
ಮುಂಬೈ: ಮುಂಬೈ ಮೊದಲನೇ ಮೆಟ್ರೋ ಸುರಂಗ ಮಾರ್ಗ ಜುಲೈ 24 ರಿಂದ ಆರಂಭವಾಗಲಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಬುಧವಾರ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಈ ಕುರಿತು ಅವರು ಮಾಹಿತಿ ಹಂಚಿಕೊಂಡಿದ್ದು, ಮುಂಬೈ ಮೆಟ್ರೋ ಮಾರ್ಗ 3ರಲ್ಲಿನ 33.5 ಕಿ.ಮೀ ಸುರಂಗ ಮಾರ್ಗ ದಕ್ಷಿಣ ಮುಂಬೈಯನ್ನು ನಗರದ ಪಶ್ಚಿಮ ಉಪನಗರಗಳನ್ನು ಸಂಪರ್ಕಿಸುತ್ತದೆ. ಇದು ಸ್ಥಳೀಯ ಉಪನಗರ ರೈಲುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲಿದೆ ಎಂದು ನಿರೀಕ್ಷಿಸಲಾಗಿದೆ ಅವರು ತಿಳಿಸಿದ್ದಾರೆ.
ಮುಂಬೈನ ಮೊದಲ ಸುರಂಗ ಮಾರ್ಗ ಜುಲೈ 24 ರಿಂದ ಆರಂಭವಾಗುತ್ತಿದೆ. ಇದು ನಗರದ ವೇಗಕ್ಕೆ ಹೊಸ ಚೈತನ್ಯವನ್ನು ನೀಡುತ್ತದೆ ಎಂದು ತಾವ್ಡೆ ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಕಳೆದ ತಿಂಗಳು, ರಿಸರ್ಚ್ ಡಿಸೈನ್ಸ್ ಅಂಡ್ ಸ್ಟ್ಯಾಂಡರ್ಡ್ಸ್ ಆರ್ಗನೈಸೇಶನ್ (RDSO) ಪ್ರಾಯೋಗಿಕ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿತ್ತು. ಮುಂಬೈ ನಿವಾಸಿಗಳ ಜೀವನ ಸುಲಭಗೊಳಿಸಿಲು ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಭರವಸೆಯನ್ನು ಮೆಟ್ರೋ ಮಾರ್ಗ 3ರ ಮೂಲಕ ಈಡೇರಿಸಲಾಗುವುದು ಎಂದು ತಾವ್ಡೆ ತಮ್ಮ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಮೆಟ್ರೋ ಮಾರ್ಗ 3 ಯೋಜನೆಗೆ ಜಪಾನ್ ಅಂತಾರಾಷ್ಟ್ರೀಯ ಸಹಕಾರ ಏಜೆನ್ಸಿ ಆರ್ಥಿಕ ನೆರವು ನೀಡಿದ್ದು, ಕೇಂದ್ರ ಸರ್ಕಾರ ಫೆಬ್ರವರಿಯಲ್ಲಿ ರೂ. 37, 276 ಕೋಟಿ ಹಣವನ್ನು ಮಂಜೂರು ಮಾಡಿತ್ತು.
Advertisement