
ಕೋಲ್ಕತ್ತಾ: ವಿರೋಧ ಪಕ್ಷಗಳ ಮೈತ್ರಿಕೂಟ ಇಂಡಿಯಾ ಬಣ ಇಂದು ಸರ್ಕಾರ ರಚನೆಗೆ ಹಕ್ಕು ಮಂಡಿಸದೇ ಇರಬಹುದು, ಆದರೆ ಮುಂದಿ ಸರ್ಕಾರ ರಚನೆಗೆ ಹಕ್ಕು ಮಂಡಿಸುವುದಿಲ್ಲ ಎಂದಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶನಿವಾರ ಹೇಳಿದ್ದಾರೆ.
ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ತಮ್ಮ ಪಕ್ಷ "ಕಾದು ನೋಡುವ" ಮೋಡ್‌ನಲ್ಲಿರುತ್ತದೆ ಮತ್ತು "ದುರ್ಬಲ ಹಾಗೂ ಅಸ್ಥಿರ" ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವನ್ನು ಅಧಿಕಾರದಿಂದ ದೂರವಿಟ್ಟರೆ ನನಗೆ ಸಂತೋಷವಾಗುತ್ತದೆ ಎಂದು ಹೇಳಿದರು.
"ದೇಶಕ್ಕೆ ಬದಲಾವಣೆ ಬೇಕು; ದೇಶ ಬದಲಾವಣೆ ಬಯಸುತ್ತಿದೆ. ಈ ಜನಾದೇಶ ಬದಲಾವಣೆಗಾಗಿತ್ತು. ನಾವು ಕಾಯುತ್ತಿದ್ದೇವೆ ಮತ್ತು ಪರಿಸ್ಥಿತಿಯ ಮೇಲೆ ನಿಗಾ ಇಡುತ್ತಿದ್ದೇವೆ. ಈ ಜನಾದೇಶ ನರೇಂದ್ರ ಮೋದಿ ವಿರುದ್ಧವಾಗಿದೆ. ಆದ್ದರಿಂದ ಅವರು ಈ ಬಾರಿ ಪ್ರಧಾನಿಯಾಗಬಾರದು. ಬೇರೆಯವರು ಆಗಬೇಕಿತ್ತು. ಆದರೂ ಅವರಿಗೆ ಅಧಿಕಾರ ವಹಿಸಿಕೊಳ್ಳಲು ಅವಕಾಶ ನೀಡಲಾಗಿದೆ’’ ಎಂದು ಹೊಸದಾಗಿ ಆಯ್ಕೆಯಾದ ಟಿಎಂಸಿ ಸಂಸದರ ಸಭೆಯ ನಂತರ ಮಮತಾ ಬ್ಯಾನರ್ಜಿ ಸುದ್ದಿಗಾರರಿಗೆ ತಿಳಿಸಿದರು.
ಹೊಸ ಸರ್ಕಾರದ ಪ್ರಮಾಣ ವಚನ ಸಮಾರಂಭಕ್ಕೆ ಪಕ್ಷ ಹಾಜರಾಗುವುದಿಲ್ಲ ಎಂದು ತೃಣಮೂಲ ಕಾಂಗ್ರೆಸ್ ವರಿಷ್ಠೆ ತಿಳಿಸಿದ್ದಾರೆ.
"ಬಿಜೆಪಿಯು ಪ್ರಜಾಸತ್ತಾತ್ಮಕವಾಗಿ ಮತ್ತು ಕಾನೂನುಬಾಹಿರವಾಗಿ ಸರ್ಕಾರವನ್ನು ರಚಿಸುತ್ತಿದೆ. ಇಂದು ಇಂಡಿಯಾ ಬಣ ಸರ್ಕಾರ ರಚನೆಗೆ ಹಕ್ಕು ಮಂಡಿಸಿರಬಹುದು. ಆದರೆ ನಾಳೆ ಅದು ಹಕ್ಕು ಮಂಡಿಸುವುದಿಲ್ಲ ಎಂದು ಅರ್ಥವಲ್ಲ. ಸ್ವಲ್ಪ ಸಮಯ ಕಾಯೋಣ" ಎಂದು ಅವರು ಹೇಳಿದರು.
ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಟಿಎಂಸಿ ಸಂಸದರು, ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಹಿಂಪಡೆಯುವಂತೆ ಒತ್ತಾಯಿಸಲಿದ್ದಾರೆ ಎಂದು ಅವರು ತಿಳಿಸಿದರು.
Advertisement