'ವಿರೋಧ ಪಕ್ಷಗಳ ವಿರೋಧಿ, ಸರ್ಕಾರದ ಕುರ್ಚಿ ಉಳಿಸುವ ಬಜೆಟ್': ಸಂಸತ್ತು ಹೊರಗೆ INDIA ಬ್ಲಾಕ್ ನಾಯಕರ ಪ್ರತಿಭಟನೆ

‘ನಮಗೆ ಇಡೀ ದೇಶಕ್ಕೆ ಸಂಬಂಧಪಟ್ಟ ಬಜೆಟ್‌ ಬೇಕು, ಎನ್‌ಡಿಎ ಬಜೆಟ್‌ ಅಲ್ಲ’, ‘ಬಜೆಟ್‌ನಲ್ಲಿ ಭಾರತಕ್ಕೆ ಎನ್‌ಡಿಎ ದ್ರೋಹ ಮಾಡಿದೆ ಎಂಬ ಫಲಕಗಳನ್ನು ಹಿಡಿದು ಪ್ರತಿಭಟನೆ ನಡೆಸಿದ ಸಂಸದರಿಂದ ‘ವಿರೋಧ ಪಕ್ಷಗಳ ವಿರೋಧಿ ಬಜೆಟ್, ಕುರ್ಚಿ ಬಚಾವೋ.. ಬಜೆಟ್ ಮುರ್ದಾ ಬಾದ್’ ಎಂಬ ಘೋಷಣೆಗಳನ್ನು ಕೂಗಿದರು.
ಸಂಸತ್ತಿನ ಹೊರಗೆ ಇಂಡಿಯಾ ಬ್ಲಾಕ್ ಸಂಸದರ ಪ್ರತಿಭಟನೆ
ಸಂಸತ್ತಿನ ಹೊರಗೆ ಇಂಡಿಯಾ ಬ್ಲಾಕ್ ಸಂಸದರ ಪ್ರತಿಭಟನೆ
Updated on

ನವದೆಹಲಿ: ವಿರೋಧ ಪಕ್ಷಗಳ ಆಡಳಿತದಲ್ಲಿರುವ ರಾಜ್ಯಗಳ ವಿರುದ್ಧ ಕೇಂದ್ರ ಸರ್ಕಾರ ಬಜೆಟ್ ನಲ್ಲಿ ತಾರತಮ್ಯ ನೀತಿಯನ್ನು ತೋರಿಸಿದೆ ಎಂದು ಆರೋಪಿಸಿ ಇಂಡಿಯಾ ಮೈತ್ರಿಕೂಟ ಬಣದ ನಾಯಕರು ಇಂದು ಬುಧವಾರ ಸಂಸತ್ತಿನ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಇತರ ಇಂಡಿಯಾ ಬ್ಲಾಕ್ ಸಂಸದರು ಸೇರಿದಂತೆ ವಿರೋಧ ಪಕ್ಷದ ನಾಯಕರು ಸಂಸತ್ತಿನ ಹೊರಗೆ ಪ್ರತಿಭಟಿಸಿದರು, ಕೇಂದ್ರ ಸರ್ಕಾರ ಫೆಡರಲ್ ವ್ಯವಸ್ಥೆಯಲ್ಲಿ ಎಲ್ಲಾ ರಾಜ್ಯಗಳಿಗೆ ಸಮಾನವಾಗಿ ಪರಿಗಣಿಸಬೇಕೆಂದು ಒತ್ತಾಯಿಸಿದರು.

‘ನಮಗೆ ಇಡೀ ದೇಶಕ್ಕೆ ಸಂಬಂಧಪಟ್ಟ ಬಜೆಟ್‌ ಬೇಕು, ಎನ್‌ಡಿಎ ಬಜೆಟ್‌ ಅಲ್ಲ’, ‘ಬಜೆಟ್‌ನಲ್ಲಿ ಭಾರತಕ್ಕೆ ಎನ್‌ಡಿಎ ದ್ರೋಹ ಮಾಡಿದೆ ಎಂಬ ಫಲಕಗಳನ್ನು ಹಿಡಿದು ಪ್ರತಿಭಟನೆ ನಡೆಸಿದ ಸಂಸದರಿಂದ ‘ವಿರೋಧ ಪಕ್ಷಗಳ ವಿರೋಧಿ ಬಜೆಟ್, ಕುರ್ಚಿ ಬಚಾವೋ...ಬಜೆಟ್ ಮುರ್ದಾ ಬಾದ್’ ಎಂಬ ಘೋಷಣೆಗಳನ್ನು ಕೂಗಿದರು.

