ಕಂಗನಾ ರಣಾವತ್‌ಗೆ ಕಪಾಳಮೋಕ್ಷ: CISF ಮಹಿಳಾ ಪೇದೆ ವಿರುದ್ಧ FIR ದಾಖಲು

ಚಂಡೀಗಢ ವಿಮಾನ ನಿಲ್ದಾಣದಲ್ಲಿ ಬಿಜೆಪಿ ಸಂಸದೆ ಕಂಗನಾ ರಣಾವತ್‌ಗೆ ಕಪಾಳಮೋಕ್ಷ ಮಾಡಿದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಮಹಿಳಾ ಪೇದೆಯನ್ನು ಇನ್ನೂ ಬಂಧಿಸಿಲ್ಲ. ಆದರೆ, ಐಪಿಸಿ ಸೆಕ್ಷನ್ 321 ಮತ್ತು 341 ರ ಅಡಿಯಲ್ಲಿ ಕಾನ್‌ಸ್ಟೆಬಲ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕಂಗನಾ ರಣಾವತ್ - ಸಿಐಎಸ್‌ಎಫ್ ಮಹಿಳಾ ಪೇದೆ
ಕಂಗನಾ ರಣಾವತ್ - ಸಿಐಎಸ್‌ಎಫ್ ಮಹಿಳಾ ಪೇದೆ
Updated on

ಚಂಡೀಗಢ: ಚಂಡೀಗಢ ವಿಮಾನ ನಿಲ್ದಾಣದಲ್ಲಿ ಬಿಜೆಪಿ ಸಂಸದೆ ಕಂಗನಾ ರಣಾವತ್‌ಗೆ ಕಪಾಳಮೋಕ್ಷ ಮಾಡಿದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಮಹಿಳಾ ಪೇದೆಯನ್ನು ಇನ್ನೂ ಬಂಧಿಸಿಲ್ಲ. ಆದರೆ, ಐಪಿಸಿ ಸೆಕ್ಷನ್ 321 ಮತ್ತು 341 ರ ಅಡಿಯಲ್ಲಿ ಕಾನ್‌ಸ್ಟೆಬಲ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಮೊಹಾಲಿ ವಿಮಾನ ನಿಲ್ದಾಣ ಪೊಲೀಸರು ಐಪಿಸಿ ಸೆಕ್ಷನ್ 321 ಮತ್ತು 341ರ ಅಡಿಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನ್‌ಸ್ಟೆಬಲ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಇದುವರೆಗೂ ಆಕೆಯನ್ನು ಬಂಧಿಸಿಲ್ಲ. ಇದು ಜಾಮೀನು ನೀಡಬಹುದಾದ ಅಪರಾಧವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶುಕ್ರವಾರ ಮುಕ್ತಾಯಗೊಂಡ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಸಭೆಯಲ್ಲಿ ಭಾಗವಹಿಸಲು ಕಂಗನಾ ದೆಹಲಿಗೆ ವಿಮಾನ ಏರಲು ಹೊರಟಿದ್ದಾಗ ಜೂನ್ 6 ರಂದು ಮಧ್ಯಾಹ್ನ 3.30ರ ಸುಮಾರಿಗೆ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಸಿಐಎಸ್‌ಎಫ್ ಕಾನ್‌ಸ್ಟೆಬಲ್‌ ಕಂಗನಾ ಅವರಿಗೆ ಕಪಾಳಮೋಕ್ಷ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಈಮಧ್ಯೆ, ಈ ವಿಷಯದ ಕುರಿತು ಮಾತನಾಡಿದ ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಸಂಸದೆ ಹರ್‌ಸಿಮ್ರತ್ ಕೌರ್ ಬಾದಲ್, ಕಂಗನಾ ಅವರ ನಡವಳಿಕೆಯನ್ನು ಟೀಕಿಸಿದ್ದಾರೆ. ಜವಾಹ್ದಾರಿಯುತ ಸ್ಥಾನದಲ್ಲಿರುವವರು ಮೂರ್ಖ ಮಾತುಗಳನ್ನು ಹೇಳಿದಾಗ ಮತ್ತು ಅನಗತ್ಯ ಹೇಳಿಕೆಗಳನ್ನು ನೀಡಿದಾಗ ಯಾವಾಗಲೂ ಅದಕ್ಕೆ ಪ್ರತಿಕ್ರಿಯೆ ಇರುತ್ತದೆ ಎಂದು ಹೇಳಿದ್ದಾರೆ.

ಕಂಗನಾ ರಣಾವತ್ - ಸಿಐಎಸ್‌ಎಫ್ ಮಹಿಳಾ ಪೇದೆ
ಬಿಜೆಪಿ ಸಂಸದೆ ಕಂಗನಾ ರಣಾವತ್ ಗೆ CISF ಯೋಧೆ ಕಪಾಳಮೋಕ್ಷ; ವಿಡಿಯೋ ವೈರಲ್!

ಕಂಗನಾ ರಣಾವತ್ ತನ್ನ ಹೈಕಮಾಂಡ್ ಅನ್ನು ಮೆಚ್ಚಿಸಲು ಪ್ರಯತ್ನಿಸುವ ಬದಲು ತನ್ನ ಜವಾಬ್ದಾರಿಯನ್ನು ಅರ್ಥಮಾಡಿಕೊಳ್ಳಬೇಕು. ನಟಿಯಾಗಿ ಆಕೆಯನ್ನು ಅನೇಕ ಜನರು ಹಿಂಬಾಲಿಸುತ್ತಾರೆ. ಆದರೆ, ಮೂರ್ಖ ಮಾತುಗಳನ್ನು ಹೇಳಿದಾಗ ಮತ್ತು ಅನಗತ್ಯ ಹೇಳಿಕೆಗಳನ್ನು ನೀಡಿದಾಗ ಅದಕ್ಕೊಂದು ಪ್ರತಿಕ್ರಿಯೆ ಉಂಟಾಗುತ್ತದೆ. ನೀವು ಬೇರೆಯವರ ತಾಯಂದಿರಿಗೆ ಹೇಳಿದಂತಹ ಮಾತುಗಳನ್ನು ನಿಮ್ಮ ತಾಯಿಗೆ ಯಾರಾದರೂ ಹೇಳಿದರೆ, ನಿನಗೂ ಅದು ಇಷ್ಟವಾಗುವುದಿಲ್ಲ ಎಂದು ಬಾದಲ್ ಹೇಳಿದರು.

ನಿಮ್ಮ ತಪ್ಪನ್ನು ನೋಡುವ ಬದಲು ನೀವು ಅವರನ್ನು ಭಯೋತ್ಪಾದಕರು ಎಂದು ಕರೆಯುತ್ತಿದ್ದೀರಿ. ವಿಷ ಹರಡುವುದು ನಿಮ್ಮ ಪಕ್ಷದ ನೀತಿ. ವಿಷವನ್ನು ಹರಡುವ ಬದಲು ಸಿಹಿ ಹರಡಿದರೆ ಅಂತಹ ಪರಿಸ್ಥಿತಿಯನ್ನು ಎದುರಿಸಬೇಕಾಗಿಲ್ಲ ಎಂದು ಅವರು ಹೇಳಿದರು.

ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಗುರುವಾರ ಮಹಿಳಾ ಪೇದೆಯನ್ನು ಅಮಾನತುಗೊಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com