ಆಂಧ್ರ ವಿಧಾನಸಭೆ ಚುನಾವಣೆಯಲ್ಲಿ NDA ಗೆಲುವು; ಪವನ್ ಕಲ್ಯಾಣ್‌ 'ಮ್ಯಾನ್ ಆಫ್ ದಿ ಮ್ಯಾಚ್'!

ಜನಸೇನಾ ಮುಖ್ಯಸ್ಥ ಹಾಗೂ ದಕ್ಷಿಣ ಭಾರತದ ಸೂಪರ್‌ಸ್ಟಾರ್ ಪವನ್ ಕಲ್ಯಾಣ್ ಅವರು ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಪಿಠಾಪುರಂ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ.
ಪವನ್ ಕಲ್ಯಾಣ್-ಚಂದ್ರಬಾಬು ನಾಯ್ಡು
ಪವನ್ ಕಲ್ಯಾಣ್-ಚಂದ್ರಬಾಬು ನಾಯ್ಡುTNIE

ಅಮರಾವತಿ: ಜನಸೇನಾ ಮುಖ್ಯಸ್ಥ ಹಾಗೂ ದಕ್ಷಿಣ ಭಾರತದ ಸೂಪರ್‌ಸ್ಟಾರ್ ಪವನ್ ಕಲ್ಯಾಣ್ ಅವರು ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಪಿಠಾಪುರಂ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ.

YSRCP ಅಭ್ಯರ್ಥಿ ವಂಗ ಗೀತಾ ವಿಶ್ವನಾಥ್ ಅವರನ್ನು 70,279 ಮತಗಳ ಭಾರಿ ಅಂತರದಿಂದ ಸೋಲಿಸಿದ್ದಾರೆ. ಆಂಧ್ರಪ್ರದೇಶದಲ್ಲಿ ಪವನ್ ಕಲ್ಯಾಣ್ ಅವರ ಪಕ್ಷವಾದ ಜನಸೇನಾ, ಟಿಡಿಪಿ ಮತ್ತು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುತ್ತಿದೆ. ಆಂಧ್ರಪ್ರದೇಶದ 21 ಕ್ಷೇತ್ರಗಳಲ್ಲಿ ಎನ್‌ಡಿಎ ಸೇರಿ ಜನಸೇನಾ ಪಕ್ಷ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಈ 21 ಕ್ಷೇತ್ರಗಳಲ್ಲೂ ಜನಸೇನಾ ಪಕ್ಷ ಗೆಲುವು ಸಾಧಿಸುತ್ತಿದ್ದು ಎರಡು ಲೋಕಸಭೆ ಕ್ಷೇತ್ರಗಳಲ್ಲೂ ಗೆಲುವು ಸಾಧಿಸಲಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ವಿಧಾನಸಭೆಯಲ್ಲಿ 2 ಸ್ಥಾನಗಳಲ್ಲಿ ಗೆದ್ದಿದ್ದ ಜನಸೇನಾ ಪಕ್ಷ ತೀವ್ರ ಮುಖಭಂಗಕ್ಕೆ ಗುರಿಯಾಗಿತ್ತು.

ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಪಕ್ಷ (ಟಿಡಿಪಿ) ಪುನರಾಗಮನ ಖಚಿತ ಎಂದು ವಿಧಾನಸಭಾ ಚುನಾವಣೆಯ ಎಣಿಕೆಯ ಟ್ರೆಂಡ್‌ಗಳು ತೋರಿಸುತ್ತಿವೆ. ನಾಯ್ಡು ಜೂನ್ 9ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಪಕ್ಷ ಘೋಷಿಸಿದೆ. ಪಕ್ಷದ ಕೇಂದ್ರ ಕಚೇರಿಯಲ್ಲಿ ಸಂಭ್ರಮಾಚರಣೆ ಆರಂಭವಾಗಿದೆ. ಟಿಡಿಪಿಯ ಬಿರುಗಾಳಿಯಿಂದಾಗಿ ಆಡಳಿತಾರೂಢ ವೈಎಸ್‌ಆರ್ ಕಾಂಗ್ರೆಸ್ ಈ ಬಾರಿ ಸಿಎಂ ಕುರ್ಚಿ ಕಳೆದುಕೊಳ್ಳಲಿದೆ. ಮೇ 13 ರಂದು ರಾಜ್ಯದಲ್ಲಿ ಲೋಕಸಭೆ ಚುನಾವಣೆಯ ಜೊತೆಗೆ ವಿಧಾನಸಭೆ ಚುನಾವಣೆಯೂ ನಡೆದಿತ್ತು.

