ನೂತನ NDA ಸರ್ಕಾರದಲ್ಲಿ ಕೇರಳಕ್ಕೆ ಎರಡೆರಡು ಸಚಿವ ಸ್ಥಾನ: ಮೋದಿ ಸಂಪುಟ ಸೇರುತ್ತಿರುವ ಕ್ರೈಸ್ತ ಧರ್ಮಿಯ ಜಾರ್ಜ್ ಕುರಿಯನ್ ಯಾರು?

1980ರಲ್ಲಿ ಜನಸಂಘ ಬಿಟ್ಟು ಹೊಸದಾಗಿ ರಚನೆಯಾದ ಭಾರತೀಯ ಜನತಾ ಪಕ್ಷಕ್ಕೆ (BJP) ಸೇರಲು ಯುವಕರು ಉತ್ಸುಹಕರಾಗಿದ್ದರು. ಅದರಲ್ಲಿ ಕೇವಲ 19 ವರ್ಷ ವಯಸ್ಸಿನ ಕೊಟ್ಟಾಯಂನ ಒಂದು ಸಣ್ಣ ಹಳ್ಳಿ ಕನಕರಿಯ ಜಾರ್ಜ್ ಕುರಿಯನ್ ಸಹ ಒಬ್ಬರಾಗಿದ್ದರು.
ಜಾರ್ಜ್ ಕುರಿಯನ್
ಜಾರ್ಜ್ ಕುರಿಯನ್TNIE
Updated on

ಕೊಚ್ಚಿ: 1980ರಲ್ಲಿ ಜನಸಂಘ ಬಿಟ್ಟು ಹೊಸದಾಗಿ ರಚನೆಯಾದ ಭಾರತೀಯ ಜನತಾ ಪಕ್ಷಕ್ಕೆ (BJP) ಸೇರಲು ಯುವಕರು ಉತ್ಸುಹಕರಾಗಿದ್ದರು. ಅದರಲ್ಲಿ ಕೇವಲ 19 ವರ್ಷ ವಯಸ್ಸಿನ ಕೊಟ್ಟಾಯಂನ ಒಂದು ಸಣ್ಣ ಹಳ್ಳಿ ಕನಕರಿಯ ಜಾರ್ಜ್ ಕುರಿಯನ್ ಸಹ ಒಬ್ಬರಾಗಿದ್ದರು.

ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ್ದರು ಬಲಪಂಥೀಯ ಹಿಂದುತ್ವ ಸಂಘಟನೆಗೆ ಸೇರುವ ಅವರ ನಿರ್ಧಾರ ಆ ಸಮಯದಲ್ಲಿ ಅಪರೂಪದ ಘಟನೆಯಾಗಿದ್ದು, ಅಲ್ಲದೆ ಅಂದು ಸಂಪ್ರದಾಯವಾದಿ ಕ್ರಿಶ್ಚಿಯನ್ ಸಮುದಾಯಗಳ ವಿವಿಧ ವಲಯಗಳಿಂದ ಟೀಕೆಗೂ ಗುರಿಯಾಗಿದ್ದರು.

ಅದೇನೇ ಇದ್ದರೂ, ಈಗ ಕುರಿಯನ್ ಅವರಿಗೆ 63 ವರ್ಷ ವಯಸ್ಸಾಗಿದೆ. ಹಲವಾರು ಸವಾಲುಗಳನ್ನು ಎದುರಿಸುವ ಮೂಲಕ ತಮ್ಮ ರಾಜಕೀಯ ಆಯ್ಕೆಗಳಲ್ಲಿ ದೃಢವಾಗಿ ಉಳಿದರು. ಹೊಸ ಎನ್‌ಡಿಎ ಕ್ಯಾಬಿನೆಟ್‌ಗೆ ಅವರ ನೇಮಕವು ಅನಿರೀಕ್ಷಿತವಾಗಿದ್ದರೂ, ಕುರಿಯನ್ ಅವರ ರಾಜಕೀಯ ಚಟುವಟಿಕೆಗಳು ಮತ್ತು ಬಿಜೆಪಿಯನ್ನು ಪ್ರತಿನಿಧಿಸುವ ದೂರದರ್ಶನ ಚರ್ಚೆಗಳಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುವ ಕಾರಣದಿಂದಾಗಿ ರಾಜ್ಯದಲ್ಲಿ ಈಗಾಗಲೇ ಪರಿಚಿತ ವ್ಯಕ್ತಿಯಾಗಿದ್ದಾರೆ.

