ನವದೆಹಲಿ: ಲೋಕಸಭಾ ಚುನಾವಣೋತ್ತರ ಸಮೀಕ್ಷೆಗಳ ನಂತರದ ಸುದ್ದಿಗಳನ್ನು ನಂಬುವುದಾದರೆ, ಕೇಂದ್ರದಲ್ಲಿ ಎನ್ ಡಿಎ ಅಧಿಕಾರಕ್ಕೆ ಬಂದಲ್ಲಿ ಬಿಹಾರ ಸಿಎಂ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ ನೀಡುವ ಸಾಧ್ಯತೆ ಇದೆ.
ಈ ಬಾರಿ ನಿತೀಶ್ ಕುಮಾರ್ ರಾಜೀನಾಮೆ ನೀಡಿದರೆ, ಮತ್ತೆ ಪಕ್ಷಾಂತರ ಮಾಡಿ, ಎನ್ ಡಿಎ ತೊರೆದು INDI ಮೈತ್ರಿಕೂಟ ಸೇರಿ ಸಿಎಂ ಆಗಿ ಮುಂದುವರೆಯಲಿದ್ದಾರಾ? ಎಂದು ಹುಬ್ಬೇರಿಸಬೇಡಿ.
ವಿಶ್ಲೇಷಕರ ಪ್ರಕಾರ, ಜೆಡಿಯು ನಾಯಕ ಈ ಬಾರಿ ಬಿಹಾರ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿಯೂ ಎನ್ ಡಿಎ ಮೈತ್ರಿಕೂಟದಲ್ಲೇ ಉಳಿಯಲಿದ್ದಾರೆ. ಬಿಹಾರದಲ್ಲಿ ನಿತೀಶ್ ರಾಜೀನಾಮೆಯಿಂದ ತೆರವಾಗುವ ಸ್ಥಾನಕ್ಕೆ, ಒಬಿಸಿ ವರ್ಗಕ್ಕೆ ಸೇರಿದ ಡಿಸಿಎಂ ಸಾಮ್ರಾಟ್ ಚೌಧರಿ ನೇಮಕವಾಗುವ ಸಾಧ್ಯತೆ ಇದೆ.
ಈ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಬಿಜೆಪಿ ಅಥವಾ ಜೆಡಿಯು ಪ್ರತಿಕ್ರಿಯೆ ನೀಡಿಲ್ಲ. ಕೆಲವರು ಇದನ್ನು ಕೇವಲ ವದಂತಿಯಷ್ಟೆ ಎಂದು ಹೇಳಿದ್ದಾರೆ. ಇವೆಲ್ಲಾ ಊಹಾಪೋಹಗಳಿಗೆ ಪುಷ್ಟಿ ನೀಡುವಂತೆ ನಿತೀಶ್ ಕುಮಾರ್ ಇಂದು ದೆಹಲಿಗೆ ತೆರಳಿರುವುದು ಮತ್ತಷ್ಟು ಕುತೂಹಲ ಮೂಡಿಸಿದೆ.
ಸೋಮವಾರ ಬೆಳಿಗ್ಗೆ ನಿತೀಶ್ ಕುಮಾರ್ 7 ಲೋಕಕಲ್ಯಾಣ್ ಮಾರ್ಗ್ ಗೆ ತಲುಪಿದ್ದು ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದಾರೆ.
ಇದು ಸಿಎಂ ಹಾಗೂ ಪ್ರಧಾನಿ ನಡುವಿನ ಸೌಹಾರ್ದಯುತ ಭೇಟಿ ಎಂದು ಹೇಳಲಾಗುತ್ತಿದೆಯಾದರೂ ಮೋದಿ 3.0 ಸರ್ಕಾರದ ಸಚಿವರನ್ನು ಆಯ್ಕೆ ಮಾಡುವ ಸಂಬಂಧ ಈಗಾಗಲೇ ಬಿಜೆಪಿ ರಾಷ್ಟ್ರಾಧ್ಯಕ್ಷ ನಡ್ಡಾಗೆ ಪಕ್ಷದ ಎಲ್ಲಾ ಅಭ್ಯರ್ಥಿಗಳು ತಲುಪಿಸಬೇಕಿರುವ 5 ಪುಟಗಳ ಪತ್ರ ಹಂಚಿಕೆ ಮಾಡಿರುವ ಬೆನ್ನಲ್ಲೇ ನಿತೀಶ್ ಕುಮಾರ್ ದೆಹಲಿಗೆ ಭೇಟಿ ನೀಡುರುವುದು ಮಹತ್ವ ಪಡೆದುಕೊಂಡಿದೆ.
ನಿತೀಶ್ ಕುಮಾರ್ ಒಂದು ವೇಳೆ ಕೇಂದ್ರ ಸಚಿವ ಸಂಪುಟ ಸೇರಿದರೆ, ರೈಲ್ವೆ ಖಾತೆ ಪಡೆಯುತ್ತಾರಾ? ಎಂಬ ಊಹಾಪೋಹಗಳೂ ಮೂಡಿವೆ.
Advertisement