ಕೇಂದ್ರ ಬಜೆಟ್ 2024-25: ಇಂದು ದ್ರೌಪದಿ ಮುರ್ಮು ಭಾಷಣ, ನಾಳೆ ಸೀತಾರಾಮನ್ ಬಜೆಟ್ ಮಂಡನೆ, ಇದು ನಾರಿ ಶಕ್ತಿಯ ಹಬ್ಬ- ಪ್ರಧಾನಿ ಮೋದಿ

ಕೇಂದ್ರ ಬಜೆಟ್ ಅಧಿವೇಶನ ಉದ್ದೇಶಿಸಿ ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾಷಣ ಮಾಡಲಿದ್ದು, ನಾಳೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡನೆ ಮಾಡಲಿದ್ದಾರೆ. ಇದು ನಾರಿ ಶಕ್ತಿಯ ಹಬ್ಬವೆಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಬುಧವಾರ ಹೇಳಿದರು.
ಪ್ರಧಾನಿ ಮೋದಿ
ಪ್ರಧಾನಿ ಮೋದಿ

ನವದೆಹಲಿ: ಕೇಂದ್ರ ಬಜೆಟ್ ಅಧಿವೇಶನ ಉದ್ದೇಶಿಸಿ ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾಷಣ ಮಾಡಲಿದ್ದು, ನಾಳೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡನೆ ಮಾಡಲಿದ್ದಾರೆ. ಇದು ನಾರಿ ಶಕ್ತಿಯ ಹಬ್ಬವೆಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಬುಧವಾರ ಹೇಳಿದರು.

ಇಂದಿನಿಂದ ಸಂಸತ್ತಿನಲ್ಲಿ ಮಧ್ಯಂತರ ಬಜೆಟ್​​​​ ಅಧಿವೇಶನ ನಡೆಯಲಿದ್ದು, ಉಭಯ ಸದನಗಳನ್ನು ಉದ್ದೇಶಿ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಮಾತನಾಡಲಿದ್ದಾರೆ.

ಇದಕ್ಕೂ ಮುನ್ನ ಪ್ರಧಾನಮಂತ್ರಿ ಮೋದಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಈ ವೇಳೆ ಅಶಿಸ್ತಿನ ಸಂಸದರಿಗೆ’ ಎಚ್ಚರಿಕೆಯ ಸಂದೇಶವನ್ನು ನೀಡಿದರು.

ಕಳೆದ 10 ವರ್ಷಗಳಲ್ಲಿ ಸಂಸದರು ಸಂಸತ್ತಿನಲ್ಲಿ ತಮಗಿಷ್ಟವಾದದ್ದನ್ನು ಮಾಡಿದ್ದಾರೆ. ಇವರನ್ನು ಅಪರಾಧಿಗಳು ಎಂದು ನಾನು ಕರೆಯಬೇಕೆ? ಪ್ರಜಾಪ್ರಭುತ್ವದ ಮರ್ಯಾದೆ ಕಳೆದಿದ್ದಾರೆ ಇದು ಅವರ ಅಭ್ಯಾಸವಾಗಿರಬಹುದು, ಆದರೆ, ಒಂದು ಬಾರಿ ಸಂಸದರು ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಮುಂದಿನ ದಿನದಲ್ಲಿ ನಿಮ್ಮ ಕ್ಷೇತ್ರದಲ್ಲಿ ಈ ಬಗ್ಗೆ ಪ್ರಶ್ನೆ ಮಾಡಬಹುದು ಎಂದು ಹೇಳಿದರು.

ಅಧಿವೇಶನದಲ್ಲಿ ವಿರೋಧ ಪಕ್ಷಗಳು ಧ್ವನಿ ಎತ್ತಿದೆ, ಆದರೆ, ನಮ್ಮನ್ನು ವಿರೋಧಿಸಬೇಕು ಎಂಬ ಕಾರಣಕ್ಕೆ ವಿರೋಧಿಸಬೇಡಿ. ಅದು ಸಂಸತ್ತಿನ ಸಮಯಕ್ಕೆ ಹಾಗೂ ಚರ್ಚೆಗೆ ತೊಂದರೆ ಮಾಡಬಹುದು. ಈ ದೇಶಕ್ಕೆ ಅಥವಾ ನಮಗೆ ಬೆಳಕು ಚೆಲ್ಲುವವರನ್ನು ಆತ್ಮೀಯವಾಗಿ ಸ್ಮರಿಸಲಾಗುವುದು. ಸಂಸತ್ತಿನಲ್ಲಿ ವಿಷಾದಿಸುವ ಅವಕಾಶವಿದೆ. ಇದನ್ನು ಬಿಡಬೇಡಿ ಎಂದು ತಿಳಿಸಿದರು.

ಇದೇ ವೇಳೆ ಸಂಸತ್ತಿನಲ್ಲಿ ಅಂಗೀಕರಿಸಲಾದ ಮಹಿಳಾ ಮೀಸಲಾತಿ ಮಸೂದೆಯನ್ನು ಉಲ್ಲೇಖಿಸಿ ಮಾತನಾಡಿದ ಅವರು, ಈ ವರ್ಷದ ಗಣರಾಜ್ಯೋತ್ಸವದಲ್ಲಿ ನಾವೆಲ್ಲರೂ “ನಾರಿ ಶಕ್ತಿ”ಗೆ ಸಾಕ್ಷಿಯಾಗಿದ್ದೇವೆ. ಇಂದು ಅಧ್ಯಕ್ಷೆ ದ್ರೌಪದಿ ಮುರ್ಮು ಅವರು ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಮತ್ತು ನಾಳೆ ನಿರ್ಮಲಾ ಸೀತಾರಾಮನ್ ಮಧ್ಯಂತರ ಬಜೆಟ್​​​ ಮಂಡಿಸಲಿದ್ದಾರೆ. ಇದು ನಾರಿ ಶಕ್ತಿಯ ಹಬ್ಬ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com