ದಾಖಲಾದ ಒಂದು ವರ್ಷದೊಳಗೆ 20 ಅಗ್ನಿವೀರರ ಸಾವು: ದೇಶಾದ್ಯಂತ ಚರ್ಚೆಗೆ ಗ್ರಾಸ

ಅಗ್ನಿವೀರರ ಮೊದಲ ಬ್ಯಾಚ್ ಆಗಸ್ಟ್ 2023 ರಲ್ಲಿ ಸೇನೆಗೆ ಸೇರಿತು. ಸೇನೆಯಲ್ಲಿ ಸುಮಾರು 18 ಮಂದಿ ಸಾವುನ್ನಪ್ಪಿರುವುದನ್ನು ಮೂಲಗಳು ದೃಢಪಡಿಸಿವೆ, ಇತ್ತೀಚೆಗೆ ಐಎಎಫ್‌ನ ಅಗ್ನಿವೀರ್‌ನ ಆತ್ಮಹತ್ಯೆಗೆ ಶರಣಾಗಿದ್ದರು. ಐಎಎಫ್‌ಗೆ ಸಂಬಂಧಿಸಿದಂತೆ ಇದು ಮೊದಲನೆಯ ಪ್ರಕರಣವಾಗಿತ್ತು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಒಂದೆಡೆ ಅಗ್ನಿಪಥ್ ಯೋಜನೆಯು ವಿವಾದದಲ್ಲಿ ಮುಳುಗಿದೆ. ಮತ್ತೊಂದೆಡೆ ಕಳೆದ ಒಂದು ವರ್ಷದೊಳಗೆ ಸುಮಾರು 20 ಅಗ್ನಿವೀರರ ಸಾವುಗಳು ವರದಿಯಾಗಿದ್ದು ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ.

ಅಗ್ನಿವೀರರ ಮೊದಲ ಬ್ಯಾಚ್ ಆಗಸ್ಟ್ 2023 ರಲ್ಲಿ ಸೇನೆಗೆ ಸೇರಿತು. ಸೇನೆಯಲ್ಲಿ ಸುಮಾರು 18 ಮಂದಿ ಸಾವುನ್ನಪ್ಪಿರುವುದನ್ನು ಮೂಲಗಳು ದೃಢಪಡಿಸಿವೆ, ಇತ್ತೀಚೆಗೆ ಐಎಎಫ್‌ನ ಅಗ್ನಿವೀರ್‌ನ ಆತ್ಮಹತ್ಯೆಗೆ ಶರಣಾಗಿದ್ದರು. ಐಎಎಫ್‌ಗೆ ಸಂಬಂಧಿಸಿದಂತೆ ಇದು ಮೊದಲನೆಯ ಪ್ರಕರಣವಾಗಿತ್ತು. ಶ್ರೀಕಾಂತ್ ಕುಮಾರ್ ಚೌಧರಿ (22) ಅವರು ಮಂಗಳವಾರ ತಡರಾತ್ರಿ ಆಗ್ರಾದ ವಾಯುಪಡೆಯ ನಿಲ್ದಾಣದಲ್ಲಿ ಸೆಂಟ್ರಿ ಕರ್ತವ್ಯದಲ್ಲಿದ್ದಾಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಐಎಎಫ್ ಮೂಲಗಳು ದೃಢಪಡಿಸಿವೆ. ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯವರಾದ ಚೌಧರಿ ಅವರು 2022 ರಲ್ಲಿ ಭಾರತೀಯ ವಾಯುಸೇನೆಗೆ ಅಗ್ನಿವೀರ್ ಆಗಿ ಸೇರಿದ್ದರು. ಅವರ ಸಾವಿಗೆ ಕಾರಣವೇನು ಎಂಬುದನ್ನು ಖಚಿತಪಡಿಸಿಕೊಳ್ಳಲು ತನಿಖಾ ಮಂಡಳಿಯನ್ನು ರಚಿಸಲಾಗಿದೆ ಎಂದು ವರದಿಯಾಗಿದೆ.

