ಸೈಬರ್ ಕ್ರೈಮ್ ತಡೆಗೆ ಪ್ರಯತ್ನ: 5.8 ಲಕ್ಷ ಸಿಮ್ ಕಾರ್ಡ್, 1,08,000 IMEIs ನಿರ್ಬಂಧ- ಕೇಂದ್ರ ಸರ್ಕಾರ

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೊಲೀಸ್ ತನಿಖಾಧಿಕಾರಿಗಳಿಗೆ ಆರಂಭಿಕ ಹಂತದ ಸೈಬರ್ ಫೋರೆನ್ಸಿಕ್ ಸಹಾಯವನ್ನು ಒದಗಿಸುವ ಗುರಿಯೊಂದಿಗೆ ಕೇಂದ್ರವು ನವದೆಹಲಿಯಲ್ಲಿ ಅತ್ಯಾಧುನಿಕ 'ರಾಷ್ಟ್ರೀಯ ಸೈಬರ್ ಫೋರೆನ್ಸಿಕ್ ಪ್ರಯೋಗಾಲಯ ಸ್ಥಾಪಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ಭಯೋತ್ಪಾದನೆ-ವಿರೋಧಿ ಮತ್ತು ಹಣಕಾಸು ನಿಗ್ರಹ ಕ್ರಮಗಳ ಭಾಗವಾಗಿ ಕೇಂದ್ರ ಗೃಹ ಸಚಿವಾಲಯ 2014 ರಿಂದ 5.8 ಲಕ್ಷ ಸಿಮ್ ಕಾರ್ಡ್‌ಗಳು ಮತ್ತು 1,08,000 ಮೊಬೈಲ್ ಹ್ಯಾಂಡ್‌ಸೆಟ್‌ಗಳ IMEI ಗಳನ್ನು ನಿರ್ಬಂಧಿಸಿದೆ ಎಂದು ಗೃಹ ಸಚಿವಾಲಯದ ರಾಜ್ಯ ಸಚಿವ ಬಂಡಿ ಸಂಜಯ್ ಕುಮಾರ್ ರಾಜ್ಯಸಭೆಯಲ್ಲಿ ಹೇಳಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು, ಪೊಲೀಸರ ವರದಿಯಂತೆ ಇಲ್ಲಿಯವರೆಗೆ, 5.8 ಲಕ್ಷಕ್ಕೂ ಹೆಚ್ಚು ಸಿಮ್ ಕಾರ್ಡ್‌ಗಳು ಮತ್ತು 1,08,000 IMEI ಗಳನ್ನು ಭಾರತ ಸರ್ಕಾರ ನಿರ್ಬಂಧಿಸಿದೆ ಎಂದು ಹೇಳಿದರು.

ಭಾರತದ ಸಂವಿಧಾನದ ಏಳನೇ ಶೆಡ್ಯೂಲ್ ಪ್ರಕಾರ ಪೊಲೀಸ್ ಮತ್ತು ಸಾರ್ವಜನಿಕ ಸುವ್ಯವಸ್ಥೆ ರಾಜ್ಯದ ವಿಷಯಗಳಾಗಿದ್ದರೂ ಸಹ, ಕಾನೂನು ಜಾರಿ ಏಜೆನ್ಸಿಗಳ ಸಾಮರ್ಥ್ಯ ವೃದ್ಧಿಗಾಗಿ ವಿವಿಧ ಯೋಜನೆಗಳ ಅಡಿಯಲ್ಲಿ ಹಣಕಾಸು ನೆರವು ಮತ್ತು ಸಲಹೆಗಳ ಮೂಲಕ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಕ್ರಮಗಳಿಗೆ ಕೇಂದ್ರವು ಪೂರಕವಾಗಿದೆ. ತಮ್ಮ ಕಾನೂನು ಜಾರಿ ಸಂಸ್ಥೆಗಳ ಮೂಲಕ ಸೈಬರ್ ಅಪರಾಧ ಸೇರಿದಂತೆ ಅಪರಾಧಗಳ ತಡೆಗಟ್ಟುವಿಕೆ, ಪತ್ತೆ, ತನಿಖೆ ಮತ್ತು ಕಾನೂನು ಕ್ರಮಕ್ಕೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಪ್ರಾಥಮಿಕವಾಗಿ ಜವಾಬ್ದಾರರಾಗಿರುತ್ತಾರೆ ಎಂದು ಕುಮಾರ್ ಹೇಳಿದರು.

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೊಲೀಸ್ ತನಿಖಾಧಿಕಾರಿಗಳಿಗೆ ಆರಂಭಿಕ ಹಂತದ ಸೈಬರ್ ಫೋರೆನ್ಸಿಕ್ ಸಹಾಯವನ್ನು ಒದಗಿಸುವ ಗುರಿಯೊಂದಿಗೆ ಕೇಂದ್ರವು ನವದೆಹಲಿಯಲ್ಲಿ ಅತ್ಯಾಧುನಿಕ 'ರಾಷ್ಟ್ರೀಯ ಸೈಬರ್ ಫೋರೆನ್ಸಿಕ್ ಪ್ರಯೋಗಾಲಯ ಸ್ಥಾಪಿಸಿದೆ. ಇಲ್ಲಿಯವರೆಗೂ ಇದು ಮೊಬೈಲ್ ಫೋರೆನ್ಸಿಕ್ಸ್, ಮೆಮೊರಿ ಫೋರೆನ್ಸಿಕ್ಸ್ ಮತ್ತು ಸಿಡಿಆರ್ ವಿಶ್ಲೇಷಣೆ ಸೇರಿದಂತೆ ಸುಮಾರು 10,200 ಸೈಬರ್ ಫೋರೆನ್ಸಿಕ್ಸ್ ಪ್ರಕರಣಗಳಲ್ಲಿ ಸೈಬರ್-ಅಪರಾಧಗಳಿಗೆ ಸಂಬಂಧಿಸಿದ ಪ್ರಕರಣಗಳ ತನಿಖೆಯಲ್ಲಿ ಸಹಾಯ ಮಾಡಲು ರಾಜ್ಯಗಳಿಗೆ ಸೇವೆ ಒದಗಿಸಿದೆ ಎಂದು ತಿಳಿಸಿದರು.

