ಬಿಹಾರ ವಿಶೇಷ ಸ್ಥಾನಮಾನ: JDU ಪಟ್ಟು ಬೆನ್ನಲ್ಲೇ ಆಂಧ್ರ ಪ್ರದೇಶಕ್ಕೆ ಹೆಚ್ಚಿನ ಅನುದಾನಕ್ಕೆ TDP ಆಗ್ರಹ, ಒತ್ತಡದಲ್ಲಿ NDA!

ಟಿಡಿಪಿಯ ಸಂಸದೀಯ ಪಕ್ಷದ ನಾಯಕ ಕೃಷ್ಣ ದೇವರಾಯಲು ಅವರು ಮಾತನಾಡಿ, ರಾಜ್ಯದ ಅಭಿವೃದ್ಧಿಗೆ ಕೇಂದ್ರದಿಂದ ಸಾಧ್ಯವಾದಷ್ಟು ಹಣವನ್ನು ಪಡೆಯಲು ಪಕ್ಷವು ಪ್ರಯತ್ನಿಸುತ್ತದೆ ಎಂದು ಹೇಳಿದ್ದಾರೆ.
ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಮತ್ತು ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ.
ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಮತ್ತು ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ.

ನವದೆಹಲಿ: ಕೇಂದ್ರದ ಎನ್'ಡಿಎ ಸರ್ಕಾರದ ಅಳಿವು-ಉಳಿವು ನಿರ್ಧರಿಸಿರುವ ಸಾಮರ್ಥ್ಯ ಹೊಂದಿರುವ ಜನತಾ ದಳ ಯುನೈಟೆಡ್ (ಜೆಡಿ(ಯು), ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಪಟ್ಟು ಹಿಡಿದಿದ್ದು, ಇದರ ಬೆನ್ನಲ್ಲೇ ಆಂಧ್ರಪ್ರದೇಶಕ್ಕೆ ಹೆಚ್ಚಿನ ಅನುದಾನ ನೀಡುವಂತೆ ತೆಲುಗು ದೇಶಂ ಪಕ್ಷ (ಟಿಡಿಪಿ) ಒತ್ತಾಯಿಸಿದೆ. ಎರಡು ಮಿತ್ರಗಳ ಈ ಆಗ್ರಹಗಳು ಆಡಳಿತಾರೂಢ ಎನ್‌ಡಿಎ ಪಕ್ಷವನ್ನು ಒತ್ತಡಕ್ಕೆ ಸಿಲುಕಿಸಿದೆ.

ಶನಿವಾರ ನಡೆದ ಜೆಡಿಯು ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಬಿಹಾರಕ್ಕೆ ವಿಶೇಷ ಸ್ಥಾನಮಾನ ಅಥವಾ ವಿಶೇಷ ಪ್ಯಾಕೇಜ್‌ಗೆ ಒತ್ತಾಯಿಸುವ ನಿರ್ಣಯವನ್ನು ಅಂಗೀಕರಿಸಲಾಗಿದೆ.

ಟಿಡಿಪಿಯ ಸಂಸದೀಯ ಪಕ್ಷದ ನಾಯಕ ಕೃಷ್ಣ ದೇವರಾಯಲು ಅವರು ಮಾತನಾಡಿ, ರಾಜ್ಯದ ಅಭಿವೃದ್ಧಿಗೆ ಕೇಂದ್ರದಿಂದ ಸಾಧ್ಯವಾದಷ್ಟು ಹಣವನ್ನು ಪಡೆಯಲು ಪಕ್ಷವು ಪ್ರಯತ್ನಿಸುತ್ತದೆ ಎಂದು ಹೇಳಿದ್ದಾರೆ.

ಕೇಂದ್ರದ ಮುಂದೆ ವಿಶೇಷ ಪ್ಯಾಕೇಜ್ ಅಥವಾ ವಿಶೇಷ ಸ್ಥಾನಮಾನದಂತಹ ಆಗ್ರಹ ಇಡಲು ಬಯಸುವುದಿಲ್ಲ. ಆದರೆ, ರಾಜ್ಯಕ್ಕೆ ಹೆಚ್ಚಿನ ನೆರವು ಪಡೆಯುವುದು ನಮಗೆ ಮುಖ್ಯವಾಗಿದೆ ಎಂದು ತಿಳಿಸಿದರು.