ಕೇಸರಿ ಪಕ್ಷದಲ್ಲಿ ನಾಲ್ಕು ದಶಕಗಳಿಂದ, ಕುರಿಯನ್ ಅವರು ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯತ್ವ, ಯುವಮೋರ್ಚಾದ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಮತ್ತು ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುವುದು ಸೇರಿದಂತೆ ವಿವಿಧ ಮಹತ್ವದ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಮೋದಿ ನೇತೃತ್ವದ ಕ್ಯಾಬಿನೆಟ್‌ಗೆ ಸೇರ್ಪಡೆಗೊಳ್ಳುವ ಸಮಯದಲ್ಲಿ, ಕುರಿಯನ್ ಕೋರ್ ಕಮಿಟಿ ಸದಸ್ಯ ಮತ್ತು ಬಿಜೆಪಿಯ ರಾಜ್ಯ ಘಟಕದ ಉಪಾಧ್ಯಕ್ಷರಾಗಿದ್ದರು. ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರ ಅನುವಾದಕರಾಗಿಯೂ ಕಾಣಿಸಿಕೊಳ್ಳುತ್ತಿದ್ದರು.

ಜಾರ್ಜ್ ಕುರಿಯನ್
'ಮೋದಿ ನಿರ್ಧರಿಸಿದ್ದಾರೆ, ನಾನು ಅದಕ್ಕೆ ತಲೆಬಾಗುತ್ತೇನೆ': ಕೇರಳದ ಏಕೈಕ ಬಿಜೆಪಿ ಸಂಸದ ಸುರೇಶ್ ಗೋಪಿ

ಬಿಜೆಪಿ ನಾಯಕರ ಪ್ರಕಾರ, MA, LLB ಪದವೀಧರರಾದ ಕುರಿಯನ್, ಅಲ್ಪಸಂಖ್ಯಾತರ ರಾಷ್ಟ್ರೀಯ ಆಯೋಗದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಮೊದಲ ಮಲಯಾಳಿಯಾಗಿದ್ದಾರೆ. ಈ ಹಿಂದೆ, ಅವರು ಮಾಜಿ ಕೇಂದ್ರ ರೈಲ್ವೆ ರಾಜ್ಯ ಸಚಿವ ಓ ರಾಜಗೋಪಾಲ್ ಅವರಿಗೆ ವಿಶೇಷ ಕರ್ತವ್ಯದ ಅಧಿಕಾರಿ (OSD) ಆಗಿದ್ದರು.

ಕ್ರಿಶ್ಚಿಯನ್ ಮತಗಳು ಪ್ರಮುಖವಾಗಿದ್ದ ತ್ರಿಶೂರ್ ನಲ್ಲಿ ಸುರೇಶ್ ಗೋಪಿ ಅವರ ಗೆಲುವನ್ನು ಪರಿಗಣಿಸಿ ಕ್ರೈಸ್ತ ಪ್ರಾತಿನಿಧ್ಯವನ್ನು ಖಾತ್ರಿಪಡಿಸುವ ಬಿಜೆಪಿಯ ತಂತ್ರದ ಭಾಗವಾಗಿ ಕುರಿಯನ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ. ಇನ್ನು ಕ್ರಿಶ್ಚಿಯನ್ ಸಮುದಾಯವನ್ನು ತಲುಪುವ ಮೂಲಕ ಕೇರಳದಲ್ಲಿ ತನ್ನ ನೆಲೆಯನ್ನು ಮತ್ತಷ್ಟು ಬಲಪಡಿಸುವ ಬಿಜೆಪಿಯ ಪ್ರಯತ್ನಗಳ ಭಾಗವಾಗಿ ಕುರಿಯನ್ ಸೇರ್ಪಡೆಯನ್ನು ನೋಡಲಾಗುತ್ತದೆ. ಇನ್ನು ಮೋದಿ ಸಂಪುಟದಲ್ಲಿ ಕೇರಳದ ಬಿಜೆಪಿ ಸಂಸದ ಸುರೇಶ್ ಗೋಪಿ ಸಹ ಸೇರಲಿದ್ದಾರೆ.

ಕುರಿಯನ್ ಈ ಹಿಂದೆ 2016ರ ವಿಧಾನಸಭಾ ಚುನಾವಣೆಯಲ್ಲಿ ಉಮ್ಮನ್ ಚಾಂಡಿ ವಿರುದ್ಧ ಪುತ್ತುಪಲ್ಲಿಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಅವರ ಪತ್ನಿ ಅನ್ನಕುಟ್ಟಿ, ಭಾರತೀಯ ಸೇನೆಯ ನಿವೃತ್ತ ನರ್ಸಿಂಗ್ ಅಧಿಕಾರಿಯಾಗಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com