
ನವದೆಹಲಿ: ಸೇತುವೆ ಕುಸಿತದ ಸರಣಿ ದುರಂತಗಳು ಸಂಭವಿಸಿರುವ ಕಾರಣ ಬಿಹಾರ ಸರ್ಕಾರ 16 ಇಂಜಿನಿಯರ್ ಗಳನ್ನು ಅಮಾನತು ಮಾಡಿದೆ.
ಜಲಸಂಪನ್ಮೂಲ ಇಲಾಖೆ (ಡಬ್ಲ್ಯುಆರ್ ಡಿ)ಗೆ ತನಿಖಾ ಸಮಿತಿ ವರದಿ ಸಲ್ಲಿಸಿದ ಬೆನ್ನಲ್ಲೇ ಬಿಹಾರ ಸರ್ಕಾರ ಅಮಾನತು ನಿರ್ಧಾರ ಕೈಗೊಂಡಿದೆ.
ಜಲಸಂಪನ್ಮೂಲ ವಿಭಾಗದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಚೈತನ್ಯ ಪ್ರಸಾದ್, ರಾಜ್ಯ ಸರ್ಕಾರ ಇತ್ತೀಚಿನ ಸೇತುವೆಗಳ ಸರಣಿ ಕುಸಿತವನ್ನು ಗಂಭೀರವಾಗಿ ಪರಿಗಣಿಸಿದೆ ಮತ್ತು ಅವರ ನಿರ್ಲಕ್ಷ್ಯಕ್ಕಾಗಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮವನ್ನು ಪ್ರಾರಂಭಿಸಿದೆ ಎಂದು ಹೇಳಿದರು.
ಸೇತುವೆಗಳ ಕುಸಿತಕ್ಕೆ ಕಾರಣರಾದ ಗುತ್ತಿಗೆದಾರರನ್ನು ಗುರುತಿಸಲಾಗುತ್ತಿದ್ದು, ಶೀಘ್ರವೇ ಹೊಣೆಗಾರರನ್ನಾಗಿ ಮಾಡಲಾಗುವುದು, ಇಂತಹ ಗಂಭೀರ ಲೋಪಗಳನ್ನು ನಿರ್ಲಕ್ಷಿಸಲಾಗುವುದಿಲ್ಲ ಮತ್ತು ತಪ್ಪಿತಸ್ಥರು ಯಾರೇ ಆಗಿರಲಿ ಅವರನ್ನು ಬಿಡಲಾಗುವುದಿಲ್ಲ" ಎಂದು ಚೈತನ್ಯ ಪ್ರಸಾದ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.
16 ಎಂಜಿನಿಯರ್‌ಗಳ ಅಮಾನತು ಮಾಡುವುದರ ಜೊತೆಗೆ ಇನ್ನಿಬ್ಬರು ಎಂಜಿನಿಯರ್‌ಗಳಿಂದ ವಿವರಣೆ ಕೇಳಲಾಗಿದೆ. ಕೆಲವು ಕಾರ್ಯನಿರ್ವಾಹಕ ಎಂಜಿನಿಯರ್‌ಗಳ ಪಾತ್ರದ ಬಗ್ಗೆ ಸರ್ಕಾರದ ಪರಿಶೀಲಿಸುತ್ತಿದೆ. "ಕೆಲವು ಕಾರ್ಯಗತಗೊಳಿಸುವ ಗುತ್ತಿಗೆದಾರರ ಪಾತ್ರವನ್ನು ಪರಿಶೀಲಿಸಲಾಗುತ್ತಿದೆ" ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಗುರುವಾರ ಸರನ್ ಜಿಲ್ಲೆಯ 10 ನೇ ಸೇತುವೆ ಕುಸಿದ ಒಂದು ದಿನದ ನಂತರ ಇಲಾಖೆಯ 16 ಎಂಜಿನಿಯರ್‌ಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
Advertisement