ಕಾಕತಾಳೀಯವೆಂಬಂತೆ ಸೇನೆಯೊಳಗೆ ಅಗ್ನಿವೀರನೊಬ್ಬನ ಆತ್ಮಹತ್ಯೆ ವಿವಾದಕ್ಕೆ ಎಡೆಮಾಡಿಕೊಟ್ಟಿತ್ತು. ಮೊದಲು ವರದಿ ಮಾಡಿದಂತೆ, ಅಕ್ಟೋಬರ್ 11, 2023 ರಂದು, ಜಮ್ಮುವಿನಲ್ಲಿ ನಿಧನರಾದ ಅಗ್ನಿವೀರ್ ಅಮೃತಪಾಲ್ ಸಿಂಗ್ ಅವವರಿಗೆ ಮಿಲಿಟರಿ ಅಂತ್ಯಕ್ರಿಯೆ ನಡೆಸದ ಕಾರಣ ಟೀಕೆಗಳನ್ನು ಎದುರಿಸಬೇಕಾಯಿತು. ನಂತರ ಸ್ವಯಂ ಪ್ರೇರಿತ ಗಾಯದಿಂದ ಅವರು ಸಾವನ್ನಪ್ಪಿದ್ದಾರೆ ಎಂದು ಸೇನೆ ಸ್ಪಷ್ಟಪಡಿಸಿತು. ಆತ್ಮಹತ್ಯೆಯಿಂದ ಸಾವು ಸಂಭವಿಸಿದಾಗ ಗೌರವಧನ ನೀಡುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ
'ಅಗ್ನಿವೀರ'ರಿಗೆ ಕೇಂದ್ರ ಸಶಸ್ತ್ರ ಮೀಸಲು ಪಡೆ, ಅಸ್ಸಾಂ ರೈಫಲ್ಸ್ ನಲ್ಲಿ ಶೇ.10ರಷ್ಟು ಮೀಸಲಾತಿ: ಗೃಹ ಸಚಿವಾಲಯ

ನಂತರ, ಅಗ್ನಿವೀರ್ (ಆಪರೇಟರ್) ಗವಟೆ ಅಕ್ಷಯ್ ಲಕ್ಷ್ಮಣ್ ಅವರು ಅಕ್ಟೋಬರ್ 22, 2023 ರಂದು ಸಿಯಾಚಿನ್‌ನಲ್ಲಿ ಕರ್ತವ್ಯದಲ್ಲಿದ್ದಾಗ ನಿಧನರಾದರು. ಅದರ ನಂತರ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಎಕ್ಸ್‌ನಲ್ಲಿ ಪೋಸ್ಟ್‌ನಲ್ಲಿ ಲಕ್ಷ್ಮಣ್ ಅವರ ಕುಟುಂಬಕ್ಕೆ ಯಾವುದೇ ಗ್ರಾಚ್ಯುಟಿ, ಪಿಂಚಣಿ ಅಥವಾ ಇತರ ಪ್ರಯೋಜನಗಳನ್ನು ಪಡೆದಿಲ್ಲ ಎಂದು ಆರೋಪಿಸಿದ್ದರು. ಅಗ್ನಿವೀರ್ ಯೋಜನೆಯು ಯೋಧರಿಗೆ ಮಾಡಿದ ಅವಮಾನ ಎಂದು ಕಿಡಿ ಕಾರಿದ್ದರು.

ಇತ್ತೀಚಿನ ವಿವಾದವು ಅಗ್ನಿವೀರ್ ಅಜಯ್ ಸಿಂಗ್ ಅವರ ವೇತನ ಮತ್ತು ಅರ್ಹತೆಗಳಿಗೆ ಸಂಬಂಧಿಸಿದೆ. ಅಜಯ್ ಸಿಂಗ್ ಕುಟುಂಬಕ್ಕೆ ಪರಿಹಾರ ನೀಡುವ ಕುರಿತು ಗಾಂಧಿ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ನಡುವಿನ ವಾಕ್ಸಮರಕ್ಕೆ ಸಂಸತ್ತು ಸಾಕ್ಷಿಯಾಯಿತು. ಈ ವರ್ಷದ ಜನವರಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ರಾಜೌರಿ ಸೆಕ್ಟರ್‌ನಲ್ಲಿ ನೆಲಬಾಂಬ್ ಸ್ಫೋಟದಲ್ಲಿ ಅಗ್ನಿವೀರ್ ಸಾವನ್ನಪ್ಪಿದ್ದರು.

