
ಕೋಲ್ಕತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಶುಕ್ರವಾರ ಮುಂಬೈನಲ್ಲಿ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಮತ್ತು ಎನ್ ಸಿಪಿ ನಾಯಕ ಶರದ್ ಪವಾರ್ ಅವರನ್ನು ಭೇಟಿಯಾಗಿ ದೇಶದ ಪ್ರಸ್ತುತ ರಾಜಕೀಯ ಪರಿಸ್ಥಿತಿಯ ಬಗ್ಗೆ ಚರ್ಚಿಸುವುದಾಗಿ ಹೇಳಿದ್ದಾರೆ.
ಮುಕೇಶ್ ಅಂಬಾನಿ ಪುತ್ರನ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ಮುಂಬೈಗೆ ತೆರಳುವ ಮುನ್ನ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಬ್ಯಾನರ್ಜಿ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರನ್ನೂ ಭೇಟಿಯಾಗುವುದಾಗಿ ಹೇಳಿದರು.
"ಮುಖೇಶ್ ಅಂಬಾನಿ ಅವರ ಪುತ್ರನ ಮದುವೆಗಾಗಿ ನಾನು ಮುಂಬೈಗೆ ಹೋಗುತ್ತಿದ್ದೇನೆ. ಅವರು ಅನೇಕ ಬಾರಿ ಆಹ್ವಾನ ನೀಡಿದ್ದಾರೆ. ಮುಖೇಶ್ ಜಿ, ಅವರ ಮಗ ಮತ್ತು ನೀತಾ ಜಿ ಅವರು ನನ್ನನ್ನು ಬರಲು ಪದೇ ಪದೇ ಕೇಳಿದ್ದರಿಂದ. ನಾನು ಹೋಗಲು ನಿರ್ಧರಿಸಿದೆ" ಎಂದು ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.
ಇದೇ ವೇಳೆ ಮುಂಬೈನಲ್ಲಿ ಅವರ ರಾಜಕೀಯ ಕಾರ್ಯಕ್ರಮಗಳ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ದೀದಿ, ನಾಳೆ ಉದ್ಧವ್ ಠಾಕ್ರೆ ಅವರನ್ನು "ರಾಜಕೀಯ ಮಾತುಕತೆ" ಗಾಗಿ ಭೇಟಿಯಾಗುವುದಾಗಿ ಹೇಳಿದರು.
"ನಾನೂ ಶರದ್ ಜಿ ಅವರ ಮನೆಗೆ ಹೋಗುತ್ತೇನೆ ಮತ್ತು ಅವರನ್ನು ಭೇಟಿ ಮಾಡಲು ಅಪಾಯಿಂಟ್ಮೆಂಟ್ ಪಡೆದಿದ್ದೇನೆ. ಅಖಿಲೇಶ್ ಕೂಡ ನಾಳೆ ಬರುತ್ತಿದ್ದಾರೆ ಮತ್ತು ನಾನು ಅವರನ್ನು ಭೇಟಿ ಮಾಡಬಹುದು. ಮರುದಿನ ಹಿಂತಿರುಗುತ್ತೇನೆ" ಎಂದು ಪಶ್ಚಿಮ ಬಂಗಾಳ ಸಿಎಂ ತಿಳಿಸಿದ್ದಾರೆ.
Advertisement