
ಮುಂಬೈ: ಕಳೆದ ತಿಂಗಳು ನಟ ಸಲ್ಮಾನ್ ಖಾನ್ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಹಾಗೂ ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಜೊತೆಗಿನ ಸಂಪರ್ಕವಿದೆ ಎಂದು ಹೇಳಿ ಬಂಧನಕ್ಕೊಳಗಾಗಿದ್ದ ಯೂಟ್ಯೂಬರ್‌ಗೆ ಮುಂಬೈ ನ್ಯಾಯಾಲಯ ಸೋಮವಾರ ಜಾಮೀನು ನೀಡಿದೆ. ರಾಜಸ್ಥಾನ ಮೂಲದ ಬನ್ವಾರಿಲಾಲ್ ಗುಜ್ಜರ್ ವಿರುದ್ಧ ಕ್ರಿಮಿನಲ್ ಉದ್ದೇಶ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ಡೆ ಉಲ್ಲಂಘನೆಯ ಆರೋಪ ಹೊರಿಸಲಾಗಿತ್ತು.
ಗುಜ್ಜರ್ ತನ್ನ ಯುಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದ ವೀಡಿಯೊದಲ್ಲಿ ಸಲ್ಮಾನ್ ಖಾನ್ ಕೊಲ್ಲುವ ಬಗ್ಗೆ ಮತ್ತು ಲಾರೆನ್ಸ್ ಬಿಷ್ಣೋಯ್, ಗೋಲ್ಡ್ ಬ್ರಾರ್ ಮತ್ತು ಇತರ ದರೋಡೆಕೋರರೊಂದಿಗೆ ಸಂಪರ್ಕವಿದೆ ಎಂದು ಹೇಳಿದ್ದ. ಆದರೆ ಆತ ತನ್ನ ಆನ್‌ಲೈನ್ ಚಾನೆಲ್‌ನ ವೀಕ್ಷಕರನ್ನು ಹೆಚ್ಚಿಸಲು ವೀಡಿಯೊ ಅಪ್‌ಲೋಡ್ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ವಿಆರ್ ಪಾಟೀಲ್ ಸೋಮವಾರ ಯು ಟ್ಯೂಬರ್ ಜಾಮೀನು ಅರ್ಜಿಯನ್ನು ಅಂಗೀಕರಿಸಿದರು. ಮನೋರಂಜನೆಗಾಗಿ ಮತ್ತು ಹೆಚ್ಚು ಖ್ಯಾತಿ ಗಳಿಸಲು ತನ್ನ ಆನ್ ಲೈನ್ ಚಾನೆಲ್ ನಲ್ಲಿ ವಿಡಿಯೋ ಅಪ್ ಲೋಡ್ ಮಾಡಿದ್ದು, ಯಾವುದೇ ಸಾಕ್ಷ್ಯವಿಲ್ಲದೆ ತಪ್ಪಾಗಿ ಪ್ರಕರಣದಲ್ಲಿ ಸೇರಿಸಲಾಗಿದೆ ಎಂದು ಯು ಟ್ಯೂಬರ್ ಜಾಮೀನು ಅರ್ಜಿಯಲ್ಲಿ ಉಲ್ಲೇಖಿಸಿದ್ದರು.
Advertisement