Wayanad Landslides: ಸುಮಾರು 190 ಸಾವು, 225 ಕಣ್ಮರೆ; 89 ಮೃತದೇಹ ವಶ; 1,000 ಜನರ ರಕ್ಷಣೆ

ರಕ್ಷಣಾ ಕಾರ್ಯಾಚರಣೆ ಚಿತ್ರ
ರಕ್ಷಣಾ ಕಾರ್ಯಾಚರಣೆ ಚಿತ್ರ
Updated on

ವಯನಾಡು: ಕೇರಳದ ವಯನಾಡಿನಲ್ಲಿ ಸಂಭವಿಸಿರುವ ವಿನಾಶಕಾರಿ ಭೂ ಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ ಬುಧವಾರ 190ಕ್ಕೆ ಏರಿಕೆಯಾಗಿದೆ. 225 ಜನರು ನಾಪತ್ತೆ ಕುರಿತು ವರದಿಯಾಗಿದೆ. ನೂರಾರು ಜನರು ಗಾಯಗೊಂಡಿದ್ದು, ಸಾವಿರಾರು ಜನರನ್ನು ಬೇರೆಡೆ ಸ್ಥಳಾಂತರಿಸಲಾಗಿದೆ. ನೂರಾರು ಮಂದಿ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದು, ಉಳಿದಿರುವವರ ರಕ್ಷಣೆಗಾಗಿ ರಕ್ಷಣಾ ತಂಡಗಳು ಕಾರ್ಯಾಚರಣೆಯನ್ನು ಇಂದು ಬೆಳಗ್ಗೆಯಿಂದ ಪುನರಾರಂಭಿಸಿವೆ. ಕಗ್ಗತ್ತಲು ಹಾಗೂ ಹವಾಮಾನ ವೈಫರೀತ್ಯದಿಂದಾಗಿ ಮಂಗಳವಾರ ತಡರಾತ್ರಿಯಿಂದ ರಕ್ಷಣಾ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು.

ಸೇನಾ ಸಿಬ್ಬಂದಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದು, ಇದುವರೆಗೆ ಸುಮಾರು 89 ಮೃತದೇಹಗಳನ್ನು ಹೊರತೆಗೆಯಲಾಗಿದೆ. ಸುಮಾರು 1,000 ಜನರನ್ನು ರಕ್ಷಿಸಲಾಗಿದೆ ಎಂದು ಸೇನೆ ಹೇಳಿದೆ. ಸಂತ್ರಸ್ತರಿಗೆ ನಿರ್ಣಾಯಕ ನೆರವು ನೀಡಲು ಹಲವಾರು ರಕ್ಷಣಾ ತಂಡಗಳು ಒಟ್ಟಾಗಿ ಕೆಲಸ ಮಾಡುತ್ತಿವೆ. ಸೇನೆ, ನೌಕಾಪಡೆ ಮತ್ತು ಎನ್‌ಡಿಆರ್‌ಎಫ್‌ ಸಿಬ್ಬಂದಿ ಭೂಕುಸಿತದಿಂದ ಬದುಕುಳಿದವರಿಗಾಗಿ ಕುಸಿದ ಮೇಲ್ಛಾವಣಿ ಮತ್ತು ಅವಶೇಷಗಳಡಿಯಲ್ಲಿ ಹುಡುಕುತ್ತಿದ್ದಾರೆ.

ಭೂಕುಸಿತದಿಂದ ನೆಲಸಮವಾದ ಮುಂಡಕ್ಕೈ ಕುಗ್ರಾಮದಲ್ಲಿ ರಕ್ಷಣಾ ಕಾರ್ಯಾಚರಣೆ ಪುನರಾರಂಭಗೊಂಡಾಗ, ಮನೆಗಳ ಒಳಗೆ ಕುಳಿತಿರುವ ಮತ್ತು ಮಲಗಿರುವ ಸ್ಥಿತಿಯಲ್ಲಿ ಮೃತ ದೇಹಗಳ ಭಯಾನಕ ದೃಶ್ಯಗಳು ಕಂಡುಬಂದವು. ಸೇನೆಯ ವಿವಿಧ ತುಕಡಿಗಳು ಸಂಪರ್ಕ ಕಡಿತಗೊಂಡ ಪ್ರದೇಶಗಳಿಗೆ ಇಂದು ತೆರಳಿದ್ದಾರೆ.