ಸಾಂದರ್ಭಿಕ ಚಿತ್ರ
ಬೆಂಗಳೂರು ನಗರದಲ್ಲಿ ಶೇ. 25ರಷ್ಟು ಸೈಬರ್ ಅಪರಾಧ: ಅಲೋಕ್ ಮೋಹನ್

ಹಣಕಾಸು ವಂಚನೆಗಳ ತಕ್ಷಣದ ವರದಿಗಾಗಿ ಮತ್ತು ವಂಚಕರು ಹಣವನ್ನು ಕಿತ್ತುಕೊಳ್ಳುವುದನ್ನು ತಡೆಯಲು ಸರ್ಕಾರವು I4C ಅಡಿಯಲ್ಲಿ ‘ನಾಗರಿಕ ಹಣಕಾಸು ಸೈಬರ್ ವಂಚನೆ ವರದಿ ಮತ್ತು ನಿರ್ವಹಣಾ ವ್ಯವಸ್ಥೆ’ಯನ್ನು ಪ್ರಾರಂಭಿಸಿದೆ ಎಂದು

ಇದುವರೆಗೆ 7.6 ಲಕ್ಷಕ್ಕೂ ಹೆಚ್ಚು ದೂರುಗಳಲ್ಲಿ ರೂ. 2,400 ಕೋಟಿಗೂ ಹೆಚ್ಚು ಹಣವನ್ನು ರಕ್ಷಿಸಲಾಗಿದೆ. ಆನ್‌ಲೈನ್ ಸೈಬರ್ ದೂರುಗಳನ್ನು ಸಲ್ಲಿಸಲು ಸಹಾಯ ಪಡೆಯಲು ಟೋಲ್-ಫ್ರೀ ಸಹಾಯವಾಣಿ ಸಂಖ್ಯೆ '1930' ಅನ್ನು ಸಹ ಕಾರ್ಯಗತಗೊಳಿಸಲಾಗಿದೆ ಎಂದು ಸಚಿವರು ಸದನಕ್ಕೆ ಮಾಹಿತಿ ನೀಡಿದರು.

ಸಾಂದರ್ಭಿಕ ಚಿತ್ರ
ಸೈಬರ್ ಅಪರಾಧ ನಿಯಂತ್ರಣದತ್ತ ಕೇಂದ್ರ ಗಮನಹರಿಸುತ್ತಿದೆ: ಜಿ20 ಡಿಜಿಟಲ್ ಎಕಾನಮಿ ಸಚಿವರ ಸಭೆಯಲ್ಲಿ ಅಶ್ವಿನಿ ವೈಷ್ಣವ್

'ಮಹಿಳೆ ಮತ್ತು ಮಕ್ಕಳ ವಿರುದ್ಧ ಸೈಬರ್ ಅಪರಾಧ ತಡೆ (CCPWC)' ಯೋಜನೆಯಡಿಯಲ್ಲಿ ಸೈಬರ್ ವಿಧಿವಿಜ್ಞಾನ-ಕಮ್-ತರಬೇತಿ ಪ್ರಯೋಗಾಲಯಗಳು, ಜೂನಿಯರ್ ಸೈಬರ್ ಸಲಹೆಗಾರರ ​​ನೇಮಕ, ಮತ್ತು LEA ಗಳ ಸಿಬ್ಬಂದಿ, ಸಾರ್ವಜನಿಕ ಅಭಿಯೋಜಕರು ಮತ್ತು ನ್ಯಾಯಾಂಗ ಅಧಿಕಾರಿಗಳ ತರಬೇತಿಗಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಗೃಹ ಸಚಿವಾಲಯ ರೂ. 131.60 ಕೋಟಿಗಳ ಆರ್ಥಿಕ ನೆರವು ನೀಡಿದೆ ಎಂದು ಸಚಿವರು ತಿಳಿಸಿದರು.

ಇಲ್ಲಿಯವರೆಗೆ 24,600 LEA ಸಿಬ್ಬಂದಿ, ನ್ಯಾಯಾಂಗ ಅಧಿಕಾರಿಗಳು ಮತ್ತು ಪ್ರಾಸಿಕ್ಯೂಟರ್‌ಗಳಿಗೆ 33 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರಯೋಗಾಲಯಗಳಲ್ಲಿ ಸೈಬರ್-ಅಪರಾಧದ ಅರಿವು, ತನಿಖೆ ಮತ್ತು ವಿಧಿವಿಜ್ಞಾನದ ಕುರಿತು ತರಬೇತಿಯನ್ನು ನೀಡಲಾಗಿದೆ ಎಂದು ಸಚಿವರು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com