ಅಜಯ್ ಸಿಂಗ್ ಕುಟುಂಬಕ್ಕೆ ಯಾವುದೇ ಪರಿಹಾರ ನೀಡಿಲ್ಲ ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು. ಆದರೆ, ಆರೋಪ ಸುಳ್ಳು ಎಂದ ರಾಜನಾಥ್ ಸಿಂಗ್, ಕರ್ತವ್ಯದಲ್ಲಿದ್ದಾಗ ಸಾವನ್ನಪ್ಪುವ ಅಗ್ನಿವೀರರ ಕುಟುಂಬಗಳಿಗೆ ಸರ್ಕಾರ 1 ಕೋಟಿ ರೂಪಾಯಿ ಪರಿಹಾರವನ್ನು ನೀಡುತ್ತದೆ ಎಂದು ಹೇಳಿದರು.

ಸಾಂದರ್ಭಿಕ ಚಿತ್ರ
ಹುತಾತ್ಮ ಅಗ್ನಿವೀರ್ ಪರಿಹಾರ ವಿಚಾರವಾಗಿ ಸಂಸತ್ತಿನಲ್ಲಿ ರಾಜನಾಥ್ ಸುಳ್ಳು ಹೇಳಿಕೆ: ರಾಹುಲ್ ಆರೋಪ ನಿರಾಕರಿಸಿದ ಸೇನೆ

ಸೇನೆಯು ಕೂಡ ತನ್ನ ಎಕ್ಸ್ ಖಾತೆಯಲ್ಲಿ ಸ್ಪಷ್ಟನೆ ನೀಡಿತು. ಒಟ್ಟು ಮೊತ್ತದ ಸುಮಾರು 1.65 ಕೋಟಿ ರೂ.ಗಳಲ್ಲಿ ಒಟ್ಟು 98.39 ಲಕ್ಷ ರೂ.ಗಳನ್ನು ಈಗಾಗಲೇ ಕುಟುಂಬಕ್ಕೆ ಪಾವತಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ.

ಅಗ್ನಿವೀರ್ ಅಜಯ್ ಸಿಂಗ್ ಮಾಡಿದ ಅತ್ಯುನ್ನತ ತ್ಯಾಗಕ್ಕೆ ಭಾರತೀಯ ಸೇನೆಯು ವಂದನೆ ಸಲ್ಲಿಸುತ್ತದೆ ಎಂದು ಒತ್ತಿಹೇಳಿದೆ. ಸಕಲ ಸೇನಾ ಗೌರವಗಳೊಂದಿಗೆ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಬಾಕಿ ಇರುವ ಒಟ್ಟು ಮೊತ್ತದಲ್ಲಿ ಕುಟುಂಬ ಈಗಾಗಲೇ 98.39 ಲಕ್ಷ ರೂ. ಹಣವನ್ನು ಅಗ್ನಿವೀರ್ ಯೋಜನೆಯ ನಿಬಂಧನೆಗಳ ಪ್ರಕಾರ ಅನ್ವಯವಾಗುವಂತೆ 67 ಲಕ್ಷ ಮೊತ್ತದ ಎಕ್ಸ್ ಗ್ರೇಷಿಯಾ ಮತ್ತು ಇತರ ಪ್ರಯೋಜನಗಳನ್ನು ಪೊಲೀಸ್ ಪರಿಶೀಲನೆಯ ನಂತರ ಶೀಘ್ರದಲ್ಲೇ ಪಾವತಿಸಲಾಗುತ್ತದೆ ಎಂದು ತಿಳಿಸಿದೆ.

ಅಗ್ನಿವೀರ್ ಯೋಜನೆಯಡಿ, 17.5 ರಿಂದ 21 ವರ್ಷ ವಯಸ್ಸಿನ ಯುವಕರನ್ನು ನಾಲ್ಕು ವರ್ಷಗಳ ಅವಧಿಗೆ ಸೇರಿಸಲಾಗುತ್ತದೆ ಆದರೆ ನಿವೃತ್ತಿಯ ನಂತರ ಪಿಂಚಣಿ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಪಡೆಯುವುದಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com