"ಹಲವರಿಗೆ ಈ ಬಾರಿಯ ಕೇಂದ್ರ ಬಜೆಟ್ ನಲ್ಲಿ ನ್ಯಾಯ ಸಿಕ್ಕಿಲ್ಲ. ನಾವು ನ್ಯಾಯಕ್ಕಾಗಿ ಹೋರಾಡುತ್ತಿದ್ದೇವೆ. ಈ ಬಜೆಟ್ ಕೇವಲ ತಮ್ಮ ಮಿತ್ರರನ್ನು ತೃಪ್ತಿಪಡಿಸಲು ಮಾಡಿದ್ದೇ ಹೊರತು ಯಾರಿಗೂ ಏನೂ ಪ್ರಯೋಜನವಾಗಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಮತ್ತು ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು. ರಾಜ್ಯಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಬಜೆಟ್ ಮಂಡನೆಗೆ ವಿರೋಧ ವ್ಯಕ್ತಪಡಿಸಿದರು.

ಸಂಸತ್ತಿನ ಹೊರಗೆ ಇಂಡಿಯಾ ಬ್ಲಾಕ್ ಸಂಸದರ ಪ್ರತಿಭಟನೆ
ಕೇಂದ್ರ ಬಜೆಟ್ ಎಫೆಕ್ಟ್: ಜುಲೈ 27ರ ನೀತಿ ಆಯೋಗ ಸಭೆ ಬಹಿಷ್ಕರಿಸಲು ವಿರೋಧ ಪಕ್ಷಗಳ ಮುಖ್ಯಮಂತ್ರಿಗಳು ನಿರ್ಧಾರ!

ಈ ಬಜೆಟ್ ಜನವಿರೋಧಿಯಾಗಿದೆ, ಯಾರಿಗೂ ನ್ಯಾಯ ಸಿಕ್ಕಿಲ್ಲ, ವಿಶೇಷ ಪ್ಯಾಕೇಜ್ ಬಗ್ಗೆ ಮಾತನಾಡಿದ್ದಾರೆ ಆದರೆ ವಿಶೇಷ ಸ್ಥಾನಮಾನ ನೀಡಿಲ್ಲ, ಇದು ವಂಚನೆಯ ಬಜೆಟ್ ಮತ್ತು ಜನರಿಗೆ ಅನ್ಯಾಯ ಎಂದು ಖರ್ಗೆ ಆರೋಪಿಸಿದರು.

ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಕೂಡ ಬಜೆಟ್‌ ವಿರೋಧಿಸಿದ್ದಾರೆ. ಹಣದುಬ್ಬರವನ್ನು ಕಡಿಮೆ ಮಾಡಲು ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಯುವಜನತೆಯ ಉದ್ಯೋಗವನ್ನು ಕಿತ್ತುಕೊಂಡು ಈಗ ಇಂಟರ್ನ್‌ಶಿಪ್ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದರು.

ರೈತರಿಗೆ ಕನಿಷ್ಠ ಬೆಂಬಲ ಬೆಲೆ ಸಿಗಬೇಕು ಎಂದು ನಾವೆಲ್ಲರೂ ಒತ್ತಾಯಿಸುತ್ತಿದ್ದೆವು, ಆದರೆ ರೈತರಿಗಿಂತ ತಮ್ಮ ಸರ್ಕಾರವನ್ನು ಉಳಿಸುವ ಮೈತ್ರಿ ಪಾಲುದಾರರಿಗೆ ಬೆಂಬಲ ಬೆಲೆ ನೀಡಲಾಗುತ್ತದೆ. ಸರ್ಕಾರವು ಹಣದುಬ್ಬರದ ಬಗ್ಗೆ ಯಾವುದೇ ತಳಮಟ್ಟದ ಕ್ರಮಗಳನ್ನು ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ಉತ್ತರ ಪ್ರದೇಶಕ್ಕೆ ಏನೂ ಸಿಗಲಿಲ್ಲ. ಡಬಲ್ ಇಂಜಿನ್ ಸರ್ಕಾರದಿಂದ ಯುಪಿಗೆ ದುಪ್ಪಟ್ಟು ಲಾಭವಾಗಬೇಕಿತ್ತು, ಅದರ ಫಲಿತಾಂಶವು ಬಜೆಟ್‌ನಲ್ಲಿ ಗೋಚರಿಸುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಪ್ರತಿಭಟನೆಗೂ ಮುನ್ನ ಅಖಿಲೇಶ್ ಸುದ್ದಿಗಾರರಿಗೆ ಹೇಳಿದರು.

ಬಜೆಟ್‌ನಲ್ಲಿ ವಿರೋಧ ಪಕ್ಷದ ಆಡಳಿತವಿರುವ ರಾಜ್ಯಗಳನ್ನು ಕಡೆಗಣಿಸಲಾಗಿದೆ. 2024 ರ ಕೇಂದ್ರ ಬಜೆಟ್ ಅನ್ನು "ಪಿಎಂ ಮಹಾರಾಷ್ಟ್ರ ವಿರೋಧಿ ಯೋಜನೆ" ಎಂದು ಕರೆದಿದ್ದಾರೆ ಎಂದು ಶಿವಸೇನಾ (ಯುಬಿಟಿ) ನಾಯಕಿ ಪ್ರಿಯಾಂಕಾ ಚತುರ್ವೇದಿ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com