ನೀವು ಪ್ರೀತಿ, ಸತ್ಯ ಮತ್ತು ಮಾನವೀಯತೆಯಿಂದ ಹೋರಾಡಿದ್ದೀರಿ: ರಾಹುಲ್ ಗಾಂಧಿಗೆ ಪ್ರಿಯಾಂಕಾ ಗಾಂಧಿ ಭಾವನಾತ್ಮಕ ಸಂದೇಶ

ಲೋಕಸಭಾ ಚುನಾವಣೆಯ ಫಲಿತಾಂಶ ನೆನ್ನೆಯಷ್ಟೇ ಪ್ರಕಟಗೊಂಡಿದ್ದು, ಕಾಂಗ್ರೆಸ್ ಉತ್ತಮ ಪ್ರದರ್ಶನ ನೀಡಿದೆ. ಎಂತದ್ದೇ ಪರಿಸ್ಥಿತಿ ಎದುರಾದರು ತಮ್ಮ ಸಹೋದರ ರಾಹುಲ್ ಗಾಂಧಿ ಎಂದಿಗೂ ಹಿಂದೆ ಸರಿಯಲಿಲ್ಲ ಮತ್ತು ಸತ್ಯಕ್ಕಾಗಿ ಹೋರಾಡುವುದನ್ನು ನಿಲ್ಲಿಸಲಿಲ್ಲ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಬುಧವಾರ ಹೇಳಿದ್ದಾರೆ.
ರಾಹುಲ್ ಗಾಂಧಿ - ಪ್ರಿಯಾಂಕಾ ಗಾಂಧಿ
ರಾಹುಲ್ ಗಾಂಧಿ - ಪ್ರಿಯಾಂಕಾ ಗಾಂಧಿ
Updated on

ನವದೆಹಲಿ: ಲೋಕಸಭಾ ಚುನಾವಣೆಯ ಫಲಿತಾಂಶ ನೆನ್ನೆಯಷ್ಟೇ ಪ್ರಕಟಗೊಂಡಿದ್ದು, ಕಾಂಗ್ರೆಸ್ ಉತ್ತಮ ಪ್ರದರ್ಶನ ನೀಡಿದೆ. ಎಂತದ್ದೇ ಪರಿಸ್ಥಿತಿ ಎದುರಾದರು ತಮ್ಮ ಸಹೋದರ ರಾಹುಲ್ ಗಾಂಧಿ ಎಂದಿಗೂ ಹಿಂದೆ ಸರಿಯಲಿಲ್ಲ ಮತ್ತು ಸತ್ಯಕ್ಕಾಗಿ ಹೋರಾಡುವುದನ್ನು ನಿಲ್ಲಿಸಲಿಲ್ಲ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಬುಧವಾರ ಹೇಳಿದ್ದಾರೆ.

ಎಕ್ಸ್‌ನಲ್ಲಿ ತನ್ನ ಸಹೋದರನಿಗೆ ಸಂದೇಶ ನೀಡಿರುವ ಪ್ರಿಯಾಂಕಾ ಗಾಂಧಿ ವಾದ್ರಾ, 'ಅವರು ನಿಮಗೆ ಏನೇ ಹೇಳಿದರೂ ಮತ್ತು ಮಾಡಿದರೂ ನೀವು ನಿಂತಿದ್ದೀರಿ, ಯಾವುದೇ ವಿರೋಧಾಭಾಸಗಳಿದ್ದರೂ ನೀವು ಎಂದಿಗೂ ಹಿಂದೆ ಸರಿಯಲಿಲ್ಲ, ಅವರು ನಿಮ್ಮ ನಂಬಿಕೆಯನ್ನು ಎಷ್ಟು ಅನುಮಾನಿಸಿದರೂ ನೀವು ನಂಬುವುದನ್ನು ನಿಲ್ಲಿಸಲಿಲ್ಲ. ಅವರು ಹರಡಿದ ಸುಳ್ಳಿನ ಅಗಾಧ ಪ್ರಚಾರದ ಹೊರತಾಗಿಯೂ ನೀವು ಸತ್ಯಕ್ಕಾಗಿ ಹೋರಾಡುವುದನ್ನು ನಿಲ್ಲಿಸಲಿಲ್ಲ ಮತ್ತು ಅವರು ಪ್ರತಿದಿನ ಅದನ್ನು ನಿಮಗೆ ಉಡುಗೊರೆಯಾಗಿ ನೀಡಿದರೂ ಸಹ ಕೋಪ ಮತ್ತು ದ್ವೇಷವು ನಿಮ್ಮನ್ನು ಜಯಿಸಲು ನೀವು ಎಂದಿಗೂ ಅನುಮತಿ ನೀಡಲಿಲ್ಲ' ಎಂದು ಬರೆದಿದ್ದಾರೆ.

'ನೀವು ನಿಮ್ಮ ಹೃದಯದಲ್ಲಿನ ಪ್ರೀತಿ, ಸತ್ಯ ಮತ್ತು ದಯೆಯಿಂದ ಹೋರಾಡಿದ್ದೀರಿ. ಕೆಲವರು ಮೊದಲು ನಿಮ್ಮ ಆತ್ಮಸ್ಥೈರ್ಯವನ್ನು ಗಮನಿಸದಿದ್ದರೂ, ಅವರು ಈಗ ಅದನ್ನು ನೋಡಲು ಸಮರ್ಥರಾಗಿದ್ದಾರೆ. ಆದಾಗ್ಯೂ, ನಿಮ್ಮ ಧೈರ್ಯವನ್ನು ಯಾವಾಗಲೂ ತಿಳಿದಿರುವ ಮತ್ತು ಒಪ್ಪಿಕೊಂಡಿರುವ ಇತರರು ಇದ್ದಾರೆ. ಸೋದರ ರಾಹುಲ್ ಗಾಂಧಿ, ನಾನು ನಿಮ್ಮ ಸಹೋದರಿಯಾಗಿರುವುದಕ್ಕೆ ಹೆಮ್ಮೆಪಡುತ್ತೇನೆ' ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.

2019ರಲ್ಲಿ 52 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಕ್ಕೆ ಹೋಲಿಸಿದರೆ 2024ರ ಲೋಕಸಭೆ ಚುನಾವಣೆಯಲ್ಲಿ ವಿಪಕ್ಷಗಳ ಇಂಡಿಯಾ ಮೈತ್ರಿಕೂಟದ ಭಾಗವಾಗಿರುವ ಕಾಂಗ್ರೆಸ್ 99 ಸ್ಥಾನಗಳನ್ನು ಗೆದ್ದು, ಉತ್ತಮ ಪ್ರದರ್ಶ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com