ತಿರುವನಂತಪುರಂ ಮತ್ತು ಬೆಂಗಳೂರಿನಿಂದ ಕ್ಯಾಲಿಕಟ್‌ಗೆ ರಸ್ತೆ ಮತ್ತು ವಿಮಾನದ ಮೂಲಕ ಸ್ಥಳಾಂತರಗೊಂಡಿವೆ. ವಿಪತ್ತು ಪರಿಹಾರ, ವೈದ್ಯಕೀಯ ತಂಡಗಳು, ಆಂಬ್ಯುಲೆನ್ಸ್‌ಗಳು ಮತ್ತು ಇತರ ಉಪಕರಣಗಳಲ್ಲಿ ಅನುಭವಿಗಳನ್ನು ಈ ಸೇನೆ ಒಳಗೊಂಡಿವೆ ಎಂದು ರಕ್ಷಣಾ ಹೇಳಿಕೆ ತಿಳಿಸಿದೆ. ಅವಶೇಷಗಳಡಿಯಲ್ಲಿ ಇನ್ನೂ ಹಲವಾರು ಜನರು ಸಿಲುಕಿದ್ದು, ಸಾವು- ನೋವಿನ ಪ್ರಮಾಣ ಹೆ್ಚ್ಚಾಗುವ ಆತಂಕವಿದೆ.

ರಕ್ಷಣಾ ಕಾರ್ಯಾಚರಣೆ ಚಿತ್ರ
ಮನಕಲಕುವ ದೃಶ್ಯಗಳು: ವಯನಾಡು ಭೂಕುಸಿತದಲ್ಲಿ ಗ್ರಾಮವೇ ನಾಶ; 100ಕ್ಕೂ ಹೆಚ್ಚು ಸಾವು!

ಬಹುತೇಕ ಎಲ್ಲಾರು ನಿದ್ರಿಸುತ್ತಿರುವಾಗ ಮಧ್ಯರಾತ್ರಿ 1:30 ರಿಂದ 4 ಗಂಟೆಯ ನಡುವೆ ಭೂಕುಸಿತ ಸಂಭವಿಸಿದ್ದು, ಬೃಹತ್ ಬಂಡೆಗಳು ಮತ್ತು ಬೇರುಸಹಿತ ಮರಗಳು ಮುಂಡಕ್ಕೈನಿಂದ ಚೂರಲ್ಮಲಾಗೆ ನುಗ್ಗಿ ತೀವ್ರ ಹಾನಿಯನ್ನುಂಟುಮಾಡಿವೆ. ಬೆಟ್ಟದ ತುದಿಯಿಂದ ಭಾರೀ ನೀರು ಬಂದ್ದರಿಂದ ಸಣ್ಣ ಇರುವಝಿಂಜಿ ನದಿ ಪ್ರವಾಹದಲ್ಲಿ ಉಕ್ಕಿ ಹರಿದಿದೆ. ಹಲವಾರು ಮನೆಗಳು ಧ್ವಂಸಗೊಂಡಿವೆ. ಒಂದು ದೇವಾಲಯ ಮತ್ತು ಮಸೀದಿ ಮುಳುಗಡೆಯಾಗಿದೆ ಮತ್ತು ಶಾಲಾ ಕಟ್ಟಡವು ತೀವ್ರವಾಗಿ ಹಾನಿಗೊಳಗಾಗಿದೆ. ವಯನಾಡಿನಲ್ಲಿ 45 ಪರಿಹಾರ ಶಿಬಿರಗಳನ್ನು ಸ್ಥಾಪಿಸಲಾಗಿದ್ದು, 3,069 ಜನರಿಗೆ ವಸತಿ ಕಲ್ಪಿಸಲಾಗಿದೆ.

