
ಭಾರತದಲ್ಲಿ ಗುಂಪು ಹತ್ಯೆಯ ಪ್ರವೃತ್ತಿ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಇದೀಗ ಈ ರೀತಿಯ ಘಟನೆ ಗುಜರಾತ್‌ನ ಚಿಖೋದ್ರಾದಲ್ಲಿ ನಡೆದಿದೆ. ಕ್ರಿಕೆಟ್ ಪಂದ್ಯಾವಳಿಯನ್ನು ವೀಕ್ಷಿಸಲು ತೆರಳಿದ್ದ 23 ವರ್ಷದ ಸಲ್ಮಾನ್ ವೋಹ್ರಾ ಎಂಬಾತನನ್ನು ಗುಂಪೊಂದು ಬರ್ಬರವಾಗಿ ಹೊಡೆದು ಕೊಂದಿದೆ.
ಮಾಹಿತಿ ಪ್ರಕಾರ, ಪೋಲ್ಸನ್ ಕಂಪೌಂಡ್ ನಿವಾಸಿ ಸಲ್ಮಾನ್ ಎರಡು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದು, ಪತ್ನಿ ಒಂದು ತಿಂಗಳ ಗರ್ಭಿಣಿಯಾಗಿದ್ದಾಳೆ.
ದಿ ಕ್ವಿಂಟ್ ವರದಿಯ ಪ್ರಕಾರ, ಮುಸ್ಲಿಂ ಆಟಗಾರರು ಉತ್ತಮ ಪ್ರದರ್ಶನ ನೀಡುತ್ತಿರುವುದನ್ನು ಸಹಿಸದ ಪ್ರೇಕ್ಷಕರ ಒಂದು ಗುಂಪು ಪದೇ ಪದೇ 'ಜೈ ಶ್ರೀ ರಾಮ್' ಘೋಷಣೆಗಳನ್ನು ಕೂಗುತ್ತಿತ್ತು. ಈ ವೇಳೆ ದ್ವಿಚಕ್ರವಾಹನದಲ್ಲಿ ಹೋಗುತ್ತಿದ್ದ ಕೆಲವರು ಬಂದು ಸಲ್ಮಾನ್ ಜೊತೆ ಜಗಳವಾಡಿದ್ದು ವಿವಾದ ವಿಕೋಪಕ್ಕೆ ತಿರುಗಿತ್ತು. ಸ್ಟ್ಯಾಂಡ್‌ನಿಂದ ಬೈಕ್ ತೆಗೆಯುವಂತೆ ಸಲ್ಮಾನ್‌ಗೆ ಹೇಳಿದ್ದಾರೆ.
ಇದಾದ ನಂತರ ಗುಂಪು ಸಲ್ಮಾನ್ ಗೆ ನಿರ್ದಯವಾಗಿ ಥಳಿಸಲು ಪ್ರಾರಂಭಿಸಿದೆ. ಗಂಭೀರವಾಗಿ ಗಾಯಗೊಂಡಿದ್ದ ಸಲ್ಮಾನ್‌ನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ವೇಳೆ ಆತ ಮೃತಪಟ್ಟಿದ್ದಾರೆ. ಈ ಘಟನೆಯಲ್ಲಿ ಇತರ ಇಬ್ಬರು ಮುಸ್ಲಿಂ ಯುವಕರು ಗಾಯಗೊಂಡಿದ್ದು, ಅವರಲ್ಲಿ ಒಬ್ಬರಿಗೆ ಸುಮಾರು 17 ಹೊಲಿಗೆಗಳು ಹಾಕಿದ್ದರೆ ಮತ್ತೊಬ್ಬನಿಗೆ ಸುಮಾರು 7 ಹೊಲಿಗೆ ಹಾಕಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ಏಳು ಆರೋಪಿಗಳನ್ನು ಬಂಧಿಸಿದ್ದು, ನ್ಯಾಯಾಲಯವು ಈ ಎಲ್ಲ ಆರೋಪಿಗಳನ್ನು ಏಳು ದಿನಗಳ ರಿಮಾಂಡ್‌ಗೆ ಕಳುಹಿಸಿದೆ.
Advertisement