ಬಿಸಿಗಾಳಿ ಆರ್ಭಟ: ಒಡಿಶಾದಲ್ಲಿ ಹೀಟ್‌ಸ್ಟ್ರೋಕ್ ನಿಂದ 45 ಮಂದಿ ಸಾವು

ಒಡಿಶಾದಲ್ಲಿ ಬಿಸಿಗಾಳಿಯ ಆರ್ಭಟ ಹೆಚ್ಚಾಗಿದ್ದು, ಕಳೆದ 24 ಗಂಟೆಗಳಲ್ಲಿ 45 ಮಂದಿ ಹೀಟ್‌ಸ್ಟ್ರೋಕ್ ನಿಂದ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಭುವನೇಶ್ವರ: ಒಡಿಶಾದಲ್ಲಿ ಬಿಸಿಗಾಳಿಯ ಆರ್ಭಟ ಹೆಚ್ಚಾಗಿದ್ದು, ಕಳೆದ 24 ಗಂಟೆಗಳಲ್ಲಿ 45 ಮಂದಿ ಹೀಟ್‌ಸ್ಟ್ರೋಕ್ ನಿಂದ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಬಿಸಿಲಿನ ತಾಪಕ್ಕೆ ಬಲಿಯಾದವರ ಸಂಖ್ಯೆ 141ಕ್ಕೆ ಏರಿಕೆಯಾಗಿದೆ.

ವಿಶೇಷ ಪರಿಹಾರ ಆಯುಕ್ತರ(ಎಸ್‌ಆರ್‌ಸಿ) ಕಚೇರಿಯ ಪ್ರಕಾರ, ಕಳೆದ 72 ಗಂಟೆಗಳಲ್ಲಿ ರಾಜ್ಯದಲ್ಲಿ ಒಟ್ಟು 99 ಸಾವುಗಳು ವರದಿಯಾಗಿವೆ.

ಕಳೆದ ಮೂರು ದಿನಗಳಲ್ಲಿ ಸಂಭವಿಸಿದ ಸಾವುಗಳಲ್ಲಿ 20 ಮಂದಿಯ ಮರಣೋತ್ತರ ಪರೀಕ್ಷೆ ಮತ್ತು ಜಂಟಿ ತನಿಖಾ ವರದಿಗಳ ಆಧಾರದ ಮೇಲೆ ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಸಾವುಗಳನ್ನು ಖಚಿತಪಡಿಸಿದ್ದಾರೆ. ಎರಡು ಪ್ರಕರಣಗಳಲ್ಲಿ ಸನ್‌ಸ್ಟ್ರೋಕ್‌ನಿಂದ ಮೃತಪಟ್ಟಿಲ್ಲ ಎಂದು ಹೇಳಿದ್ದಾರೆ.

ಸಾಂದರ್ಭಿಕ ಚಿತ್ರ
ಬಿಹಾರದಲ್ಲಿ ಬಿಸಿಗಾಳಿ ಆರ್ಭಟ: ಶಾಲೆಗಳು, ಕೋಚಿಂಗ್ ಸೆಂಟರ್‌, ಅಂಗನವಾಡಿಗಳಿಗೆ ರಜೆ ಘೋಷಣೆ

"ಈ ಬೇಸಿಗೆಯಲ್ಲಿ, ವಿವಿಧ ಜಿಲ್ಲೆಗಳಲ್ಲಿ 141 ಸನ್‌ಸ್ಟ್ರೋಕ್ ಸಾವುಗಳ ವರದಿಯಾಗಿವೆ. ಇಲ್ಲಿಯವರೆಗೆ 26 ಸಾವುಗಳು ಸನ್‌ಸ್ಟ್ರೋಕ್‌ನಿಂದ ಮತ್ತು ಎಂಟು ಮಂದಿ ಇತರ ಕಾರಣಗಳಿಂದ ಮೃತಪಟ್ಟಿದ್ದಾರೆ ಎಂದು ಖಚಿತಪಡಿಸಲಾಗಿದೆ” ಎಂದು ಎಸ್‌ಆರ್‌ಸಿ ಕಚೇರಿ ತಿಳಿಸಿದೆ.

ಜಿಲ್ಲಾ ಮಟ್ಟದಲ್ಲಿ ಸುಮಾರು 107 ಆಪಾದಿತ ಸಾವಿನ ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ.

ಏತನ್ಮಧ್ಯೆ, ಒಡಿಶಾದಲ್ಲಿ ಇನ್ನೂ ಎರಡು ದಿನಗಳ ಕಾಲ ಬಿಸಿಗಾಳಿ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಸೋಮವಾರ ಬರ್ಗಢ್, ಬಲಂಗೀರ್, ಕಲಹಂಡಿ, ನುವಾಪಾದ ಮತ್ತು ಸೋನೆಪುರ್ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಹೀಟ್‌ವೇವ್ ಮುಂದುವರೆಯುವ ನಿರೀಕ್ಷೆಯಿದೆ ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com