
ತಿರುವನಂತಪುರ: ಬಿಜೆಪಿಯ ಏಕೈಕ ಸಂಸದ ಸುರೇಶ್ ಗೋಪಿ ಅವರಿಗೆ ಇಂದು ಭಾನುವಾರ ಬೆಳಗ್ಗೆ ನರೇಂದ್ರ ಮೋದಿಯವರಿಂದ ಕರೆ ಬಂದಿದ್ದು, ಮೋದಿ 3.0 ಸರ್ಕಾರದಲ್ಲಿ ಸಂಪುಟ ದರ್ಜೆ ಸಚಿವರಾಗಲು ಸಿದ್ಧರಾಗಿದ್ದಾರೆ.
ಪಿಎಂ ಮೋದಿ ಮತ್ತು ನಂತರ ಅಮಿತ್ ಶಾ ಇಬ್ಬರೂ ಸುರೇಶ್ ಗೋಪಿ ಅವರಿಗೆ ಕರೆ ಮಾಡಿದ್ದಾರೆ. ಪ್ರಧಾನಿ ಮೋದಿಯವರ ನಿರ್ಧಾರವನ್ನು ನಾನು ಗೌರವಿಸುತ್ತೇನೆ. ಮತ್ತು ಅದನ್ನು ಪಾಲಿಸುತ್ತಿದ್ದೇನೆ, ನನಗೆ ಯಾವ ಹುದ್ದೆ ನೀಡುತ್ತಿದ್ದಾರೆ ಎಂದು ಗೊತ್ತಿಲ್ಲ ಎಂದು ಸುರೇಶ್ ಗೋಪಿ ದೆಹಲಿಗೆ ತೆರಳುವ ಮೊದಲು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
ಕೇರಳ ರಾಜ್ಯದ ಮುಂಬರುವ ವಿಧಾನಸಭಾ ಚುನಾವಣೆಗಳ ದೃಷ್ಟಿಯಿಂದ ಕೇರಳಕ್ಕೆ ಪ್ರಾತಿನಿಧ್ಯ ನೀಡಲು ಮೋದಿ ಬಯಸುತ್ತಿದ್ದಾರೆ ಎಂದು ದಕ್ಷಿಣದ ಹಿರಿಯ ನಾಯಕರೊಬ್ಬರು ದೆಹಲಿಯಲ್ಲಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.
ದಕ್ಷಿಣದ ಇತರ ಮಂತ್ರಿಗಳು: ಶಶಿ ತರೂರ್ ಅವರ ವಿರುದ್ಧ ಸ್ಪರ್ಧಿಸಿದ್ದ ರಾಜೀವ್ ಚಂದ್ರಶೇಖರ್ ಕೂಡ ಮೋದಿ 3.0 ಸರ್ಕಾರದಲ್ಲಿ ಉಳಿಯುವ ನಿರೀಕ್ಷೆಯಿದೆ. ತಮಿಳು ನಾಡು ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ಕೂಡ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಟಿಡಿಪಿಗೆ ಒಂದು ಕ್ಯಾಬಿನೆಟ್ ಸ್ಥಾನ ಮತ್ತು ರಾಜ್ಯ ಸಚಿವ (MoS) ಸ್ಥಾನವನ್ನು ನೀಡಲಾಗಿದೆ.
ತ್ರಿಶೂರ್ ಲೋಕಸಭಾ ಸ್ಥಾನದಲ್ಲಿ ಗೆಲ್ಲವ ಮೂಲಕ ಕೇರಳದಲ್ಲಿ ಬಿಜೆಪಿಗೆ ಐತಿಹಾಸಿಕ ಗೆಲುವು ಸಾಧಿಸಿದ್ದು, ಈ ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.
Advertisement