ರಾಜ್ಯದ ಅಭಿವೃದ್ಧಿಯೇ ನಮ್ಮ ಮುಖ್ಯ ಅಜೆಂಡಾ. ನಾವು ಅದಕ್ಕೆ ಬದ್ಧರಾಗಿದ್ದೇವೆ. ಸ್ಥಿರತೆ ಮತ್ತು ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಎನ್‌ಡಿಎ ಜೊತೆ ಕೆಲಸ ಮಾಡುತ್ತೇವೆ ಎಂದರು,

ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಮತ್ತು ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ.
ಬಿಹಾರಕ್ಕೆ 'ವಿಶೇಷ ಸ್ಥಾನಮಾನ' ನೀಡುವಂತೆ ಕೇಂದ್ರಕ್ಕೆ ಜೆಡಿಯು ಒತ್ತಾಯ; ಕಾರ್ಯಾಧ್ಯಕ್ಷರಾಗಿ ಸಂಜಯ್ ಝಾ ನೇಮಕ

ಎರಡು ರಾಜ್ಯಗಳಿಗೆ ವಿಶೇಷ ಸ್ಥಾನಮಾನದ ವಿಷಯವು ಕಳೆದ ಹಲವಾರು ವರ್ಷಗಳಿಂದ ಚರ್ಚೆಯಲ್ಲಿದೆ. ಆದರೆ, ಜೆಡಿಯು ಮತ್ತು ಟಿಡಿಪಿ ಎರಡೂ ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಪ್ರಮುಖ ಪಾಲುದಾರರಾದ ನಂತರ ರಾಜಕೀಯ ಮಹತ್ವವನ್ನು ಪಡೆದುಕೊಂಡಿದೆ.

ಜೆಡಿಯು ಅಧ್ಯಕ್ಷ ನಿತೀಶ್ ಕುಮಾರ್ ಬಿಹಾರದಲ್ಲಿ ಜೆಡಿಯು-ಬಿಜೆಪಿ ಮೈತ್ರಿ ಸರ್ಕಾರದ ನೇತೃತ್ವ ವಹಿಸಿದ್ದರೆ, ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಟಿಡಿಪಿ ಆಂಧ್ರಪ್ರದೇಶದಲ್ಲಿ ಅಧಿಕಾರಕ್ಕೆ ಬಂದಿದೆ.

ಬಿಹಾರವು ಹಿಂದುಳಿದ ರಾಜ್ಯವಾಗಿದೆ. ವಿಶೇಷ ಸ್ಥಾನಮಾನದಿಂದ ಹೆಚ್ಚಿನ ಪ್ರಯೋಜನವನ್ನು ಪಡೆಯುತ್ತದೆ. ವರ್ಧಿತ ಬಜೆಟ್ ಹಂಚಿಕೆಗಳು ಮತ್ತು ಕೇಂದ್ರ ನಿಧಿಗಳ ಉದಾರ ಹರಿವು ರಾಜ್ಯಕ್ಕೆ ಅಭಿವೃದ್ಧಿಯನ್ನು ವೇಗಗೊಳಿಸಲು ಬಳಸಬಹುದು. ಬಿಹಾರದಂತೆಯೇ, ವಿಶೇಷ ಸ್ಥಾನಮಾನದ ವಿಷಯವು 2013 ರಿಂದ ಆಂಧ್ರಪ್ರದೇಶದ ಜನರಲ್ಲಿ ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ.

ವಿಶೇಷ ವರ್ಗದ ಸ್ಥಾನಮಾನದ ವಿಚಾರದಲ್ಲಿ ಟಿಡಿಪಿ 2018 ರಲ್ಲಿ ಎನ್‌ಡಿಎ ಸರ್ಕಾರದಿಂದ ದೂರ ಸರಿದಿತ್ತು. ಎನ್‌ಡಿಎ ತೊರೆಯುವ ಮುನ್ನ ಪಕ್ಷವು ಲೋಕಸಭೆಯಲ್ಲಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿತ್ತು.

ವಿಶೇಷ ವರ್ಗದ ಸ್ಥಾನಮಾನದ ಅಡಿಯಲ್ಲಿ, ರಾಜ್ಯಗಳು ಆದ್ಯತೆಯ ಮೇರೆಗೆ ಹೆಚ್ಚಿನ ಅನುದಾನ ಪಡೆಯುತ್ತವೆ ಮತ್ತು ಕೇಂದ್ರ ಪ್ರಾಯೋಜಿತ ಯೋಜನೆಗಳ ಅಡಿಯಲ್ಲಿ ಶೇಕಡಾ 90 ರಷ್ಟು ಹಣವನ್ನು ಕೇಂದ್ರದಿಂದ ನೀಡಲಾಗುತ್ತದೆ. ರಾಜ್ಯಗಳು ಕೇವಲ ಶೇಕಡಾ 10 ರಷ್ಟು ಕೊಡುಗೆ ನೀಡಬೇಕಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com