ಮಾಧ್ಯಮಗಳ ಮುಂದೆ ಕೈ ಮುಗಿದು 'ಸಾರಿ' ಎಂದ ನೀತಾ ಅಂಬಾನಿ: ಕಾರಣವೇನು..?
ಕಳೆದ ಕೆಲ ತಿಂಗಳುಗಳಿಂದ ಸದ್ದು ಮಾಡುತ್ತಿದ್ದ ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆ ನಿರ್ವಿಘ್ನವಾಗಿ ನೆರವೇರಿದೆ.
ಕಳೆದೆರಡು ತಿಂಗಳುಗಳಿಂದ ಈ ಜೋಡಿಯ ನಿಶ್ಚಿತಾರ್ಥ, ಪ್ರೀ ವೆಡ್ಡಿಂಗ್ ಮತ್ತು ವಿವಾಹದ ಸಮಾರಂಭಗಳು ಇಡೀ ಪ್ರಪಂಚದಾದ್ಯಂತ ಸದ್ದು ಮಾಡಿವೆ. ದೇಶ-ವಿದೇಶಗಳ ಗಣ್ಯಾತಿಗಣ್ಯರು ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಈ ಮದುವೆಗೆ ಸಂಬಂಧಿಸಿದ ವಿಡಿಯೋಗಳು ಒಂದೊಂದೇ ವೈರಲ್ ಆಗುತ್ತಿವೆ.
ಇದರ ಬೆನ್ನಲ್ಲೇ ನೀತಾ ಅಂಬಾನಿ ಮಾಧ್ಯಮಕ್ಕೆ ಕ್ಷಮೆಯಾಚಿಸಿದ್ದಾರೆ. ಮದುವೆ ಬಂದು ಹಾರೈಸಿದಕ್ಕೆ, ತುಂಬಾ ತಾಳ್ಮೆಯಿಂದ ಕಾರ್ಯಕ್ರಮಕ್ಕೆ ಹಾಜರಿ ಹಾಕಿರುವುದಕ್ಕೆ ಧನ್ಯವಾದ ಎಂದು ಹೇಳಿದ್ದಾರೆ.
ಈ ಮದುವೆ ಸಂದರ್ಭದಲ್ಲಿ ಏನಾದರೂ, ಯಾರಿಗಾದರೂ ಕಷ್ಟ ಆಗಿದ್ದರೆ ಕ್ಷಮೆ ಕೋರುತ್ತೇನೆ. ಇದು ಮದುವೆ ಮನೆ, ಏನಾದರೂ ತೊಂದರೆ ಆಗಿರಬಹುದು. ಹೀಗೆ ಏನಾದರೂ ಆಗಿದ್ದರೆ ಕ್ಷಮಿಸಿಬಿಡಿ. ಈಗಾಗಲೇ ನೀವು ಮದುವೆಗೆ ಬಂದು ಕಳೆ ಹೆಚ್ಚಿಸಿದ್ದೀರಿ ಎಂದು ತಿಳಿಸಿದ್ದಾರೆ.
ವಿವಾಹೋತ್ತರ ಕಾರ್ಯಕ್ರಮಗಳು ಇನ್ನೂ ಜಾರಿಯಲ್ಲಿದೆ. ಅವುಗಳಿಗೂ ನೀವು ಬಂದು ಶುಭಹಾರೈಸಬೇಕು ಎಂದು ಹೇಳಿದ್ದಾರೆ.
ಹಲವು ವರ್ಷಗಳ ಪ್ರೀತಿಗೆ ಅನಂತ್ ಮತ್ತು ರಾಧಿಕಾ ಜು.12ರಂದು ಮದುವೆಯ ಮುದ್ರೆ ಒತ್ತಿದ್ದಾರೆ. ಈ ವಿವಾಹದಲ್ಲಿ ಯಶ್ ದಂಪತಿ, ರಶ್ಮಿಕಾ ಮಂದಣ್ಣ, ದೀಪಿಕಾ ಪಡುಕೋಣೆ ದಂಪತಿ, ರಜನಿಕಾಂತ್, ಬಿಗ್ ಬಿ ಫ್ಯಾಮಿಲಿ, ಶಾರುಖ್ ಖಾನ್, ಸಲ್ಮಾನ್ ಖಾನ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