ಪವನ್ ಕಲ್ಯಾಣ್-ಚಂದ್ರಬಾಬು ನಾಯ್ಡು
ನಿತೀಶ್ ಗೆ ಉಪ ಪ್ರಧಾನಿ ಪಟ್ಟ; ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನ; ಚಂದ್ರಬಾಬುಗೆ INDIA ಬಿಗ್ ಆಫರ್?

ಆಂಧ್ರಪ್ರದೇಶದಲ್ಲಿ ವೈಎಸ್‌ಆರ್‌ಸಿಪಿ ಏಕಾಂಗಿಯಾಗಿ ಎಲ್ಲಾ 175 ಸ್ಥಾನಗಳಲ್ಲಿ ಸ್ಪರ್ಧಿಸಿದ್ದರೆ, ಟಿಡಿಪಿ 144 ಸ್ಥಾನಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಕ್ಷ (ಜೆಎಸ್‌ಪಿ) 21 ಸ್ಥಾನಗಳಲ್ಲಿ ಮತ್ತು ಬಿಜೆಪಿ 10 ಸ್ಥಾನಗಳಲ್ಲಿ ಸ್ಪರ್ಧಿಸಿವೆ. ಪ್ರಮುಖ ಸ್ಪರ್ಧಿಗಳಲ್ಲಿ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ (ವೈಎಸ್‌ಆರ್‌ಸಿಪಿ), ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು, ಜೆಎಸ್‌ಪಿಯ ಪವನ್ ಕಲ್ಯಾಣ್ ಸೇರಿದ್ದಾರೆ.

ತಮ್ಮ ಕಿರಿಯ ಸಹೋದರ ಪವನ್ ಕಲ್ಯಾಣ್ ಗೆ ಚಿರಂಜೀವಿ ಕೂಡ ಅಭಿನಂದನೆ ಸಲ್ಲಿಸಿದ್ದಾರೆ. ಚಿರಂಜೀವಿ ಎಕ್ಸ್‌ನಲ್ಲಿ 'ನನ್ನ ಪ್ರೀತಿಯ ಕಲ್ಯಾಣ್ ಬಾಬು, ಆಂಧ್ರಪ್ರದೇಶದ ಜನರು ನೀಡಿದ ಬೃಹತ್ ಮತ್ತು ಅದ್ಭುತ ಜನಾದೇಶದಿಂದ ನಾನು ರೋಮಾಂಚನಗೊಂಡಿದ್ದೇನೆ. ನೀವು (ಪವನ್ ಕಲ್ಯಾಣ್) ನಿಜವಾಗಿಯೂ ಈ ಚುನಾವಣೆಯ ಗೇಮ್ ಚೇಂಜರ್ ಆಗಿದ್ದೀರಿ... ನೀವೇ ಮ್ಯಾನ್ ಆಫ್ ದಿ ಮ್ಯಾಚ್. ಆಂಧ್ರಪ್ರದೇಶದ ಜನರ ಬಗ್ಗೆ ನಿಮ್ಮ ಆಳವಾದ ಕಾಳಜಿ, ನಿಮ್ಮ ದೂರದೃಷ್ಟಿ, ರಾಜ್ಯದ ಅಭಿವೃದ್ಧಿಯ ನಿಮ್ಮ ಬಯಕೆ, ನಿಮ್ಮ ತ್ಯಾಗ, ನಿಮ್ಮ ರಾಜಕೀಯ ತಂತ್ರಗಳು ಈ ಅದ್ಭುತ ಫಲಿತಾಂಶದಲ್ಲಿ ಪ್ರತಿಫಲಿಸುತ್ತದೆ. ನಿನ್ನ ಬಗ್ಗೆ ನನಗೆ ಹೆಮ್ಮೆ ಇದೆ. ಅಭಿನಂದನೆಗಳು... ಎಂದು ಟ್ವೀಟಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com