ಅಕ್ರಮ ಹಣ ವರ್ಗಾವಣೆ ಪ್ರಕರಣ: ಬಾಲಿವುಡ್‌ ನಟಿ ಜಾಕ್ವೆಲಿನ್ ಫರ್ನಾಂಡಿಸ್‌'ಗೆ ಇಡಿ ಸಮನ್ಸ್ ಜಾರಿ

ಫರ್ನಾಂಡೀಸ್‌‍ಗೆ ಉಡುಗೊರೆಗಳನ್ನು ಖರೀದಿಸಲು ಚಂದ್ರಶೇಖರ್‌ ಈ ಅಪರಾಧದ ಆದಾಯ ಅಥವಾ ಅಕ್ರಮ ಹಣವನ್ನು ಬಳಸಿದ್ದಾರೆ ಎಂದು ಇಡಿ ಆರೋಪಿಸಿದೆ.
ನಟಿ ಜಾಕ್ವೆಲಿನ್ ಫೆರ್ನಾಂಡಿಸ್
ನಟಿ ಜಾಕ್ವೆಲಿನ್ ಫೆರ್ನಾಂಡಿಸ್

ನವದೆಹಲಿ: ಸುಕೇಶ್ ಚಂದ್ರಶೇಖರ್ ಅವರ ಸುಮಾರು 200 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ)ವು ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್‌ ಅವರಿಗೆ ಸಮನ್ಸ್ ಜಾರಿ ಮಾಡಿದ್ದು, ಬುಧವಾರ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ.

ಫೋರ್ಟಿಸ್‌‍ ಹೆಲ್ತ್‌ಕೇರ್‌ನ ಮಾಜಿ ಪ್ರವರ್ತಕ ಶಿವಿಂದರ್‌ ಮೋಹನ್‌ ಸಿಂಗ್‌ ಅವರ ಪತ್ನಿ ಅದಿತಿ ಸಿಂಗ್‌ ಸೇರಿದಂತೆ ಉನ್ನತ ವ್ಯಕ್ತಿಗಳಿಗೆ ಸುಮಾರು 200 ಕೋಟಿ ರೂ.ಗಳ ವಂಚನೆ ಮಾಡಿದ ಆರೋಪಕ್ಕೆ ಸಂಬಂಧಿಸಿದ ಈ ಪ್ರಕರಣದಲ್ಲಿ 38 ವರ್ಷದ ಶ್ರೀಲಂಕಾ ಮೂಲದ ಬಾಲಿವುಡ್‌ ನಟಿಯನ್ನು ಇಡಿ ಈ ಹಿಂದೆ ಪ್ರಶ್ನಿಸಿತ್ತು.

ನಟಿ ಜಾಕ್ವೆಲಿನ್ ಫೆರ್ನಾಂಡಿಸ್
ಮಹಿಳಾ ದಿನಾಚರಣೆ: ಜಾಕ್ವೆಲಿನ್ ಫರ್ನಾಂಡಿಸ್‌ಗೆ ಜೈಲಿನಿಂದಲೇ ಸಂದೇಶ ಕಳುಹಿಸಿದ ಸುಕೇಶ್ ಚಂದ್ರಶೇಖರ್

ಫರ್ನಾಂಡೀಸ್‌‍ಗೆ ಉಡುಗೊರೆಗಳನ್ನು ಖರೀದಿಸಲು ಚಂದ್ರಶೇಖರ್‌ ಈ ಅಪರಾಧದ ಆದಾಯ ಅಥವಾ ಅಕ್ರಮ ಹಣವನ್ನು ಬಳಸಿದ್ದಾರೆ ಎಂದು ಇಡಿ ಆರೋಪಿಸಿದೆ. 2022 ರಲ್ಲಿ ಸಲ್ಲಿಸಿದ ಚಾರ್ಜ್‌ ಶೀಟ್‌ನಲ್ಲಿ ನಟ ಚಂದ್ರಶೇಖರ್‌ ಅವರು ನಾನು ನೀಡಿದ್ದ ಬೆಲೆಬಾಳುವ ವಸ್ತುಗಳು, ಆಭರಣಗಳು ಮತ್ತು ಬೆಲೆಬಾಳುವ ಉಡುಗೊರೆಗಳನ್ನು ಫರ್ನಾಂಡಿಸ್‌‍ ಆನಂದಿಸುತ್ತಿದ್ದಾರೆ ಎಂದು ಹೇಳಿದ್ದರು.

ಈ ಹಿಂದೆ ಈ ಪ್ರಕರಣದಲ್ಲಿ ಫರ್ನಾಂಡಿಸ್‌‍ ಅವರನ್ನು ಇಡಿ ಕನಿಷ್ಠ ಐದು ಬಾರಿ ಪ್ರಶ್ನಿಸಿತ್ತು. ನಟಿ ಯಾವಾಗಲೂ ತಾನು ನಿರಪರಾಧಿ ಮತ್ತು ಚಂದ್ರಶೇಖರ್‌ ಅವರ ಅಪರಾಧ ಚಟುವಟಿಕೆಗಳ ಬಗ್ಗೆ ತಿಳಿದಿಲ್ಲ ಎಂದು ಹೇಳಿಕೊಂಡು ಬರುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com