Delhi coaching center tragedy: ''ನರಕಯಾತನೆಯ ಜೀವನ ನಡೆಸುತ್ತಿದ್ದೇವೆ''; ಸಿಜೆಐಗೆ IAS ಆಕಾಂಕ್ಷಿ ಪತ್ರ

ದೆಹಲಿಯ ರಾಜೇಂದ್ರ ನಗರ, ಮುಖರ್ಜಿ ನಗರ ಮತ್ತು ಇತರ ಪ್ರದೇಶಗಳಲ್ಲಿನ ವಿದ್ಯಾರ್ಥಿಗಳು ಕಳಪೆ ಮೂಲಸೌಕರ್ಯ, ಒಳಚರಂಡಿ ಮತ್ತು ಇತರ ಸಮಸ್ಯೆಗಳಿಂದ ವಿದ್ಯಾರ್ಥಿಗಳು ಎದುರಿಸುತ್ತಿರುವ ಅಗ್ನಿಪರೀಕ್ಷೆಯನ್ನು ಐಎಎಸ್ ಆಕಾಂಕ್ಷಿ ಅವಿನಾಶ್ ದುಬೆ ಮುಖ್ಯ ನ್ಯಾಯಮೂರ್ತಿಗೆ ವಿವರಿಸಿದ್ದಾರೆ.
Delhi coaching centre tragedy
ದೆಹಲಿ ಕೋಚಿಂಗ್ ಸೆಂಟರ್ ದುರಂತ
Updated on

ನವದೆಹಲಿ: ಮೂವರು ವಿದ್ಯಾರ್ಥಿಗಳ ಸಾವು ಕಂಡ ದೆಹಲಿ ಐಎಎಸ್ ಕೋಚಿಂಗ್ ಸೆಂಟರ್ ದುರಂತಕ್ಕೆ ಸಂಬಂಧಿಸಿದಂತೆ IAS ಆಕಾಂಕ್ಷಿಯೊಬ್ಬರು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದಿದ್ದು, ''ನರಕಯಾತನೆಯ ಜೀವನ ನಡೆಸುತ್ತಿದ್ದೇವೆ'' ಎಂದು ಅಳಲು ತೋಡಿಕೊಂಡಿದ್ದಾರೆ.

ಈ ಪತ್ರದ ಪ್ರತಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಲಭ್ಯವಾಗಿದ್ದು ಪತ್ರದಲ್ಲಿ ದೆಹಲಿಯ ರಾಜೇಂದ್ರ ನಗರ, ಮುಖರ್ಜಿ ನಗರ ಮತ್ತು ಇತರ ಪ್ರದೇಶಗಳಲ್ಲಿನ ವಿದ್ಯಾರ್ಥಿಗಳು ಕಳಪೆ ಮೂಲಸೌಕರ್ಯ, ಒಳಚರಂಡಿ ಮತ್ತು ಇತರ ಸಮಸ್ಯೆಗಳಿಂದ ವಿದ್ಯಾರ್ಥಿಗಳು ಎದುರಿಸುತ್ತಿರುವ ಅಗ್ನಿಪರೀಕ್ಷೆಯನ್ನು ಐಎಎಸ್ ಆಕಾಂಕ್ಷಿ ಅವಿನಾಶ್ ದುಬೆ ಮುಖ್ಯ ನ್ಯಾಯಮೂರ್ತಿಗೆ ವಿವರಿಸಿದ್ದಾರೆ.

ಅಲ್ಲದೆ ಸಿಜೆಐಗೆ ಬರೆದ ಪತ್ರದಲ್ಲಿ ಶನಿವಾರ ಮೂವರು ಸಹ ವಿದ್ಯಾರ್ಥಿಗಳ ಅಕಾಲಿಕ ಮರಣಕ್ಕೆ ಕಾರಣವಾದ ನಗರ ಅಧಿಕಾರಿಗಳು ಮತ್ತು ಇತರರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. "ನರಕದ ಜೀವನವನ್ನು ನಡೆಸುತ್ತಿದ್ದಾರೆ" ಎಂದು ಹೇಳುವ ಅವಿನಾಶ್ ದುಬೆ ಅವರು ವಿದ್ಯಾರ್ಥಿಗಳ ಜೀವನ ಪರಿಸ್ಥಿತಿಗಳು ಭೀಕರವಾಗಿದೆ ಎಂದು ಎತ್ತಿ ತೋರಿಸಿದ್ದಾರೆ.