ರಕ್ಷಣಾ ಕಾರ್ಯಾಚರಣೆ ಚಿತ್ರ
Wayanad landslides: ಸೇನೆ, NDRF ನಿಂದ ಶೋಧ, ರಕ್ಷಣಾ ಕಾರ್ಯ; ಸಾವಿರಕ್ಕೂ ಹೆಚ್ಚು ಜನರ ಸ್ಥಳಾಂತರ

ಈ ಮಧ್ಯೆ ಅತಿ ಹೆಚ್ಚು ಮಳೆಯ ಕಾರಣ ವಯನಾಡ್, ಇಡುಕ್ಕಿ, ತ್ರಿಶೂರ್, ಪಾಲಕ್ಕಾಡ್, ಮಲಪ್ಪುರಂ, ಕೋಝಿಕ್ಕೋಡ್, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ವಯನಾಡ್, ಉತ್ತರ ಕೇರಳದ ಗುಡ್ಡಗಾಡು ಜಿಲ್ಲೆಯಾಗಿದ್ದು, ಹಚ್ಚ ಹಸಿರಿನ ಕಾಡುಗಳು, ಬೆಟ್ಟಗಳು ಮತ್ತು ಹೊಳೆಯುವ ಜಲಪಾತಗಳಿಗೆ ಹೆಸರುವಾಸಿಯಾಗಿದೆ.

ಸುಮಾರು 8,17,000 ಜನಸಂಖ್ಯೆಯೊಂದಿಗೆ ಸ್ಥಳೀಯ ಬುಡಕಟ್ಟು ಸಮುದಾಯಗಳನ್ನು ಒಳಗೊಂಡಂತೆ ವಿವಿಧ ಸಂಸ್ಕೃತಿಗಳಿಗೆ ನೆಲೆಯಾಗಿದೆ. ಮಂಗಳವಾರದ ದುರಂತವು 2018 ರ ಪ್ರವಾಹದ ನಂತರ ಕೇರಳದಲ್ಲಿ ಸಂಭವಿಸಿದ ಅತ್ಯಂತ ವಿನಾಶಕಾರಿ ಘಟನೆಯಾಗಿದೆ. ಇದು ಸುಮಾರು 500 ಜನರನ್ನು ಬಲಿ ತೆಗೆದುಕೊಂಡು, ರಾಜ್ಯದ 'ಶತಮಾನದ ಪ್ರವಾಹ' ಎಂದು ಕರೆಯಲ್ಪಟ್ಟಿದೆ.

ಇತರ ಮಾಹಿತಿ:

ಶಿಬಿರಗಳ ಒಟ್ಟು ಸಂಖ್ಯೆ- 74

ಶಿಬಿರಗಳಲ್ಲಿ ಪುನರ್ವಸತಿ ಪಡೆದ ಒಟ್ಟು ಜನರ ಸಂಖ್ಯೆ- 7,093

ಒಟ್ಟು ಕುಟುಂಬಗಳ ಸಂಖ್ಯೆ - 1,726

ಪುರುಷರ ಸಂಖ್ಯೆ - 2,605

ಮಹಿಳೆಯರ ಸಂಖ್ಯೆ- 2,966

ಮಕ್ಕಳ ಸಂಖ್ಯೆ - 1,522

ಗರ್ಭಿಣಿಯರ ಸಂಖ್ಯೆ - 15

ಮಾನಂತವಾಡಿ ಪುರಸಭೆ

ಶಿಬಿರಗಳ ಒಟ್ಟು ಸಂಖ್ಯೆ- 215

ಪುನರ್ವಸತಿ ಕುಟುಂಬಗಳು - 62

ಪುರುಷರ ಸಂಖ್ಯೆ - 64

ಸ್ತ್ರೀಯರ ಸಂಖ್ಯೆ- 113

ಮಕ್ಕಳ ಸಂಖ್ಯೆ - 38

ಗರ್ಭಿಣಿ ಮಹಿಳೆಯರ ಸಂಖ್ಯೆ -0

ಕಲ್ಪಟ ಪುರಸಭೆ

ಶಿಬಿರಗಳ ಒಟ್ಟು ಸಂಖ್ಯೆ- 633

ಪುನರ್ವಸತಿ ಕುಟುಂಬಗಳು - 165

ಪುರುಷರ ಸಂಖ್ಯೆ -245

ಸ್ತ್ರೀಯರ ಸಂಖ್ಯೆ- 260

ಮಕ್ಕಳ ಸಂಖ್ಯೆ -128

ಗರ್ಭಿಣಿಯರ ಸಂಖ್ಯೆ - 4

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com