬೆಂಗಳೂರಿಗೆ ಸಾಗಿಸುತ್ತಿದ್ದ 64 ಕೆಜಿ ಗಾಂಜಾದೊಂದಿಗೆ ಮೂವರ ಬಂಧನ

ಆಂಧ್ರಪ್ರದೇಶದಿಂದ ಬೆಂಗಳೂರಿಗೆ ಗಾಂಜಾ ಸಾಗಾಟ ಮಾಡುತ್ತಿದ್ದ ಜಾಲವನ್ನು ಚೌಟುಪ್ಪಲ್ ಪೊಲೀಸರೊಂದಿಗೆ ಮಲ್ಕಾಜ್‌ಗಿರಿ ವಿಶೇಷ ಕಾರ್ಯಾಚರಣೆ ತಂಡ ಭೇದಿಸಿದ್ದು, ಮೂವರನ್ನು ಬಂಧಿಸಿದ್ದು, ಅವರಿಂದ 64 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಹೈದರಾಬಾದ್: ಆಂಧ್ರಪ್ರದೇಶದಿಂದ ಬೆಂಗಳೂರಿಗೆ ಗಾಂಜಾ ಸಾಗಾಟ ಮಾಡುತ್ತಿದ್ದ ಜಾಲವನ್ನು ಚೌಟುಪ್ಪಲ್ ಪೊಲೀಸರೊಂದಿಗೆ ಮಲ್ಕಾಜ್‌ಗಿರಿ ವಿಶೇಷ ಕಾರ್ಯಾಚರಣೆ ತಂಡ ಭೇದಿಸಿದ್ದು, ಮೂವರನ್ನು ಬಂಧಿಸಿದ್ದು, ಅವರಿಂದ 64 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ಫಯಾಸ್ (29) ಅನಂತ ಮೋಹನ್ (25) ಸೈಯದ್ (39) ಬಂಧಿತ ಆರೋಪಿಗಳು. ಇವರೆಲ್ಲರೂ ಕೇರಳದ ವಿವಿಧ ಜಿಲ್ಲೆಗಳಿಂದ ಬಂದವರಾಗಿದ್ದಾರೆ. ಅವರಲ್ಲಿ ಒಬ್ಬರು ಬೆಂಗಳೂರು ಮೂಲದ ಪೆಡ್ಲರ್‌ನ ಸಂಪರ್ಕಕ್ಕೆ ಬಂದು ಉಳಿದವರನ್ನು ಪರಿಚಯಿಸಿದರು ಎನ್ನಲಾಗಿದೆ.

ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯ ಅರಕುವಿನಿಂದ ಬೆಂಗಳೂರಿಗೆ ಗಾಂಜಾ ಸಾಗಿಸುವ ವೇಳೆ ಬೆಂಗಳೂರಿನ ಪೆಡ್ಲರ್ ಮೂವರು ಸಾಗಣೆದಾರರಿಗೆ ಭಾರಿ ಹಣ ನೀಡುವುದಾಗಿ ಭರವಸೆ ನೀಡಿದ್ದರು. ಇದಕ್ಕಾಗಿ ಯೋಜನೆ ರೂಪಿಸಿ, ಡ್ರಗ್ಸ್ ಇರುವ ಕಾರನ್ನು ಸೈಯದ್ ಚಾಲನೆ ಮಾಡಲು ಮತ್ತು ಫಯಾಸ್, ಮೋಹನ್ ಎರಡನೇ ಕಾರಿನಲ್ಲಿ ತೆರಳಲು ಸೂಚನೆ ನೀಡಲಾಗಿತ್ತು.

ಅದರಂತೆ  ಮೂವರು ಆರೋಪಿಗಳು ಜನವರಿ 24ರಂದು ಅರಕುವಿಗೆ ತೆರಳಿ ಗಾಂಜಾ ತುಂಬಿಕೊಂಡು, ಹೈದರಾಬಾದ್ ಮೂಲಕ ಬೆಂಗಳೂರಿಗೆ ತೆರಳುತ್ತಿದ್ದಾಗ ಮಲ್ಕಾಜ್‌ಗಿರಿ ಎಸ್‌ಒಟಿ ಮತ್ತು ಚೌಟುಪ್ಪಲ್ ಪೊಲೀಸರು ಅವರ ವಾಹನಗಳನ್ನು ತಡೆದು ತಪಾಸಣೆ ನಡೆಸಿದಾಗ ಗಾಂಜಾ ಪತ್ತೆಯಾಗಿದೆ. ಆರೋಪಿಗಳನ್ನು  ಬಂಧಿಸಿ, ಅಕ್ರಮ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com