ಮಳೆ ಮತ್ತು ಪ್ರವಾಹದ ಸಂದರ್ಭದಲ್ಲಿ ನಗರದ ಕಳಪೆ ಒಳಚರಂಡಿ ವ್ಯವಸ್ಥೆಯಿಂದಾಗಿ ಮೊಣಕಾಲು ಉದ್ದದ ಕೊಳಚೆ ನೀರಿನಲ್ಲಿ ನಡೆಯಲಾಗುತ್ತಿದೆ. ಪ್ರವೇಶ ಪರೀಕ್ಷೆಗೆ ತಯಾರಿ ನಡೆಸುತ್ತಿರುವಾಗ, ಈ ವಿದ್ಯಾರ್ಥಿಗಳು ತಮ್ಮ ಪ್ರಾಣವನ್ನು ದೊಡ್ಡ ಅಪಾಯಕ್ಕೆ ಒಡ್ಡಿಕೊಂಡೇ ಜೀವನ ಸಾಗಿಸಬೇಕಿದೆ.

ಮಹಾನಗರ ಪಾಲಿಕೆ ಮತ್ತು ದೆಹಲಿ ಸರ್ಕಾರದ ಕಡೆಯಿಂದ ನಿರ್ಲಕ್ಷ್ಯವಿದ್ದು ಕಳಪೆ ನಿರ್ವಹಣೆ ಜನಜೀವನ ಅಸ್ಥವಸ್ಥಗೊಳಿಸಿದೆ. ಇವೆಲ್ಲವನ್ನೂ ವಿದ್ಯಾರ್ಥಿಗಳು ಸಹಿಸಿಕೊಂಡು ತಮ್ಮ ವಿದ್ಯಾಭ್ಯಾಸ ನಡೆಸುತ್ತಿದ್ದಾರೆ ಎಂದು ದುಬೆ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

Delhi coaching centre tragedy
ಕೋಚಿಂಗ್ ಸೆಂಟರ್ ಗಳನ್ನು ನಿಯಂತ್ರಿಸಲು ಕಾನೂನು ಜಾರಿಗೆ ತನ್ನಿ: ಕೇಂದ್ರಕ್ಕೆ ಕಾಂಗ್ರೆಸ್ ಒತ್ತಾಯ

ಚರಂಡಿಗಳ ಮುಚ್ಚುವಿಕೆಯಿಂದಾಗಿ ಪ್ರವಾಹದ ನೀರು ಕಟ್ಟಡಗಳಿಗೆ ಪ್ರವೇಶಿಸುತ್ತದೆ ಮತ್ತು ಅವರು ಮೊಣಕಾಲು ಆಳದ ಚರಂಡಿ ನೀರಿನಲ್ಲಿ ನಡೆಯಬೇಕಾಗಿದೆ. ಇಂತಹ ಕೇಂದ್ರಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಆರೋಗ್ಯಕ್ಕೆ ಗಂಭೀರ ಅಪಾಯವಿದೆ. ವಿದ್ಯಾರ್ಥಿಗಳಿಗೆ ಸುರಕ್ಷಿತ ಮತ್ತು ಆರೋಗ್ಯಕರ ವಾತಾವರಣ ಬೇಕು. ಆದ್ದರಿಂದ ಅವರು ನಿರ್ಭಯವಾಗಿ ಅಧ್ಯಯನ ಮಾಡಿ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬಹುದು.

ಇಡೀ ಸಮಸ್ಯೆಯ ಬಗ್ಗೆ ತಕ್ಷಣದ ಗಮನ ಹರಿಸುವ ಅಗತ್ಯವಿದೆ. ವಿದ್ಯಾರ್ಥಿಗಳ ಮೂಲಭೂತ ಹಕ್ಕುಗಳ ರಕ್ಷಣೆಗೆ ಹೆಚ್ಚಿನ ಪ್ರಾಧಾನ್ಯತೆ ನೀಡಬೇಕು, ಆರೋಗ್ಯಕರ ಜೀವನ ನಡೆಸುವುದರೊಂದಿಗೆ ಅಧ್ಯಯನ ಮಾಡುವುದು ಅವರ ಹಕ್ಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಇನ್ನು ಈ ಪತ್ರವನ್ನು ಸಿಜೆಐ ಗಂಭೀರವಾಗಿ ಪರಿಗಣಿಸಿ ಸ್ವಯಂಪ್ರೇರಿತ ವಿಚಾರಣೆ ನಡೆಸುತ್ತಾರೆಯೇ ಅಥವಾ ಪತ್ರವನ್ನು ಕೇವಲ ಅರ್ಜಿಯಾಗಿ ಪರಿಗಣಿಸುತ್ತಾರೆಯೇ ಎಂಬುದು ಕುತೂಹಲ ಕೆರಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com